ನವದೆಹಲಿ: ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್, ಫಾಲೊ ಆನ್ ಪಬ್ಲಿಕ್ ಆಫರ್ (ಎಫ್ಪಿಒ) ಮೂಲಕ ಹೂಡಿಕೆದಾರರಿಂದ ₹ 15 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ. ಜುಲೈ 15ರಿಂದ ಎಫ್ಪಿಒ ಆರಂಭವಾಗಲಿದ್ದು 17ಕ್ಕೆ ಮುಗಿಯಲಿದೆ. ಪ್ರತಿ ಷೇರಿಗೆ ₹ 12ರಂತೆ ಮೂಲ ದರ ನಿಗದಿಪಡಿಸಿದೆ.

ಬ್ಯಾಂಕ್ನ ಬಂಡವಾಳ ಸಂಗ್ರಹ ಸಮಿತಿಯು ಈ ಮೂಲ ದರ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ. ಷೇರಿನ ಗರಿಷ್ಠ ದರ ₹ 13 ಇದೆ. ಕನಿಷ್ಠ 1 ಸಾವಿರ ಷೇರುಗಳು ಮತ್ತು 1 ಸಾವಿರದ ಗುಣಕದಲ್ಲಿ ಬಿಡ್ ಸಲ್ಲಿಸಬಹುದು. ಬ್ಯಾಂಕ್ನ ಉದ್ಯೋಗಿಗೆ ಪ್ರತಿ ಷೇರಿಗೆ ₹1 ರಿಯಾಯಿತಿ ಸಿಗಲಿದೆ.

ಪುನಶ್ಚೇತನ ಯೋಜನೆಯಂತೆ, ಎಸ್ಬಿಐ ಒಳಗೊಂಡು 8 ಹಣಕಾಸು ಸಂಸ್ಥೆಗಳುಯೆಸ್ ಬ್ಯಾಂಕ್ನಲ್ಲಿ ₹ 10 ಸಾವಿರ ಕೋಟಿ ಹೂಡಿಕೆ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.