ಹೈದರಾಬಾದ್: ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲು ಇನ್ನೂ 20 ವರ್ಷಗಳು ಬೇಕಾಗಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಮಾಜಿ ಗವರ್ನರ್ ಸಿ. ರಂಗರಾಜನ್ ಶನಿವಾರ ಹೇಳಿದ್ದಾರೆ.

ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವುದು ಅಲ್ಪಾವಧಿಗೆ ಮಹತ್ವಾಕಾಂಕ್ಷೆಯ ಗುರಿಯಾಗಿದೆ. ಹೀಗಿದ್ದರೂ ಈ ಗಾತ್ರದ ಆರ್ಥಿಕತೆಯು 3,472 ಡಾಲರ್ ತಲಾ ಆದಾಯ ಪ್ರಕಾರ ಮಧ್ಯಮ ಆದಾಯದ ದೇಶ ಎಂದು ಕರೆಸಿಕೊಳ್ಳಲಿದೆ. ಮೇಲ್ಮಧ್ಯಮ ಆದಾಯದ ದೇಶದ ಮಟ್ಟಕ್ಕೆ ತಲುಪಲು ಇನ್ನೂ ಎರಡು ವರ್ಷ ಬೇಕಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಲು ತಲಾ ಆದಾಯವು ಕನಿಷ್ಠ 13,205 ಡಾಲರ್ ಇರಬೇಕು. ಹೀಗಾಗಲು ದೇಶದ ಆರ್ಥಿಕತೆಯು ಶೇ 8 ರಿಂದ ಶೇ 9ರ ಆಸುಪಾಸಿನಲ್ಲಿ ಬೆಳವಣಿಗೆ ಕಾಣಬೇಕಿದ್ದು, ಇನ್ನೂ 20 ವರ್ಷಗಳು ಬೇಕಾಗಲಿವೆ ಎಂದಿದ್ದಾರೆ.

ಭಾರತವು ಸದ್ಯ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದರೆ, ಐಎಂಎಫ್‌ನ ಪ್ರಕಾರ ತಲಾ ಆದಾಯದ ಲೆಕ್ಕದಲ್ಲಿ 197 ದೇಶಗಳ ಸಾಲಿನಲ್ಲಿ ಭಾರತವು 142ನೇ ಸ್ಥಾನದಲ್ಲಿದೆ. ಹೀಗಾಗಿ ನೀತಿ ನಿರೂಪಕರು ದೇಶದ ಆರ್ಥಿಕ ಬೆಳವಣಿಗೆ ದರವನ್ನು ಹೆಚ್ಚಿಸುವತ್ತ ತಕ್ಷಣವೇ ಹೆಚ್ಚು ಗಮನ ಹರಿಸುವ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.