ಗುರುವಾರ , ಡಿಸೆಂಬರ್ 3, 2020
23 °C

ವಾಣಿಜ್ಯ ಕೋರ್ಸ್‌ನಲ್ಲಿದೆ ಭವಿಷ್ಯದ ಲೆಕ್ಕಾಚಾರ

ಅರುಣ ಬ. ಚೂರಿ Updated:

ಅಕ್ಷರ ಗಾತ್ರ : | |

Prajavani

ಪ್ರಸಕ್ತ ಉತ್ತಮವಾದ ಹಾಗೂ ಕೆರಿಯರ್ ಬೆಳವಣಿಗೆ ಇರುವ ಕ್ಷೇತ್ರಗಳಲ್ಲೊಂದು ಎಂದರೆ ಅದು ಕಾಮರ್ಸ್ ವಿಷಯ. ಪಿಯುಸಿಯಲ್ಲಿ ಕಾಮರ್ಸ್ ವಿಷಯ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಸಿಎಸ್ ಅಥವಾ ಸಿಎ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಗುರಿ ಹೊಂದಿರುತ್ತಾರೆ. ಇದು ಕಡಿಮೆ ಅಂಕಗಳ ಅಥವಾ ಇನ್ಯಾವುದೋ ಕಾರಣಕ್ಕೆ ಸಾಧ್ಯವಾಗದಿದ್ದಾಗ ವಿದ್ಯಾರ್ಥಿಗಳು ವಿಚಲಿತರಾಗಬಾರದು. ಬಿಕಾಂ ಪದವಿ ಪಡೆದು ಪೋಸ್ಟ್ ಗ್ರಾಜುಯೇಷನ್ ಪ್ರೊಫೆಷನಲ್ ಕೋರ್ಸ್‌ಗಳತ್ತ ಮುಖ ಮಾಡುವುದು ಒಳ್ಳೆಯದು.

ವಿದ್ಯಾರ್ಥಿಗಳು ಕೇವಲ ತಮಗೆ ತಿಳಿದ ಕೋರ್ಸ್‌ಗಳಾದ ಎಂಬಿಎ, ಎಂಕಾಂ, ಪಿಎಚ್‌ಡಿ... ಇವುಗಳಷ್ಟೇ ಆಯ್ಕೆಗಳು ಎಂದು ಪರಿಗಣಿಸದೆ ಉಳಿದ ಅನಂತ ಆಯ್ಕೆಗಳತ್ತ ಗಮನ ಹರಿಸಿ, ವಿಶ್ಲೇಷಿಸಿ ತಮಗೆ ಆಸಕ್ತಿ ಇರುವ ವಿಷಯದಲ್ಲಿ ಅಭ್ಯಸಿಸುವುದು ಒಳ್ಳೆಯದು. ಈ ಕೋರ್ಸ್ ಮಾಡುವ ಉದ್ದೇಶವೇನು, ಮುಂದೆ ತನಗೆ ದೊರಕಬಹುದಾದ ಉದ್ಯೋಗದಲ್ಲಿ ಆಸಕ್ತಿ ಇದೆಯೇ, ತಾನು ಆಯ್ದುಕೊಂಡ ಕೋರ್ಸ್‌ನಲ್ಲಿ ದೊರಕಬಹುದಾದ ಹುದ್ದೆಯಲ್ಲಿ ಸೇವೆ ಹಾಗೂ ಸಂಬಳದ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ಅರಿತುಕೊಂಡಿರಬೇಕು.

ಬಿಕಾಂ ಪದವಿಯ ನಂತರ ಇರುವ ಎಲ್ಲಾ ಕೋರ್ಸ್‌ಗಳ ಮಾಹಿತಿಗಳ ಜೊತೆಗೆ ಕಲಿಕೆ ಮುಗಿದ ನಂತರ ಆ ಕ್ಷೇತ್ರದಲ್ಲಿ ಇರುವ ಜವಾಬ್ದಾರಿಗಳೇನು ಎಂಬುದನ್ನು ಅರ್ಥಮಾಡಿಕೊಂಡರೆ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವುದು ಸುಲಭ.

1. ಚಾರ್ಟರ್ಡ್ ಅಕೌಂಟೆಂಟ್ – ಇದು ಅಕೌಂಟಿಂಗ್ ವೃತ್ತಿಪರರಿಗೆ ನೀಡಲಾಗುವ ಅಂತರರಾಷ್ಟ್ರೀಯ ಲೆಕ್ಕಪತ್ರ ಪದನಾಮ. ಆದರೆ ಯುಎಇನಲ್ಲಿ ಈ ಹುದ್ದೆಗೆ ಪ್ರಮಾಣೀಕೃತ ಸಾರ್ವಜನಿಕ ಅಕೌಂಟೆಂಟ್ ಎಂದು ಹೆಸರು.

ಜವಾಬ್ದಾರಿಗಳು: ಕಂಪನಿಗೆ ಸಲಹೆ ನೀಡು ವುದು, ಲೆಕ್ಕಪರಿಶೋಧನೆ ಮತ್ತು ಹಣಕಾಸು ದಾಖಲೆಗಳ ಬಗ್ಗೆ ವಿಶ್ವಾಸ ಅರ್ಹ ಮಾಹಿತಿ ನೀಡುವುದು, ಹಣಕಾಸು ವರದಿ ನೀಡುವುದು, ತೆರಿಗೆ ಲೆಕ್ಕ ಪರಿಶೋಧನೆ, ಲೆಕ್ಕಪತ್ರ ನಿರ್ವಹಣೆ, ಸಾಂಸ್ಥಿಕ ಹಣಕಾಸು ವ್ಯವಹಾರ ಚೇತರಿಕೆ ಲೆಕ್ಕಪತ್ರ ವ್ಯವಸ್ಥೆಗಳ ನಿರ್ವಹಣೆ ಮತ್ತು ದಿವಾಳಿತನದ ಬಗ್ಗೆ ಎಚ್ಚರದಿಂದಿರುವುದು.

2. ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ - ಅಮೆರಿಕದಲ್ಲಿ ಇದು ಸಾರ್ವಜನಿಕರಿಗೆ ಅಕೌಂಟಿಂಗ್ ಸೇವೆಗಳನ್ನು ಒದಗಿಸುತ್ತದೆ. ಇದು ಭಾರತ ದಲ್ಲಿನ ಚಾರ್ಟರ್ಡ್ ಅಕೌಂಟೆಂಟ್‌ಗೆ ಸಮ ಎನ್ನಬಹುದು.

ಜವಾಬ್ದಾರಿಗಳು: ಅಗತ್ಯವಿರುವ ಅಕೌಂಟಿಂಗ್ ದಾಖಲಾತಿ ತಯಾರಿಸುವುದು ಮತ್ತು ನವೀಕರಿ ಸುವುದು ಹಾಗೂ ವಹಿವಾಟಿನ ವರದಿ ಸಿದ್ಧಪಡಿ ಸುವುದು ಹಾಗೂ ವಿಶ್ಲೇಷಿಸುವುದು. ಹಣಕಾಸು ದಾಖಲೆಗಳು ವೆಚ್ಚಗಳು ಮತ್ತು ಹೂಡಿಕೆಗಳಲ್ಲಿನ ನಿಖರತೆಗಳನ್ನು ಖಚಿತಪಡಿಸಿಕೊಳ್ಳಲು ನಿಯಮಿತ ಮತ್ತು ವಿವರವಾದ ಲೆಕ್ಕಪರಿಶೋಧನೆಯನ್ನು ನಡೆಸುವುದು.

3. ಚಾರ್ಟರ್ಡ್ ಫೈನಾನ್ಶಿಯಲ್ ಅನಲಿಸ್ಟ್- ಇದು ಸ್ನಾತಕೋತ್ತರ ವೃತ್ತಿಪರ ಅರ್ಹತೆಯಾಗಿದ್ದು ಇದನ್ನು ಅಮೆರಿಕ ಮೂಲದ ಸಿಎಫ್ಎ ಸಂಸ್ಥೆ ಹೂಡಿಕೆ ಮತ್ತು ಹಣಕಾಸು ವೃತ್ತಿಪರರಿಗೆ ನೀಡುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಕಾನೂನು ಮತ್ತು ನಿಯಂತ್ರಕ ಮಾನ್ಯತೆಯನ್ನು ಹೊಂದಿದೆ.

ಜವಾಬ್ದಾರಿಗಳು: ನಿಗಮ ಹಾಗೂ ವ್ಯಕ್ತಿಗೆ ಹಣ ಸಂಪಾದಿಸುವಲ್ಲಿ ಕಾರಣವಾಗಬಹುದಾದ ಕಂಪನಿಗಳ ಷೇರುಗಳು ಮತ್ತು ಕೈಗಾರಿಕೆಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಣಕಾಸು ವರದಿ ಸಲ್ಲಿಸುವುದು, ಹೂಡಿಕೆಗಳ ವಿಶ್ಲೇಷಣೆ, ಬಂಡವಾಳ ನಿರ್ವಹಣೆ ಇತ್ಯಾದಿ.

4. ಕಂಪನಿ ಸೆಕ್ರೆಟರಿ- ಕಂಪನಿಯ ಕಾರ್ಯದ ರ್ಶಿಯ ಈ ಹುದ್ದೆ ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಯಲ್ಲಿ ಹಿರಿಯ ಸ್ಥಾನವಾಗಿದ್ದು ಸಂಸ್ಥೆಯ ನಿರ್ವಹಣಾ ಶ್ರೇಣಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

ಜವಾಬ್ದಾರಿಗಳು: ಕಂಪನಿಯ ದಕ್ಷ ಕಾರ್ಯನಿರ್ವಹಣೆಗೆ ಕಂಪನಿಯ ಕಾರ್ಯದರ್ಶಿ ಜವಾಬ್ದಾರನಾಗಿರುತ್ತಾನೆ. ಅದರಲ್ಲೂ ಶಾಸನಬದ್ಧ ಮತ್ತು ನಿಯಂತ್ರಕ ಅವಶ್ಯಕತೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ನಿರ್ದೇಶಕರ ಮಂಡಳಿಯ ನಿರ್ಧಾರಗಳನ್ನು ಜಾರಿಗೊಳಿಸಲಾಗಿದೆಯೇ ಎಂಬುದನ್ನು ಪರೀಕ್ಷಿಸುವುದು.

5. ಅಸೋಸಿಯೇಷನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್- ಸರ್ಟಿಫೈಡ್ ಅಕೌಂಟೆಂಟ್ ಅರ್ಹತೆ ನೀಡುವ ಜಾಗತಿಕ ವೃತ್ತಿಪರ ಲೆಕ್ಕಪತ್ರ ಸಂಸ್ಥೆ ಇದಾಗಿದ್ದು ಎಸಿಸಿಎ ಕಚೇರಿ ಲಂಡನ್‌ನ ಗ್ಲಾಸ್ಗೋನಲ್ಲಿದೆ.

ಜವಾಬ್ದಾರಿಗಳು: ಕೆಲಸದ ಜವಾಬ್ದಾರಿಗಳು ಕಂಪನಿಯಿಂದ ಕಂಪನಿಗೆ ಬದಲಾದರೂ ಸಹ ಪ್ರಮುಖ ಜವಾಬ್ದಾರಿಗಳೆಂದರೆ ದಾಖಲೆಗಳ ನಿರ್ವಹಣೆ, ಹಣಕಾಸು ಖಾತೆಗಳ ನಿರ್ವಹಣೆ, ಅಲ್ಲದೇ ಒಳಬರುವ ಎಲ್ಲ ಪಾವತಿಗಳ ನಿರ್ವಹಣೆ ಮತ್ತು ದಾಖಲಾತಿ, ಹಣಕಾಸು ಹಾಗೂ ವೇತನ ಸ್ಟೇಟ್‌ಮೆಂಟ್‌ಗಳನ್ನು ಸಿದ್ಧಪಡಿಸುವುದು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು