ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಜಿಇ23ಎಲ್‌ನಲ್ಲಿ ಟೋಟಲ್‌ ಎನರ್ಜಿ ಹೂಡಿಕೆ

Published 20 ಸೆಪ್ಟೆಂಬರ್ 2023, 20:28 IST
Last Updated 20 ಸೆಪ್ಟೆಂಬರ್ 2023, 20:28 IST
ಅಕ್ಷರ ಗಾತ್ರ

ನವದೆಹಲಿ: ಫ್ರಾನ್ಸ್‌ನ ಟೋಟಲ್‌ ಎನರ್ಜೀಸ್‌ ಕಂಪನಿಯು ಶುದ್ಧ ಇಂಧನಕ್ಕೆ ಸಂಬಂಧಿಸಿದ ಅದಾನಿ ಸಮೂಹದೊಂದಿಗಿನ ಜಂಟಿ ಸಂಸ್ಥೆ ‘ಎಜಿಎಲ್‌23ಎಲ್‌’ನಲ್ಲಿ ₹2488 ಕೋಟಿ ಹೂಡಿಕೆ ಮಾಡಲಿದೆ.

ಟೋಟಲ್‌ ಕಂಪನಿಯು ಈ ಜಂಟಿ ಸಂಸ್ಥೆಯಲ್ಲಿ ಶೇ 50ರಷ್ಟು ಷೇರುಪಾಲು ಹೊಂದಲಿದ್ದು, ಇನ್ನುಳಿದ ಶೇ 50ರಷ್ಟನ್ನು ಅದಾನಿ ಗ್ರೀನ್‌ ಎನರ್ಜಿ ಲಿಮಿಟಡ್‌ ಹೊಂದಲಿದೆ ಎಂದು ಎರಡೂ ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.

1,050 ಮೆಗಾವಾಟ್‌ ಸಾಮರ್ಥ್ಯದ  ಸೋಲಾರ್ ಮತ್ತು ಪವನ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯವನ್ನು ಈ ಜಂಟಿ ಸಂಸ್ಥೆ ಹೊಂದಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT