ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥರ್ಡ್‌ಪಾರ್ಟಿ ವಿಮೆ: ಅವಧಿ ವಿಸ್ತರಣೆ, ಪಾಲಿಸಿ ನವೀಕರಣಕ್ಕೆ ಪಾಲಿಸಿಬಜಾರ್‌

Last Updated 5 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ವಾಣಿಜ್ಯ ವಾಹನಗಳ ಥರ್ಡ್‌ ಪಾರ್ಟಿ ವಿಮೆ ಪಾಲಿಸಿಗಳ ನವೀಕರಣ ಅವಧಿಯನ್ನು ಕೇಂದ್ರ ಸರ್ಕಾರವು ವಿಸ್ತರಿಸಿರುವುದರಿಂದ ಸದ್ಯದ ದಿಗ್ಬಂಧನದ ಸಂದರ್ಭದಲ್ಲಿ ಪಾಲಿಸಿದಾರರಿಗೆ ನೆಮ್ಮದಿ ದೊರೆತಿದೆ.

ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಂತಹ ವಾಣಿಜ್ಯ ಉದ್ದೇಶದ ವಹಿವಾಟನ್ನೇ ನೆಚ್ಚಿಕೊಂಡಿರುವ ವಾಣಿಜ್ಯ ವಾಹನಗಳ ಮಾಲೀಕರು, ಜೀವನೋಪಾಯಕ್ಕೆ ಈ ವಾಹನಗಳನ್ನೇ ಹೆಚ್ಚಾಗಿ ನೆಚ್ಚಿ
ಕೊಂಡಿರುವ ಕಡಿಮೆ ಆದಾಯದ ಜನರು ಅವಧಿ ವಿಸ್ತರಣೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯದ ಬಿಕ್ಕಟ್ಟಿನ ಕಾರಣಕ್ಕೆ ಮಾರ್ಚ್‌ 25 ರಿಂದ ಏ. 14ರವರೆಗಿನ ಅವಧಿಯಲ್ಲಿ ನವೀಕರಿಸಬೇಕಾಗಿದ್ದ ಥರ್ಡ್‌ಪಾರ್ಟಿ ವಿಮೆ ಪಾಲಿಸಿಗಳನ್ನು ಈಗ ಏ. 21ರವರೆಗೆ ನವೀಕರಿಸಬಹುದಾಗಿದೆ.

‘ಥರ್ಡ್‌ಪಾರ್ಟಿ ವಿಮೆಗೆ ಸಂಬಂಧಿಸಿದಂತೆ ಇದೊಂದು ಸ್ವಾಗತಾರ್ಹ ನಿರ್ಧಾರವಾಗಿದೆ. ಎಲ್ಲ ಬಗೆಯ ಮೋಟರ್‌ ಇನ್ಶುರೆನ್ಸ್‌ ಪಾಲಿಸಿಗಳಿಗೆ ಈ ಅವಧಿ ವಿಸ್ತರಣೆ ಅನ್ವಯವಾಗುವುದಿಲ್ಲ. ಕಾರ್‌ಗಳ ಸಮಗ್ರ ವಿಮೆ ಪಾಲಿಸಿ ಮುಕ್ತಾಯಗೊಳ್ಳುವ ಮೊದಲೇ ನವೀಕರಿಸದಿದ್ದರೆ ಕೆಲ ಸಮಸ್ಯೆಗಳು ಎದುರಾಗುತ್ತವೆ. ಪಾಲಿಸಿ ನವೀಕರಣಕ್ಕೂ ಮೊದಲು ವಾಹನದ ತಪಾಸಣೆ ನಡೆಸಬೇಕಾಗುತ್ತದೆ. ಪ್ರೀಮಿಯಂ ಮೊತ್ತವೂ ಹೆಚ್ಚಳಗೊಳ್ಳಬಹುದು. ವಿಮೆ ಪರಿಹಾರ ಪಡೆದುಕೊಂಡಿರದಿದ್ದರೆ ದೊರೆಯುವ ಬೋನಸ್‌ಗೂ (ನೊ ಕ್ಲೇಮ್‌ ಬೋನಸ್‌) ಎರವಾಗಬೇಕಾಗುತ್ತದೆ’ ಎಂದು ‘ಪಾಲಿಸಿಬಜಾರ್‌ಡಾಟ್‌ಕಾಂ’ನ ಮೋಟರ್‌ ವಿಮೆ ಮುಖ್ಯಸ್ಥ ಸಜ್ಜಾ ಪ್ರವೀಣ್‌ ಹೇಳಿದ್ದಾರೆ.

‘ವಾಹನದ ಸಮಗ್ರ ವಿಮೆ ಪಾಲಿಸಿ ವಿಷಯದಲ್ಲಿ ತೊಂದರೆಗಳನ್ನು ಆಹ್ವಾನಿಸಕೊಳ್ಳಬಾರದು ಎಂದರೆ ಸಕಾಲದಲ್ಲಿ ವಾಹನ ವಿಮೆ ನವೀಕರಿಸಬೇಕು. ಥರ್ಡ್‌ ಪಾರ್ಟಿ ವಿಮೆ ಪಾಲಿಸಿಗಳನ್ನು ‘ಪಾಲಿಸಿಬಜಾರ್‌ಡಾಟ್‌ಕಾಂ’ನಲ್ಲಿ ಸುಲಭವಾಗಿ ನವೀಕರಿಸಬಹುದು. ವಿವಿಧ ಕಂಪನಿಗಳ ಪಾಲಿಸಿ ಯೋಜನೆಗಳನ್ನು ಈ ತಾಣದಲ್ಲಿ ಹೋಲಿಸಿ ನೋಡಬಹುದು‘ ಎಂದು ಹೇಳಿದ್ದಾರೆ.

ಅವಧಿ ಜೀವ ವಿಮೆ: ದಿಗ್ಬಂಧನದ ಕಾರಣಕ್ಕೆ ‘ಅವಧಿ ಜೀವ ವಿಮೆ‘ ಪಾಲಿಸಿಗಳ ಬೆಲೆ ಹೆಚ್ಚಳವನ್ನು ಪಾಲಿಸಿಬಜಾರ್‌, ಇತರ ಪ್ರಮುಖ ವಿಮೆ ಕಂಪನಿಗಳ ಸಹಯೋಗದಲ್ಲಿ ಇದೇ 10ರವರೆಗೆ ಮುಂದೂಡಿದೆ.

‘ಕುಟುಂಬಕ್ಕೆ ಹಣಕಾಸು ಸುರಕ್ಷತೆ ಒದಗಿಸಲು ಅವಧಿ ಜೀವ ವಿಮೆ ಪಾಲಿಸಿ ಖರೀದಿಸುವವರು, ಇದೇ 10ರವರೆಗೆ ಹಳೆಯ ದರದಲ್ಲಿಯೇ ಪಾಲಿಸಿ ಖರೀದಿಸಬಹುದು. ಗ್ರಾಹಕರು ಮನೆಯಲ್ಲಿ ಕುಳಿತುಕೊಂಡೇ ಅವಧಿ ಜೀವ ವಿಮೆ ಮತ್ತು ಆರೋಗ್ಯ ವಿಮೆ ಪಾಲಿಸಿ ಖರೀದಿಸಲು ಪಾಲಿಸಿಬಜಾರ್‌ ಕಂಪನಿಯು ಟೆಲೆ ಮೆಡಿಕಲ್‌ ಚೆಕ್‌ ಅಪ್‌ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಈ ಸೌಲಭ್ಯದ ಕಾರಣಕ್ಕೆ ಗ್ರಾಹಕರು ದೈಹಿಕವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕಾಗಿಲ್ಲ’ ಎಂದು ಪಾಲಿಸಿ ಬಜಾರ್‌ನ ಜೀವ ವಿಮೆ ಮುಖ್ಯಸ್ಥೆ ಸಂತೋಷ್‌ ಅಗರ್‌ವಾಲ್ ಹೇಳಿದ್ದಾರೆ.

ಥರ್ಡ್‌ಪಾರ್ಟಿ ವಿಮೆ

‘ಮೋಟರ್‌ ವಾಹನಗಳ ಕಾಯ್ದೆ– 1988’ರ ಪ್ರಕಾರ, ವಾಹನಗಳ ಮಾಲೀಕರು ಥರ್ಡ್‌ಪಾರ್ಟಿ ವಿಮೆ ಹೊಂದುವುದು ಶಾಸನಬದ್ಧ ಕಡ್ಡಾಯವಾಗಿದೆ. ಇದರ ಪ್ರಮುಖ ಫಲಾನುಭವಿಯು ವಿಮೆ ಪಾಲಿಸಿ ಖರೀದಿಸಿದ ಅಥವಾ ವಿಮೆ ಕಂಪನಿ ಬದಲಿಗೆ ಮೂರನೇ ವ್ಯಕ್ತಿಯಾಗಿರುತ್ತಾನೆ. ರಸ್ತೆ ಅಪಘಾತ ಸಂದರ್ಭದಲ್ಲಿ ಮೂರನೇ ವ್ಯಕ್ತಿ ಮತ್ತು ಆಸ್ತಿಗೆ ಆಗುವ ನಷ್ಟಕ್ಕೆ ಪರಿಹಾರ ಒದಗಿಸಲು ಥರ್ಡ್‌ ಪಾರ್ಟಿ ವಿಮೆ ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT