ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 15ರಷ್ಟು ಉದ್ಯೋಗಿಗಳ ವಜಾಕ್ಕೆ ಜೀ ನಿರ್ಧಾರ

Published 6 ಏಪ್ರಿಲ್ 2024, 15:48 IST
Last Updated 6 ಏಪ್ರಿಲ್ 2024, 15:48 IST
ಅಕ್ಷರ ಗಾತ್ರ

ನವದೆಹಲಿ: ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಜಿಇಇಎಲ್‌), ವೆಚ್ಚ ಕಡಿತದ ಭಾಗವಾಗಿ ಶೇ 15ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.

ಕಂಪನಿಯ ಬ್ರಾಡ್‌ಕಾಸ್ಟ್‌, ಡಿಜಿಟಲ್‌, ಸಿನಿಮಾ ಹಾಗೂ ಸಂಗೀತ ವಿಭಾಗವನ್ನು ಗ್ರಾಹಕರ ಹತ್ತಿರ ಮತ್ತಷ್ಟು ಕೊಂಡೊಯ್ಯಬೇಕಿದೆ. ಹಾಗಾಗಿ, ತಂಡದ ದಕ್ಷತೆ ಹೆಚ್ಚಿಸುವ ಮೂಲಕ ಕಂಪನಿಯ ಗುರಿ ಸಾಧನೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪುನಿತ್ ಗೋಯೆಂಕಾ ಅವರು, ಷೇರುಪೇಟೆಗೆ ಮಾಹಿತಿ ನೀಡಿದ್ದಾರೆ.

2022–23ನೇ ಸಾಲಿನ ವಾರ್ಷಿಕ ವರದಿ ಅನ್ವಯ ಕಂಪನಿಯಲ್ಲಿ 3,437 ಕಾಯಂ ಉದ್ಯೋಗಿಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT