ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಕ್ ಜನರಲ್‌ ಇನ್ಶುರೆನ್ಸ್‌ನ ಶೇ 51 ಷೇರು ಖರೀದಿಸಲಿರುವ ಜೂರಿಚ್‌ ಇನ್ಶುರೆನ್ಸ್

Published 2 ನವೆಂಬರ್ 2023, 11:41 IST
Last Updated 2 ನವೆಂಬರ್ 2023, 11:41 IST
ಅಕ್ಷರ ಗಾತ್ರ

ಮುಂಬೈ: ಸ್ವಿಟ್ಜರ್ಲೆಂಡ್‌ನ ಜೂರಿಚ್‌ ಇನ್ಶುರೆನ್ಸ್‌ ಕಂಪನಿಯು ಕೋಟಕ್‌ ಜನರಲ್‌ ಇನ್ಶುರೆನ್ಸ್‌ನಲ್ಲಿ ಶೇ 51ರಷ್ಟು ಷೇರುಗಳನ್ನು ₹4,051 ಕೋಟಿಗೆ ಖರೀದಿಸಲಿದೆ ಎಂದು ಕೋಟಕ್‌ ಮಹೀಂದ್ರ ಬ್ಯಾಂಕ್‌ ಗುರುವಾರ ತಿಳಿಸಿದೆ.

ಕೋಟಕ್‌ ಮಹೀಂದ್ರ ಬ್ಯಾಂಕ್‌ ಮತ್ತು ಕೋಟಕ್‌ ಮಹೀಂದ್ರ ಜನರಲ್ ಇನ್ಶುರೆನ್ಸ್ ಕಂಪನಿಯು ಷೇರು ಮಾರಾಟ ಸಂಬಂಧ ಜೂರಿಚ್‌ ಇನ್ಶುರೆನ್ಸ್ ಕಂಪನಿಯೊಂದಿಗೆ ನಿರ್ಣಾಯಕ ಒಪ್ಪಂದ ಮಾಡಿಕೊಂಡಿವೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ. ಜೂರಿಚ್‌ ಕಂಪನಿಯು ಮೂರು ವರ್ಷಗಳಲ್ಲಿ ಶೇ 19ರಷ್ಟು ಹೆಚ್ಚುವರಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT