ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ದಾಂದಲೆ ಪ್ರಕರಣ: ಉಪಾಧ್ಯಕ್ಷನನ್ನು ಕಿತ್ತುಹಾಕಿದ ವಿಸ್ಟ್ರಾನ್‌

Last Updated 19 ಡಿಸೆಂಬರ್ 2020, 20:30 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಪಲ್‌ ಕಂಪನಿಗೆ ಗುತ್ತಿಗೆ ಆಧಾರದಲ್ಲಿ ಕೆಲವು ಮಾದರಿಯ ಫೋನ್‌ಗಳನ್ನು ಸಿದ್ಧಪಡಿಸಿಕೊಡುವ ‘ವಿಸ್ಟ್ರಾನ್’, ಭಾರತದಲ್ಲಿ ತನ್ನ ವಹಿವಾಟುಗಳನ್ನು ನೋಡಿಕೊಳ್ಳುತ್ತಿದ್ದ ವಿನ್ಸೆಂಟ್‌ ಲೀ ಅವರನ್ನು ಕಂಪನಿಯ ಉಪಾಧ್ಯಕ್ಷ ಹುದ್ದೆಯಿಂದ ಕಿತ್ತುಹಾಕಿದೆ.

ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಇರುವ ವಿಸ್ಟ್ರಾನ್‌ ಕಂಪನಿಯ ಕಾರ್ಖಾನೆಯಲ್ಲಿ ವೇತನ ಪಾವತಿ ವಿಚಾರವಾಗಿ ಕೆಲವು ಕೆಲಸಗಾರರು ಈಚೆಗೆ ದಾಂದಲೆ ನಡೆಸಿದ್ದರು. ಇದಾದ ನಂತರ ವಿಸ್ಟ್ರಾನ್ ಕಂಪನಿಯು ಆಂತರಿಕ ತನಿಖೆಯೊಂದನ್ನು ಕೈಗೊಂಡಿತ್ತು. ‘ಕಾರ್ಮಿಕ ಏಜೆನ್ಸಿಗಳನ್ನು ಮತ್ತು ಪಾವತಿ ಕೆಲಸಗಳನ್ನು ನೋಡಿಕೊಳ್ಳುವ ಪ್ರಕ್ರಿಯೆಗಳನ್ನು ಇನ್ನಷ್ಟು ಬಲಪಡಿಸಬೇಕಿದೆ. ಇವುಗಳನ್ನು ಸರಿಪಡಿಸಲು ನಾವು ತಕ್ಷಣವೇ ಕ್ರಮ ಕೈಗೊಳ್ಳುತ್ತಿದ್ದೇವೆ, ಶಿಸ್ತು ಕ್ರಮ ಜಾರಿಗೊಳಿಸುವುದೂ ಇದರಲ್ಲಿ ಸೇರಿದೆ’ ಎಂದು ವಿಸ್ಟ್ರಾನ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT