ಭಾನುವಾರ, ಮೇ 16, 2021
25 °C

ಸಗಟು ಹಣದುಬ್ಬರ ಶೇ 2.59ಕ್ಕೆ ಏರಿಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸಗಟು ದರ ಆಧಾರಿತ ಹಣದುಬ್ಬರ ಏರಿಕೆ –ಸಾಂದರ್ಭಿಕ ಚಿತ್ರ

ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಏರಿಕೆಯ ಪರಿಣಾಮ ಸಗಟು ದರ ಆಧಾರಿತ ಹಣದುಬ್ಬರ 2019ರ ಡಿಸೆಂಬರ್‌ನಲ್ಲಿ ಶೇ 2.59ಕ್ಕೆ ಏರಿಕೆಯಾಗಿದೆ. 

ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರುವ ‌‌ನವೆಂಬರ್‌ನಲ್ಲಿ ಶೇ 0.58ರಷ್ಟಿತ್ತು. 2018ರ ಡಿಸೆಂಬರ್‌ನಲ್ಲಿ ಶೇ 3.46ರಷ್ಟಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳಿಂದ ತಿಳಿದು ಬಂದಿದೆ. 

ಆಹಾರ ಪದಾರ್ಥಗಳ ಹಣದುಬ್ಬರ ಶೇ 11 ರಿಂದ ಶೇ 13.12ಕ್ಕೆ ಏರಿಕೆಯಾಗಿದೆ. ಮುಖ್ಯವಾಗಿ ಈರುಳ್ಳಿ ಶೇ 455, ಆಲೂಗಡ್ಡೆ ಶೇ 44.97ರಷ್ಟು ಏರಿಕೆಯಾಗುವ ಮೂಲಕ ಒಟ್ಟು ತರಕಾರಿ ಬೆಲೆ ಶೇ 69.69ರಷ್ಟು ಹೆಚ್ಚಳವಾಗಿದೆ.  

ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ನಲ್ಲಿ 6 ವರ್ಷಗಳಲ್ಲಿನ ಗರಿಷ್ಠ ಮಟ್ಟವಾದ ಶೇ 7.35ಕ್ಕೆ ತಲುಪಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು