ನವದೆಹಲಿ: ಎಚ್–1ಬಿ ವೀಸಾ ಅರ್ಜಿಗಳಿಗೆ ವಿಧಿಸುವ ಶುಲ್ಕವನ್ನು 1 ಲಕ್ಷ ಅಮೆರಿಕನ್ ಡಾಲರ್ಗೆ (ಅಂದಾಜು ₹88.09 ಲಕ್ಷ) ನಿಗದಿಪಡಿಸುವ ಅಮೆರಿಕ ಸರ್ಕಾರದ ತೀರ್ಮಾನವು ಭಾರತದ ತಂತ್ರಜ್ಞಾನ ಸೇವಾ ಕಂಪನಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನಾಸ್ಕಾಂ ಅಂದಾಜು ಮಾಡಿದೆ.

ಅಮೆರಿಕದಲ್ಲಿಯೇ ಉಳಿದು ಮಾಡಬೇಕಾದ ಕೆಲಸಗಳ ಮೇಲೆ ಈ ತೀರ್ಮಾನದಿಂದಾಗಿ ಪರಿಣಾಮ ಉಂಟಾಗಲಿದೆ ಎಂದು ಐ.ಟಿ. ಸೇವಾ ಕಂಪನಿಗಳ ಸಂಘಟನೆಯಾದ ನಾಸ್ಕಾಂ ಹೇಳಿದೆ.

ಎಚ್–1ಬಿ ವೀಸಾ ಬೇಕು ಎಂದಾದರೆ 1 ಲಕ್ಷ ಅಮೆರಿಕನ್ ಡಾಲರ್ ಹಣ ಪಾವತಿಸಬೇಕು ಎನ್ನುವ ನಿಯಮವು ಸೆಪ್ಟಂಬರ್ 21ರಿಂದಲೇ ಜಾರಿಗೆ ಬರುತ್ತಿರುವುದು ಉದ್ದಿಮೆಗಳು, ವೃತ್ತಿಪರರ ಪಾಲಿಗೆ ಅನಿಶ್ಚಿತತೆಯನ್ನು ಸೃಷ್ಟಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಎಚ್–1ಬಿ ವೀಸಾ ಪಡೆದು ಜಾಗತಿಕ ಮಟ್ಟದ ಕಂಪನಿಗಳಿಗೆ, ಭಾರತೀಯ ಕಂಪನಿಗಳಿಗೆ ಕೆಲಸ ಮಾಡುತ್ತಿರುವ ಭಾರತದ ಪ್ರಜೆಗಳ ಮೇಲೆ ಅಮೆರಿಕದ ತೀರ್ಮಾನದಿಂದಾಗಿ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದು ಅದು ಹೇಳಿದೆ.

ಭಾರತ ಕೇಂದ್ರಿತ ಕಂಪನಿಗಳು ಈಗ ಕೆಲವು ವರ್ಷಗಳಿಂದ ಇಂತಹ ವೀಸಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿವೆ. ಅಮೆರಿಕದಲ್ಲೇ ಅಗತ್ಯ ಸಿಬ್ಬಂದಿಯನ್ನು ಅವರು ನೇಮಕ ಮಾಡಿಕೊಳ್ಳುವುದು ಹೆಚ್ಚಾಗಿದೆ ಎಂದು ನಾಸ್ಕಾಂ ಹೇಳಿದೆ.

ಅಮೆರಿಕದ ಎಚ್–1ಬಿ ವೀಸಾಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವುದು ಭಾರತದ ಟೆಕಿಗಳು. ಅಮೆರಿಕವು ಪ್ರತಿ ವರ್ಷ 6,50,000 ಎಚ್–1ಬಿ ವೀಸಾ ನೀಡುತ್ತದೆ. ಈ ಬಗೆಯ ವೀಸಾಗಳನ್ನು 2024–25ರಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡ ಕಂಪನಿಗಳ ಪಟ್ಟಿಯಲ್ಲಿ ಅಮೆಜಾನ್ ಮೊದಲ ಸ್ಥಾನದಲ್ಲಿದೆ (10,044).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.