ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

crude oil: ಆಕಸ್ಮಿಕ ಲಾಭ ತೆರಿಗೆ ಹೆಚ್ಚಳ

Published 2 ಜುಲೈ 2024, 14:49 IST
Last Updated 2 ಜುಲೈ 2024, 14:49 IST
ಅಕ್ಷರ ಗಾತ್ರ

ನವದೆಹಲಿ: ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ಕೇಂದ್ರ ಸರ್ಕಾರವು ಪ್ರತಿ ಟನ್‌ಗೆ ₹6 ಸಾವಿರಕ್ಕೆ ಹೆಚ್ಚಿಸಿದೆ.

ಈ ಹಿಂದೆ ಆಕಸ್ಮಿಕ ಲಾಭ ತೆರಿಗೆಯು ಪ್ರತಿ ಟನ್‌ಗೆ ₹3,250 ಇತ್ತು. ಪರಿಷ್ಕೃತ ದರವು ಮಂಗಳವಾರದಿಂದಲೇ ಜಾರಿಗೆ ಬಂದಿದೆ ಎಂದು ಸರ್ಕಾರ ತಿಳಿಸಿದೆ. 

ಪೆಟ್ರೋಲ್‌, ಡೀಸೆಲ್‌ ಮತ್ತು ವಿಮಾನ ಇಂಧನದ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್‌ಇಎಡಿ) ವಿಧಿಸದೆ ಯಥಾಸ್ಥಿತಿ ಕಾಯ್ದುಕೊಂಡಿದೆ.

2022ರ ಜುಲೈ 1ರಿಂದ ಆಕಸ್ಮಿಕ ಲಾಭ ತೆರಿಗೆಗಳನ್ನು ವಿಧಿಸಲು ಸರ್ಕಾರವು ಆರಂಭಿಸಿತು. ಪ್ರತಿ ಹದಿನೈದು ದಿನಗಳಿಗೊಮ್ಮೆ ಸರಾಸರಿ ತೈಲ ಬೆಲೆಯ ಆಧಾರದ ಮೇಲೆ ಈ ತೆರಿಗೆ ದರವನ್ನು ಪರಿಷ್ಕರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT