ಬರ್ಮಿಂಗ್ಹ್ಯಾಮ್: ನಗರದ ಶತಮಾನೋತ್ಸವ ವೃತ್ತದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಹೋಟೆಲ್ನಿಂದ ಹೊರಗೆ ಬಾರದಂತೆ ಭಾರತ ಕ್ರಿಕೆಟ್ ತಂಡಕ್ಕೆ ಮಂಗಳವಾರ ಸೂಚಿಸಲಾಗಿತ್ತು ಎಂದು ವರದಿಯಾಗಿದೆ.

ಈ ಮಾಹಿತಿಯನ್ನು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.

ಸಾಮಾನ್ಯವಾಗಿ ಭಾರತ ತಂಡದ ಆಟಗಾರರು ತಾವು ಉಳಿದುಕೊಂಡಿರುವ ಹೋಟೆಲ್ನ ಅಕ್ಕಪಕ್ಕದ ಸ್ಥಳಗಳಿಗೆ ಬಿಡುವಿನ ವೇಳೆಯಲ್ಲಿ ಭೇಟಿ ನೀಡುತ್ತಾರೆ. ಆತಿಥೇಯ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಎಜ್ಬಾಸ್ಟನ್ನಲ್ಲಿ ಇಂದು (ಬುಧವಾರ, ಜುಲೈ 02) ಆರಂಭವಾಗಲಿದ್ದು, ಆಟಗಾರರು ಬ್ರಾಡ್ ರಸ್ತೆಯಲ್ಲಿ ಆಗಾಗ್ಗೆ ಅಡ್ಡಾಡಿದ್ದರು.

ಪಂದ್ಯದ ಮುನ್ನಾದಿನ ನಾಯಕ ಶುಭಮನ್ ಗಿಲ್ ಸೇರಿದಂತೆ ಒಟ್ಟು ಎಂಟು ಆಟಗಾರರು ಎಜ್ಬಾಸ್ಟನ್ನಲ್ಲಿ ಅಭ್ಯಾಸದಲ್ಲಿ ನಡೆಸಿದ್ದರು. ಉಳಿದ 10 ಮಂದಿ ವಿಶ್ರಾಂತಿ ಪಡೆದಿದ್ದರು.

ವೃತ್ತದ ಸುತ್ತ ಬಿಗಿ ಭದ್ರತೆ ಕೈಗೊಂಡಿರುವುದಾಗಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ತಿಳಿಸಿದ್ದ ಬರ್ಮಿಂಗ್ಹ್ಯಾಮ್ ಪೊಲೀಸರು, ಅನುಮಾನಾಸ್ಪದ ವಸ್ತುವಿನ ಕುರಿತು ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದರು. ಸುರಕ್ಷತೆ ದೃಷ್ಟಿಯಿಂದ ಈ ಪ್ರದೇಶದಲ್ಲಿ ಕೆಲವು ನಿರ್ಬಂಧಗಳನ್ನೂ ಹೇರಲಾಗಿತ್ತು.

ಸ್ವಲ್ವ ಹೊತ್ತಿನ ಬಳಿಕ ನಿರ್ಬಂಧಗಳನ್ನು ಸಡಿಲಿಸಿರುವುದಾಗಿ ತಿಳಿಸಿದ್ದರು.

ಸರಣಿ ಸಮಬಲದ ಮೇಲೆ ಕಣ್ಣು
ಇಂಗ್ಲೆಂಡ್ ಹಾಗೂ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟ ನಡೆಸುತ್ತಿವೆ. ಲೀಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಗೆದ್ದಿರುವ ಆತಿಥೇಯ ತಂಡ ಮುನ್ನಡೆಯ ಅಂತರವನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆದರೆ, ಈ ಪಂದ್ಯದಲ್ಲಿ ತಿರುಗೇಟು ನೀಡಿ ಸರಣಿಯನ್ನು 1–1ರಲ್ಲಿ ಸಮಬಲ ಮಾಡಿಕೊಳ್ಳುವ ಯೋಜನೆಯಲ್ಲಿ ಟೀಂ ಇಂಡಿಯಾ ಇದೆ.

ಮಧ್ಯಾಹ್ನ 3.30ಕ್ಕೆ (ಭಾರತೀಯ ಕಾಲಮಾನ) ಪಂದ್ಯ ಆರಂಭವಾಗಲಿದೆ.
.ಎಜ್ಬಾಸ್ಟನ್ನಲ್ಲಿ ಎರಡನೇ ಟೆಸ್ಟ್ ಇಂದಿನಿಂದ: ಭಾರತಕ್ಕೆ ಮತ್ತೊಂದು ಸತ್ವಪರೀಕ್ಷೆ.ಪತ್ನಿ, ಮಗಳ ಜೀವನ ನಿರ್ವಹಣೆಗೆ ಮಾಸಿಕ ₹ 4 ಲಕ್ಷ ನೀಡಿ: ಶಮಿಗೆ ಕೋರ್ಟ್ ಆದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.