ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಲಾಗೆ ವಿನಾಯಿತಿ | ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ: ಅಧಿಕಾರಿ ಮಾಹಿತಿ

Published 1 ಡಿಸೆಂಬರ್ 2023, 16:17 IST
Last Updated 1 ಡಿಸೆಂಬರ್ 2023, 16:17 IST
ಅಕ್ಷರ ಗಾತ್ರ

ನವದೆಹಲಿ: ಟೆಸ್ಲಾ ಕಂಪನಿಗೆ ಸುಂಕ ವಿನಾಯಿತಿ ನೀಡುವ ಸಂಬಂಧ ಆಂತರಿಕವಾಗಿ ಚರ್ಚೆಗಳು ನಡೆದಿವೆ. ಆದರೆ, ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ ಎಂದು ಸರ್ಕಾರದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಎಲೆಕ್ಟ್ರಿಕ್‌ ಕಾರುಗಳಿಗೆ ಎಂಜಿನ್‌ ಗಾತ್ರ ಮತ್ತು ವೆಚ್ಚದ ಆಧಾರದ ಮೇಲೆ ಸದ್ಯ ಶೇ 60–100ರವರೆಗೆ ಆಮದು ಸುಂಕ ಇದೆ. ಆದರೆ, ಎಲ್ಲ ಕಾರುಗಳಿಗೂ ಶೇ 40ರಷ್ಟು ಸುಂಕ ನಿಗದಿಪಡಿಸಬೇಕು ಎನ್ನುವುದು ಟೆಸ್ಲಾ ಬೇಡಿಕೆ ಆಗಿದೆ.

ವಿದ್ಯುತ್ ಚಾಲಿತ ವಾಹನಗಳ ವಲಯದಲ್ಲಿ ಕಂಪನಿ ಅಥವಾ ಉದ್ದಿಮೆಗೆಂದೇ ನಿರ್ದಿಷ್ಟವಾದ ಪ್ರೋತ್ಸಾಹಧನ ನೀಡುವುದಿಲ್ಲ ಎಂದು  ಹೇಳಿದ್ದಾರೆ. ಟೆಸ್ಲಾ ಕಂಪನಿಯು ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪನೆಗೆ ಕೆಲವೊಂದು ತೆರಿಗೆ ವಿನಾಯಿತಿಗಳನ್ನು ನೀಡುವಂತೆ ಬೇಡಿಕೆ ಇಟ್ಟಿದೆ. ಈ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ.

ಒಂದೊಮ್ಮೆ ಕೇಂದ್ರ ಸರ್ಕಾರವು ಪ್ರೋತ್ಸಾಹಧನ ನೀಡುವುದಿದ್ದರೆ ಇ.ವಿ. ತಯಾರಿಸುವ ಎಲ್ಲ ಕಂಪನಿಗಳಿಗೂ ಅನ್ವಯಿಸಲಿದೆ. ಭಾರತದಲ್ಲಿ ತಯಾರಿಕೆ ಆರಂಭಿಸಲು ಬಯಸುವವರಿಗಾಗಿ ಇರಲಿದೆ ಎಂದು ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT