ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೊಮಾಟೊ ಕಂಪನಿ ತೊರೆದ ಸಹಸಂಸ್ಥಾಪಕಿ ಆಕೃತಿ ಚೋಪ್ರಾ

ಆನ್‌ಲೈನ್ ಫುಡ್‌ ಆರ್ಡರ್ ಮತ್ತು ಡೆಲಿವರಿ ಕಂಪನಿಯಾದ ಜೊಮಾಟೊದ ಸಹ ಸಂಸ್ಥಾಪಕಿ ಆಕೃತಿ ಚೋಪ್ರಾ ಅವರು ಕಂಪನಿ ತೊರೆದಿದ್ದಾರೆ.
Published : 28 ಸೆಪ್ಟೆಂಬರ್ 2024, 10:07 IST
Last Updated : 28 ಸೆಪ್ಟೆಂಬರ್ 2024, 10:07 IST
ಫಾಲೋ ಮಾಡಿ
Comments

ಬೆಂಗಳೂರು: ಆನ್‌ಲೈನ್ ಫುಡ್‌ ಆರ್ಡರ್ ಮತ್ತು ಡೆಲಿವರಿ ಕಂಪನಿಯಾದ ಜೊಮಾಟೊದ ಸಹ ಸಂಸ್ಥಾಪಕಿ ಆಕೃತಿ ಚೋಪ್ರಾ ಅವರು ಕಂಪನಿ ತೊರೆದಿದ್ದಾರೆ.

ಸೆಪ್ಟೆಂಬರ್ 27ರಂದು ಅವರ ರಾಜೀನಾಮೆ ಅಂಗೀಕಾರಗೊಂಡಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಆಕೃತಿ ಚೋಪ್ರಾ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಅವರ ಸೇವೆಯನ್ನು ಕಂಪನಿ ಸ್ಮರಿಸುತ್ತದೆ ಎಂದು ಹೇಳಿದ್ದಾರೆ.

ಕಳೆದ 13 ವರ್ಷದಿಂದ ಜೊಮಾಟೊ ಜೊತೆ ಇದ್ದ ಆಕೃತಿ ಅವರು, ಕಂಪನಿಯ ಹಣಕಾಸು ಹಾಗೂ ಕಾನೂನು ವ್ಯವಹಾರಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT