ಬುಧವಾರ, ನವೆಂಬರ್ 25, 2020
25 °C

ದಿನಕ್ಕೆ 22 ಕೋಟಿ ದಾನ ಮಾಡಿದ ಪ್ರೇಮ್‌ಜಿ

ಪಿಟಿಐ Updated:

ಅಕ್ಷರ ಗಾತ್ರ : | |

ಅಜೀಂ ಪ್ರೇಮ್‌ಜಿ

ಮುಂಬೈ: 2019–20ರಲ್ಲಿ ಉದಾರವಾಗಿ ದಾನ ನೀಡಿದವರ ಸಾಲಿನಲ್ಲಿ ವಿಪ್ರೊ ಕಂಪನಿಯ ಅಜೀಮ್‌ ಪ್ರೇಮ್‌ಜಿ ಅವರು ಮುಂಚೂಣಿಯಲ್ಲಿದ್ದಾರೆ.

ಪ್ರೇಮ್‌ಜಿ ಅವರು ದಿನಕ್ಕೆ ₹ 22 ಕೋಟಿ (ವಾರ್ಷಿಕ ₹ 7,904 ಕೋಟಿ) ದಾನ ನೀಡಿದ್ದಾರೆ. ಈ ಮೂಲಕ 2018–19ರಲ್ಲಿ ಅತಿ ಹೆಚ್ಚು ದಾನ ಮಾಡಿದ್ದ ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ಸ್ಥಾಪಕ ಶಿವ ನಾಡರ್‌ ಅವರನ್ನು ಹಿಂದಿಕ್ಕಿದ್ದಾರೆ ಎಂದು ಹುರುನ್‌ ಇಂಡಿಯಾ ಮತ್ತು ಎಡೆಲ್‌ಗಿವ್‌ ಫೌಂಡೇಷನ್‌ ವರದಿ ತಿಳಿಸಿದೆ.

ನಾಡರ್‌ ಅವರು ವಾರ್ಷಿಕ ₹ 795 ಕೋಟಿ ದಾನ ಮಾಡಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಹಿಂದಿನ ಬಾರಿ ₹ 826 ಕೋಟಿ ದಾನ ಮಾಡಿದ್ದರು. ಆಗ ಪ್ರೇಮ್‌ಜಿ ಮಾಡಿದ್ದ ದಾನದ ಮೊತ್ತ ₹ 426 ಕೋಟಿಗಳಷ್ಟಿತ್ತು.

ದೇಶದ ಅತ್ಯಂತ ಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ ಅವರು ವಾರ್ಷಿಕ ₹458 ಕೋಟಿ ದಾನ ನೀಡುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ಕಳೆದ ಬಾರಿ ಅವರು ₹ 402 ಕೋಟಿ ದಾನ ನೀಡಿದ್ದರು.

ಕೊರೊನಾ ನಿಯಂತ್ರಿಸಲು ದಾನ ನೀಡಿರುವ ಉದ್ಯಮಿಗಳ ಪಟ್ಟಿಯಲ್ಲಿ ಟಾಟಾ ಸನ್ಸ್‌ ₹ 1,500 ಕೋಟಿ ಯೊಂದಿಗೆ ಮುಂಚೂಣಿಯಲ್ಲಿ ಇದ್ದರೆ, ಪ್ರೇಮ್‌ ಜೀ ಅವರು ₹ 1,125 ಕೋಟಿ ಹಾಗೂ ಅಂಬಾನಿ ₹ 510 ಕೋಟಿ ನೀಡುವ ಮೂಲಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು