ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19ರ ಬಿಕ್ಕಟ್ಟು: ಪ್ರಯಾಣ, ಪ್ರವಾಸೋದ್ಯಮಕ್ಕೆ ₹ 5 ಲಕ್ಷ ಕೋಟಿ ನಷ್ಟ

Last Updated 9 ಸೆಪ್ಟೆಂಬರ್ 2020, 15:02 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ದೇಶದ ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯಕ್ಕೆ ₹ 5 ಲಕ್ಷ ಕೋಟಿ ನಷ್ಟವಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮತ್ತು ಆತಿಥ್ಯ ಸಲಹಾ ಸಂಸ್ಥೆ ಹೊಟೆಲಿವೇಟ್‌ ಜಂಟಿಯಾಗಿ ಈ ವರದಿ ನೀಡಿವೆ. ಸಂಘಟಿತ ವಲಯದ ನಷ್ಟವು ₹ 1.85 ಲಕ್ಷ ಕೋಟಿಗಳಷ್ಟಾಗಲಿದೆ. ಈ ಅಂಕಿ–ಅಂಶಗಳು ಎಚ್ಚರಿಕೆಯ ಗಂಟೆಯಾಗಿದ್ದು, ಉದ್ಯಮವು ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದಾದರೆ ತಕ್ಷಣದ ಪರಿಹಾರ ಕ್ರಮಗಳ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ದೇಶದ ಪ್ರವಾಸೋದ್ಯಮಕ್ಕೆ ಈ ರೀತಿಯ ಬಿಕ್ಕಟ್ಟು ಎದುರಾಗಿರುವುದು ಇದೇ ಮೊದಲು. ಎಲ್ಲಾ ರೀತಿಯಲ್ಲಿಯೂ ಉದ್ಯಮಕ್ಕೆ ಪೆಟ್ಟು ಬಿದ್ದಿದೆ. ಲಾಕ್‌ಡೌನ್‌ನಿಂದಾಗಿ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ಇತ್ತು. ಮಂದಗತಿಯ ವಹಿವಾಟಿನಿಂದಾಗಿ ಅಕ್ಟೋಬರ್‌ವರೆಗೂ ವರಮಾನದ ಮೇಲೆ ಹೆಚ್ಚು ಪೆಟ್ಟು ಬೀಳಲಿದೆ. ಹೊಟೇಲ್‌ ಕೊಠಡಿಗಳು ಶೇಕಡ 30ರಷ್ಟು ಮಾತ್ರವೇ ಭರ್ತಿಯಾಗುತ್ತಿವೆ. ವರಮಾನದ ದೃಷ್ಟಿಯಿಂದ ಹೇಳುವುದಾದರೆ, ಶೇ 80 ರಿಂದ ಶೇ 85ರವರೆಗೆ ನಷ್ಟವಾಗುತ್ತಿದೆ ಎಂದು ತಿಳಿಸಿದೆ.

ಬ್ರ್ಯಾಂಡ್‌ ಮತ್ತು ಬ್ರ್ಯಾಂಡ್‌ ಅಲ್ಲದ ಹೊಟೇಲ್‌ಗಳು ಈ ವರ್ಷ ₹ 1.42 ಲಕ್ಷ ಕೋಟಿಗಳಷ್ಟು ನಷ್ಟ ಅನುಭವಿಸುವ ಅಂದಾಜು ಮಾಡಲಾಗಿದೆ. ಟ್ರಾವೆಲ್‌ ಏಜೆಂಟ್‌ಗಳಿಗೆ ₹ 35,070 ಕೋಟಿ ನಷ್ಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT