ಬುಧವಾರ, ಸೆಪ್ಟೆಂಬರ್ 29, 2021
19 °C

ಧ್ವನಿ ಆಧಾರಿತ ಪಾವತಿಗೆ ಆರ್‌ಬಿಐ ಅನುಮತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಧ್ವನಿ ಆಧಾರಿತ ಹಣಕಾಸು ವಹಿವಾಟು ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ. ಧ್ವನಿ ಆಧಾರಿತ ಪಾವತಿಗಳನ್ನು ನಡೆಸಲು ಬೆಂಗಳೂರು ಮೂಲದ ಟೋನ್‌ಟ್ಯಾಗ್‌ ಕಂಪನಿಗೆ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಒಪ್ಪಿಗೆ ನೀಡಿದೆ.

ಟೋನ್‌ಟ್ಯಾಗ್ ಕಂಪನಿಯು ಧ್ವನಿ ಆಧಾರಿತ ಪಾವತಿ ವ್ಯವಸ್ಥೆಯನ್ನು ಕರ್ನಾಟಕ ಮತ್ತು ಬಿಹಾರದ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪರೀಕ್ಷಿಸಿದೆ. ₹ 1,000ವರೆಗಿನ ಪಾವತಿಯನ್ನು ಈ ವ್ಯವಸ್ಥೆಯ ಮೂಲಕ ಮಾಡಲಾಗಿದೆ. ಇಂಟರ್ನೆಟ್ ಸಂಪರ್ಕವು ಸ್ಥಿರವಾಗಿ ಇಲ್ಲದ ಕಡೆಗಳಲ್ಲಿಯೂ ಟೋನ್‌ಟ್ಯಾಗ್ ಕಂಪನಿಯು ಸ್ಮಾರ್ಟ್‌ಫೋನ್ ಹಾಗೂ ಫೀಚರ್ ಫೋನ್ ಮೂಲಕ ಧ್ವನಿ ಆಧಾರಿತ ಪಾವತಿಗಳನ್ನು ಸಾಧ್ಯವಾಗಿಸಿದೆ ಎಂದು ಪ್ರಕಟಣೆ ತಿಳಿಸಿದೆ.

‘ತಂತ್ರಜ್ಞಾನವು ಲಭ್ಯವಿದೆ. ಆರ್‌ಬಿಐ ಕೂಡ ಅನುಮತಿ ನೀಡಿದೆ. ಈಗ ಅಗತ್ಯವಿರುವ ಕಂಪನಿಗಳು ಈ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬಹುದು’ ಎಂದು ಟೋನ್‌ಟ್ಯಾಗ್ ಹೇಳಿದೆ. ಡಿಜಿಟಲ್ ವಹಿವಾಟು ನಡೆಸುವುದು ಸುಲಭ ಅಲ್ಲ ಎನ್ನುವವರಿಗೆ, ಬ್ಯಾಂಕಿಂಗ್ ಅಥವಾ ಪಾವತಿ ಕೆಲಸಗಳಿಗೆ ಆ್ಯಪ್‌ ಬಳಸುವುದು ಕಷ್ಟ ಎನ್ನುವವರಿಗೆ ಇದು ನೆರವಾಗುತ್ತದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು