ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಟಾನ್‌ ತೆಕ್ಕೆಗೆ ಕ್ಯಾರಟ್‌ಲೇನ್‌ನ ಶೇ 27.2ರಷ್ಟು ಷೇರು

Published 19 ಆಗಸ್ಟ್ 2023, 13:06 IST
Last Updated 19 ಆಗಸ್ಟ್ 2023, 13:06 IST
ಅಕ್ಷರ ಗಾತ್ರ

ನವದೆಹಲಿ : ಚಿನ್ನಾಭರಣ ಕಂಪನಿ ಟೈಟಾನ್‌, ತನ್ನ ಅಂಗಸಂಸ್ಥೆ ಆಗಿರುವ ಕ್ಯಾರಟ್‌ಲೇನ್‌ನ ಶೇ 27.18ರಷ್ಟು ಷೇರನ್ನು ₹4,621 ಕೋಟಿಗೆ ಸ್ವಾಧೀನಪಡಿಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ತನ್ನ ಒಟ್ಟು ಷೇರುಪಾಲನ್ನು ಶೇ 98.28ಕ್ಕೆ ಹೆಚ್ಚಿಸಿಕೊಳ್ಳಲಿದೆ.

ಟಾಟಾ ಸಮೂಹದ ಒಡೆತನದ ಟೈಟಾನ್ ಕಂಪನಿಯು ಕ್ಯಾರಟ್‌ಲೇನ್‌ ಕಂಪನಿಯ ಸ್ಥಾಪರಾದ ಮಿಥುನ್‌ ಸಚೇತಿ ಮತ್ತು ಶ್ರೀನಿವಾಸ ಗೋಪಾಲನ್‌ ಮತ್ತು ಅವರ ಕುಟುಂಬದ ಸದಸ್ಯರ ಜೊತೆ ಷೇರು ಖರೀದಿ ಒಪ್ಪಂದ ಮಾಡಿಕೊಂಡಿದೆ. ಈ ಕುರಿತು ಎರಡು ಕಂಪನಿಗಳು ಜಂಟಿ ಹೇಳಿಕೆ ನೀಡಿವೆ.

ಅಕ್ಟೋಬರ್‌ 31ರ ಒಳಗಾಗಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯನ್ನು ಟೈಟಾನ್ ಹೊಂದಿದೆ. ಇದಕ್ಕಾಗಿ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಒಪ್ಪಿಗೆ ನೀಡಬೇಕಿದೆ.

ಕ್ಯಾರಟ್‌ಲೇನ್‌ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿ ಅಲ್ಲ. 2022-23ನೇ ಹಣಕಾಸು ವರ್ಷದಲ್ಲಿ ಕಂಪನಿಯ ಒಟ್ಟು ವಹಿವಾಟು ₹2,177 ಕೋಟಿಯಷ್ಟು ಆಗಿದೆ. ಚಿನ್ನಾಭರಣ ತಯಾರಿಕೆ ಮತ್ತು ಮಾರಾಟದಲ್ಲಿಯೂ ಇದು ತೊಡಗಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT