ಗುರುವಾರ , ಅಕ್ಟೋಬರ್ 1, 2020
26 °C

ವೈಟ್ ವೆಸ್ಟಿಂಗ್‌ಹೌಸ್ ವಾಷಿಂಗ್ ಮೆಶಿನ್ ಈಗ ಭಾರತದಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಮೆರಿಕದ ಅತಿದೊಡ್ಡ ಗೃಹೋಪಕರಣಗಳ ಬ್ರ್ಯಾಂಡ್ ವೈಟ್-ವೆಸ್ಟಿಂಗ್‌ಹೌಸ್ ಈಗ ವಾಷಿಂಗ್ ಮೆಶಿನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಗೂ ಕಾಲಿಟ್ಟಿದೆ. ಭಾರತದ ಉತ್ಪಾದಕ ಸಂಸ್ಥೆ ಸೂಪರ್ ಪ್ಲಾಸ್ಟ್ರೋನಿಕ್ಸ್ (ಎಸ್‌ಪಿಪಿಎಲ್) ಸಹಯೋಗದಲ್ಲಿ, ಭಾರತದಲ್ಲಿ 300 ಕೋಟಿ ರೂ. ಹೂಡಿಕೆಯೊಂದಿಗೆ 7, 8 ಹಾಗೂ 9 ಕೆಜಿ ಶ್ರೇಣಿಯ ವಾಷಿಂಗ್ ಮೆಶಿನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅಮೆಜಾನ್ ಇ-ಕಾಮರ್ಸ್ ತಾಣದಲ್ಲಿ ಲಭ್ಯವಿರುವ ವಾಷಿಂಗ್ ಮೆಶಿನ್ ಬೆಲೆಯು ರೂ.7499ರಿಂದ ಆರಂಭವಾಗುತ್ತದೆ.

ಉತ್ತರ ಪ್ರದೇಶದ ನೋಯಿಡಾದಲ್ಲಿ 3 ಸಾವಿರ ಚದರಡಿ ವಿಸ್ತಾರದ ತಯಾರಿಕಾ ಘಟಕವನ್ನು ಸ್ಥಾಪಿಸಲು ಎಸ್‌ಪಿಪಿಎಲ್ ಮುಂದಾಗಿದೆ. ನೂರು ವರ್ಷಗಳ ಇತಿಹಾಸವಿರುವ ವೈಟ್-ವೆಸ್ಟಿಂಗ್‌ಹೌಸ್, ಜಾಗತಿಕವಾಗಿ ಸುಮಾರು 45 ದೇಶಗಳಲ್ಲಿ 'ವೆಸ್ಟಿಂಗ್‌ಹೌಸ್ ಎಲೆಕ್ಟ್ರಿಕ್ ಕಾರ್ಪೊರೇಶನ್' ಟ್ರೇಡ್‌ಮಾರ್ಕ್‌ನಡಿ ಕಾರ್ಯಾಚರಿಸುತ್ತಿದ್ದು, ವಿಶ್ವಾಸಾರ್ಹ ಬ್ರ್ಯಾಂಡ್‌ಗಳಲ್ಲೊಂದಾಗಿದೆ.

ಕೋವಿಡ್-19ರಿಂದಾಗಿ ಜೀವನಶೈಲಿ ಬದಲಾಗುತ್ತಿದ್ದು, ಜನರು ಗ್ರಾಮ ಪ್ರದೇಶಗಳತ್ತ ಮುಖಮಾಡುತ್ತಿದ್ದಾರೆ. ಇದರಿಂದಾಗಿ ಆರ್ಥಿಕತೆಯಲ್ಲಿಯೂ ಬದಲಾಗಲಿದ್ದು, ಗೃಹೋಪಕರಣಗಳು ಸಣ್ಣ ನಗರಗಳು ಹಾಗೂ ಹಳ್ಳಿಗಳಲ್ಲಿ ಪ್ರಾಮುಖ್ಯತೆ ಗಳಿಸಲಿವೆ. ಈ ಬೇಡಿಕೆಗಳನ್ನು ಪೂರೈಸಲು ಸಜ್ಜಾಗಿರುವುದಾಗಿ ಎಸ್‌ಪಿಪಿಎಲ್ ಹಿರಿಯ ಉಪಾಧ್ಯಕ್ಷೆ ಪಲ್ಲವಿ ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು