ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ಮಾರಾಟವನ್ನು ತಕ್ಷಣವೇ ನಿಲ್ಲಿಸಲು ‘ಗೋ ಫರ್ಸ್ಟ್‌’ಗೆ ಡಿಜಿಸಿಎ ತಾಕೀತು

Published 8 ಮೇ 2023, 10:12 IST
Last Updated 8 ಮೇ 2023, 10:12 IST
ಅಕ್ಷರ ಗಾತ್ರ

ನವದೆಹಲಿ: ವಿಮಾನ ಟಿಕೆಟ್‌ಗಳನ್ನು ನೇರ ಅಥವಾ ಪರೋಕ್ಷವಾಗಿ ಬುಕಿಂಗ್‌ ಮಾಡುವುದು ಮತ್ತು ಮಾರಾಟ ಮಾಡುವುದನ್ನು ತಕ್ಷಣವೇ ನಿಲ್ಲಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ–ಡಿಜಿಸಿಎ ವಿಮಾನಯಾನ ಸಂಸ್ಥೆ ‘ಗೋ ಫರ್ಸ್ಟ್‌’ಗೆ ಸೋಮವಾರ ಆದೇಶಿಸಿದೆ.

ಮುಂದಿನ ಸೂಚನೆಯವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ಡಿಜಿಸಿಎ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಅಲ್ಲದೆ, ಸುರಕ್ಷಿತ, ದಕ್ಷ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಸೇವೆ ಮುಂದುವರಿಸಲು ವಿಫಲವಾದ ಕಾರಣಕ್ಕಾಗಿ ವಿಮಾನ ಯಾನ ಸಂಸ್ಥೆಗೆ ನೋಟಿಸ್ ಅನ್ನೂ ನೀಡಲಾಗಿದೆ.

ಇದಕ್ಕೂ ಮುನ್ನ ಮೇ 15ರವರೆಗೆ ಟಿಕೆಟ್ ಮಾರಾಟವನ್ನು ಸ್ಥಗಿತಗೊಳಿಸಿದ್ದ ಏರ್‌ಲೈನ್ ಮೇ 12ರವರೆಗೆ ವಿಮಾನ ಹಾರಾಟವನ್ನು ರದ್ದುಗೊಳಿಸಿತ್ತು.

ತನಗೆ ಹಣಕಾಸಿನ ಹೊಣೆಗಾರಿಕೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ಸ್ವಯಂಪ್ರೇರಿತವಾಗಿ ‘ಗೋ ಫರ್ಸ್ಟ್‌’ ತಿಳಿಸಿತ್ತು. ಕಂಪನಿಯ ಮುಖ್ಯಸ್ಥ ಕೌಶಿಕ್ ಖೋನಾ ಅವರು ಈ ವಿಚಾರ ಬಹಿರಂಗಪಡಿಸಿದ್ದರು.

ಹಣಕಾಸಿನ ಹೊಣೆಗಾರಿಕೆಯನ್ನು ನಿಭಾಯಿಸಲು ಆಗುತ್ತಿಲ್ಲ ಎಂದು ಸ್ವಯಂಪ್ರೇರಿತವಾಗಿ ಎನ್‌ಸಿಎಲ್‌ಟಿಗೆ ತಿಳಿಸಬೇಕಾಗಿದ್ದುದು ದುರದೃಷ್ಟಕರ. ಆದರೆ, ಕಂಪನಿಯ ಹಿತಾಸಕ್ತಿಯನ್ನು ಕಾಯಲು ಇದನ್ನು ಮಾಡಬೇಕಿತ್ತು ಎಂದು ಖೋನಾ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT