ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್ | ಮಾಹಿತಿ ನಿಗಾ ಸಮಿತಿಗೆ ಸುಧೀರ್‌ ಕೃಷ್ಣಸ್ವಾಮಿ ನೇಮಕ

Last Updated 7 ಮೇ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಜಾಲ ತಾಣಗಳಾದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಯಾವ ಮಾಹಿತಿಗೆ ಅವಕಾಶ ಇರಬೇಕು ಮತ್ತು ಯಾವುದನ್ನು ನಿರಾಕರಿಸಬೇಕು ಎನ್ನುವುದರ ಬಗ್ಗೆ ನಿಗಾ ಇರಿಸಲು ಹೊಸದಾಗಿ ರಚಿಸಲಾಗಿರುವ ಮೇಲ್ವಿಚಾರಣಾ ಮಂಡಳಿಗೆ ಭಾರತದಿಂದ ಡಾ. ಸುಧೀರ್‌ ಕೃಷ್ಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.

ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿಯ ಕುಲಪತಿ ಆಗಿರುವ ಡಾ. ಸುಧೀರ್‌ ಅವರು, ವಿಶ್ವದ ಇತರ 19 ಜನ ಸ್ವತಂತ್ರ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ನಾಗರಿಕ ಸಮಾಜ, ಶಿಕ್ಷಣ ಮತ್ತು ಸಾರ್ವಜನಿಕ ಸೇವಾ ವಲಯದ ತಜ್ಞರನ್ನು ಈ ಮಂಡಳಿಗೆ ನೇಮಕ ಮಾಡಲಾಗಿದೆ.

ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ತಾಣಗಳಲ್ಲಿ ಯಾವ ಬಗೆಯ ಮಾಹಿತಿ ಇರಬೇಕು ಮತ್ತು ಇರಬಾರದು ಎನ್ನುವ ಸಂಕೀರ್ಣ ಸ್ವರೂಪದ ವಿವಾದಕ್ಕೆ ಈ ಮಂಡಳಿಯು ಪರಿಹಾರ ಒದಗಿಸಲಿದೆ.ಮಂಡಳಿ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ. ಮಂಡಳಿಯ ನಿರ್ಧಾರವನ್ನು ಫೇಸ್‌ಬುಕ್‌ ಕಡ್ಡಾಯವಾಗಿ ಜಾರಿಗೆ ತರಲಿದೆ. ಮಂಡಳಿಯ ಸದಸ್ಯರು ಕೈಗೊಳ್ಳುವ ನಿರ್ಧಾರದ ಕಾರಣಕ್ಕೆ ಅವರನ್ನು ಮಂಡಳಿಯಿಂದ ಕೈಬಿಡುವ ಅಧಿಕಾರ ಫೇಸ್‌ಬುಕ್‌ಗೆ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT