ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ಬಳಿಕ ರಾಜ್ಯದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಹ್ಯಾಚ್ಬ್ಯಾಕ್ ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳನ್ನು (ಎಸ್ಯುವಿ) ಜನರು ಹೆಚ್ಚಾಗಿ ಖರೀದಿಸುತ್ತಿದ್ದಾರೆ.

ಹ್ಯಾಚ್ಬ್ಯಾಕ್ ಹೆಚ್ಚು ಜನಪ್ರಿಯವಾಗಿರುವ ಮಾದರಿ ಆಗಿದೆ. ನಂತರದಲ್ಲಿ ಎಸ್ಯುವಿ, ಸೆಡಾನ್ ಇದೆ. ಹುಂಡೈ ಎಲೈಟ್ ಐ20, ಗ್ರ್ಯಾಂಡ್ ಐ10 ಮತ್ತು ಮಾರುತಿ ಸುಜುಕಿ ಬಲೆನೊ, ಸ್ವಿಫ್ಟ್, ಫೋಕ್ಸ್ವ್ಯಾಗನ್ ಪೋಲೊ ಮಾದರಿಗಳನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂದು ಕಂಪನಿಗಳು ಮಾಹಿತಿ ನೀಡಿವೆ.

ಆಫ್ಲೈನ್ನಲ್ಲಿ ಮಹೀಂದ್ರ ಫಸ್ಟ್ ಚಾಯ್ಸ್ ಮತ್ತು ಮಾರುತಿ ಟ್ರೂ ವ್ಯಾಲ್ಯು, ಹುಂಡೈ ಎಚ್ ಕಂಪನಿಗಳು ಪ್ರಮುಖವಾಗಿವೆ. ಆನ್ಲೈನ್ನಲ್ಲಿ ಸ್ಪಿನ್ನಿ, ಕಾರ್ಸ್24, ಕಾರ್ದೇಖೊ, ಒಎಲ್ಎಕ್ಸ್ ಆಟೊ, ಕಾರ್ಟ್ರೇಡ್ ಕಂಪನಿಗಳು ಹೆಚ್ಚಿನ ಮಾರಾಟ ನಡೆಸುತ್ತಿವೆ.

ರಾಜ್ಯದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. 2022–23ರ ಏಪ್ರಿಲ್–ಸೆಪ್ಟೆಂಬರ್ ಅವಧಿಗೆ ಹೋಲಿಸಿದರೆ 2023–24ರ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟವು ಶೇ 25.7ರಷ್ಟು ಏರಿಕೆ ಕಂಡಿದೆ ಎಂದು ಮಾರುತಿ ಟ್ರೂ ವ್ಯಾಲ್ಯು ಕಂಪನಿ ತಿಳಿಸಿದೆ.

ಕಳೆದೆರಡು ವರ್ಷಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟದಲ್ಲಿ ಶೇ 40ರಷ್ಟು ಏರಿಕೆ ಕಂಡಿದೆ. 2023ರ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಮೂರನೇ ತ್ರೈಮಾಸಿಕದಲ್ಲಿ ಕಾರು ಖರೀದಿಸುವವರ ಪ್ರಮಾಣವು ಶೇ 67ರಷ್ಟು ಹೆಚ್ಚಾಗಿದೆ ಎಂದು ಬೆಂಗಳೂರಿನ ಸ್ಪಿನ್ನಿ ಕಂಪನಿಯ ಸಿಇಒ ನೀರಜ್ ಸಿಂಗ್ ತಿಳಿಸಿದರು.

ಆನ್ಲೈನ್ ವ್ಯವಸ್ಥೆಯು ಹೆಚ್ಚು ಪಾರದರ್ಶಕ ಆಗಿರುವುದರಿಂದ ಜನರಲ್ಲಿ ನಂಬಿಕೆ ಹೆಚ್ಚಾಗುತ್ತಿದೆ. ವಾಹನಗಳ 360 ಡಿಗ್ರಿ ನೋಟ, ಮನೆಬಾಗಿಲಿಗೆ ಟೆಸ್ಟ್ ಡ್ರೈವ್ ಮತ್ತು ಪರಿಶೀಲನೆಯಂತಹ ಅನುಕೂಲಗಳು ಮಾರಾಟದಲ್ಲಿ ಏರಿಕೆ ಕಾಣುವಂತೆ ಮಾಡುತ್ತಿವೆ ಎಂದು ಅವರು ಹೇಳಿದರು.

ಸೆಕೆಂಡ್ ಹ್ಯಾಂಡ್ ಕಾರಿಗೆ ರಾಜ್ಯದಲ್ಲಿ ಬೆಂಗಳೂರು ಉತ್ತಮ ಮಾರುಕಟ್ಟೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರಾಟ ಶೇ 133ರಷ್ಟು ಏರಿಕೆ ಕಂಡಿದೆ. ಸರಾಸರಿ ಮಾರಾಟ ದರವು ₹5.61 ಲಕ್ಷದಿಂದ ₹6.47 ಲಕ್ಷಕ್ಕೆ ಶೇ 15ರಷ್ಟು ಹೆಚ್ಚಳ ಆಗಿದೆ ಎಂದು ಕಾರ್ಸ್24 ಕಂಪನಿಯ ಸಹ ಸ್ಥಾಪಕ ಗಜೇಂದ್ರ ಜಂಗಿದ್ ತಿಳಿಸಿದರು.

2021–22ಕ್ಕೆ ಹೋಲಿಸಿದರೆ 2022–23ರಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದಲ್ಲಿ ಶೇ 45ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

ಹಣಕಾಸಿನ ನೆರವು: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುತ್ತಿರುವವರಲ್ಲಿ ಶೇ 70ರಷ್ಟು ಗ್ರಾಹಕರು ಸಾಲ ಪಡೆಯುತ್ತಿದ್ದಾರೆ. ಕಾರಿನ ಮೌಲ್ಯದ ಶೇ 100ರವರೆಗೆ ಸಾಲ ನೀಡುವ ನಮ್ಮ ಕೊಡುಗೆಯನ್ನು ಗ್ರಾಹಕರು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂದು ಸ್ಪಿನ್ನಿ ತಿಳಿಸಿದೆ.

ಕಾರ್ಸ್24 ಜೀರೊ ಪಾವತಿ ಆಯ್ಕೆಯನ್ನು ನೀಡುತ್ತಿದೆ. ಬೆಂಗಳೂರಿನಲ್ಲಿ ಕಾರು ಖರೀದಿಸಲು ಗ್ರಾಹಕರಿಗೆ ಹಣಕಾಸಿನ ಸೌಲಭ್ಯ ಒದಗಿಸುವುದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 130ರಷ್ಟು ಬೆಳವಣಿಗೆ ಕಂಡಿದೆ. ವೃತ್ತಿಪರ ವೇತನ ವರ್ಗವು ತಿಂಗಳಿಗೆ ಸರಾಸರಿ ₹11,500ರಂತೆ 6 ವರ್ಷಗಳ ಅವಧಿಯ ಸಾಲಕ್ಕೆ ಕಾರು ಖರೀದಿಸುತ್ತಿದೆ ಎಂದು ಮಾಹಿತಿ ನೀಡಿದೆ.

ಹೆಚ್ಚಲಿದೆ ಸಂಘಟಿತ ವಲಯದ ಪಾಲು

20%: ದೇಶದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದಲ್ಲಿ ಸದ್ಯ ಇರುವ ಸಂಘಟಿತ ವಲಯದ ಪಾಲು

45%: 2024–25ನೇ ಹಣಕಾಸು ವರ್ಷದ ವೇಳೆಗೆ ಏರಿಕೆ ಆಗಲಿರುವ ಪ್ರಮಾಣದ ಅಂದಾಜು

ಕಾರು ಖರೀದಿ ವಿವರ (2023ರ ಮೂರನೇ ತ್ರೈಮಾಸಿಕ)

63%: ಮೊದಲ ಬಾರಿಗೆ ಕಾರು ಖರೀದಿ

32: ಕಾರು ಖರೀದಿಸುವರ ಸರಾಸರಿ ವಯಸ್ಸು

32%: ಕಾರು ಖರೀದಿಸುವವರಲ್ಲಿ ಮಹಿಳೆಯರ ಪಾಲು

70%: ಆನ್ಲೈನ್ ಮೂಲಕ ಖರೀದಿಸುವವರ ಪ್ರಮಾಣ

ಮಾಹಿತಿ: ಸ್ಪಿನ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.