ನಾವೆಲ್ಲರೂ ಶ್ರೀಮಂತರಾಗಬೇಕೆಂದು ಬಯಸುತ್ತೇವೆ. ಆದರೆ ಕೇವಲ ತಿಂಗಳ ಸಂಬಳ ನೆಚ್ಚಿಕೊಂಡು ಆರ್ಥಿಕವಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ದುಡ್ಡನ್ನು ವೇಗವಾಗಿ ಬೆಳೆಸಬೇಕಾದರೆ ಗಳಿಸಿದ್ದನ್ನು ಉತ್ತಮ ರೀತಿಯಲ್ಲಿ ಹೂಡಿಕೆ ಮಾಡಿ ಪರ್ಯಾಯ ಆದಾಯ ಗಳಿಕೆಯ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಬೇಕು. ಆದರೆ ಬಹುತೇಕರಿಗೆ ಅವರ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಎಲ್ಲಿ ಹೂಡಿಕೆ ಮಾಡಬೇಕು? ಯಾವ ರೀತಿಯ ಹೂಡಿಕೆ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಬೇಕು? ಎಷ್ಟು ಹೂಡಿಕೆ ರಿಸ್ಕ್ ತೆಗೆದುಕೊಳ್ಳಬೇಕು? ಎನ್ನುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ತಿಳಿದಿಲ್ಲ. ಯಾರೋ ಹೇಳಿದರು, ಪರಿಚಯಸ್ಥರು ಸಲಹೆ ಕೊಟ್ಟರು ಎಂಬ ಕಾರಣಕ್ಕೆ ಅನೇಕರು ಹೂಡಿಕೆ ಮಾಡಿ ಸಮಸ್ಯೆ ತಂದುಕೊಳ್ಳುತ್ತಾರೆ. ಬನ್ನಿ, ಈ ಲೇಖನದಲ್ಲಿ ಹೂಡಿಕೆಯ ರಿಸ್ಕ್ ನಿಭಾಯಿಸುವ ಜೊತೆಜೊತೆಗೆ ಸಂಪತ್ತನ್ನೂ ಗಳಿಸುವುದು ಹೇಗೆ ಎನ್ನುವ ಬಗ್ಗೆ ವಿವರವಾಗಿ ತಿಳಿಯೋಣ.

ನೀವು ಎಷ್ಟು ರಿಸ್ಕ್ ತೆಗೆದುಕೊಳ್ಳಬಹುದು ನೋಡಿಕೊಳ್ಳಿ: ಹೂಡಿಕೆ ಮಾಡಿರುವ ಬಂಡವಾಳದ ಮೊತ್ತವನ್ನು ಅಕಸ್ಮಾತಾಗಿ ಕಳೆದುಕೊಂಡರೆ ಅದನ್ನು ಎಷ್ಟರಮಟ್ಟಿಗೆ ಸಹಿಸಿಕೊಳ್ಳಬಹುದು ಎನ್ನುವುದೇ ರಿಸ್ಕ್ ಟಾಲರೆನ್ಸ್. ಯಾವ ವ್ಯಕ್ತಿ ಎಷ್ಟು ರಿಸ್ಕ್ ತೆಗೆದುಕೊಳ್ಳಬಹುದು ಎನ್ನುವುದು ಅವರವರ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿದೆ. ಉದಾಹರಗೆ 21 ವರ್ಷದ ಅವಿವಾಹಿತ ಯುವಕನಿಗೆ ಹಣಕಾಸಿಗೆ ಸಂಬಂಧಿಸಿದಂತೆ ಹೆಚ್ಚಿನ ಜವಾಬ್ದಾರಿಗಳು ಇರುವುದಿಲ್ಲ. ಆದರೆ ವಿವಾಹಿತರಾಗಿರುವ 45 ವರ್ಷದ ವ್ಯಕ್ತಿಗೆ ಮಕ್ಕಳು, ಮನೆ ನಿರ್ವಹಣೆ, ಆರೋಗ್ಯ ವೆಚ್ಚಗಳು ಸೇರಿದಂತೆ ಹೆಚ್ಚಿನ ಹಣಕಾಸಿನ ಜವಾಬ್ದಾರಿಗಳಿರುತ್ತವೆ. ಹಾಗಾಗಿ ಸಾಮಾನ್ಯವಾಗಿ ಚಿಕ್ಕ ವಯಸ್ಸಿನ ಹೂಡಿಕೆದಾರರು ಹಿರಿಯ ವಯಸ್ಸಿನವರಿಗಿಂತ ಹೆಚ್ಚು ಹೂಡಿಕೆ ರಿಸ್ಕ್ ತೆಗೆದುಕೊಳ್ಳಬಹುದು ಎನ್ನುವುದು ಒಂದು ಲೆಕ್ಕಾಚಾರ. ವಯಸ್ಸು ಚಿಕ್ಕದಿದ್ದಾಗ ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಗಳತ್ತ ಹೆಚ್ಚು ಗಮನ ಕೊಡಬೇಕು. ವೃತ್ತಿಯ ನಿವೃತ್ತಿಯ ಅಂಚಿಗೆ ಬರುವಾಗ ಫಿಕ್ಸೆಡ್ ಡೆಪಾಸಿಟ್, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಅಂಚೆ ಕಚೇರಿ ಹೂಡಿಕೆಗಳು ಸೇರಿದಂತೆ ಇನ್ನಿತರ ಸುರಕ್ಷತೆಯ ಹೂಡಿಕೆಗಳನ್ನು ಪರಿಗಣಿಸಬೇಕು. ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಇದು ಹೀಗೆ ಎಂದಲ್ಲ. ಆಗಲೇ ಹೇಳಿದ ಹಾಗೆ ಎಷ್ಟು ರಿಸ್ಕ್ ತೆಗೆದುಕೊಳ್ಳಬಹುದು ಎನ್ನುವುದು ನಿಮ್ಮ ಹಣಕಾಸಿನ ಸ್ಥಿತಿಗತಿ ಮೇಲೆ ನಿಂತಿರುತ್ತದೆ. ಅದಕ್ಕೆ ತಕ್ಕಂತೆ ನಿಮ್ಮ ರಿಸ್ಕ್ ಹೊಂದಿಸಿಕೊಳ್ಳಬೇಕಾಗುತ್ತದೆ.

ಬೇಕಾದಾಗ ತೆಗೆದುಕೊಳ್ಳಬಹುದಾದ ಹಣ ನಿಮ್ಮ ಹೂಡಿಕೆಯ ಭಾಗವಾಗಿರಲಿ: ನಿಮ್ಮ ತಕ್ಷಣದ ಅಗತ್ಯಗಳಿಗೆ, ಅನಿರೀಕ್ಷಿತ ಖರ್ಚುಗಳಿಗೆ ಅಗತ್ಯವಿರುವ ಹಣವನ್ನು ಎಂದಿಗೂ ಷೇರು ಮಾರುಕಟ್ಟೆ ಮತ್ತು ಈಕ್ವಿಟಿ ಮ್ಯೂಚುವಲ್ ಫಂಡ್ಗಳಲ್ಲಿ ತೊಡಗಿಸಬೇಡಿ. ತಕ್ಷಣಕ್ಕೆ ಅಗತ್ಯವಿರುವ ಹಣವನ್ನು ಅಲ್ಲಿ ತೊಡಗಿಸಿದರೆ ಮಾರುಕಟ್ಟೆ ತಾತ್ಕಾಲಿಕವಾಗಿ ಕುಸಿದ ಸಂದರ್ಭದಲ್ಲಿ ಹಣ ವಾಪಸ್ ಪಡೆದುಕೊಳ್ಳಬೇಕಾದರೆ ನಿಮಗೆ ನಷ್ಟ ಉಂಟಾಗುತ್ತದೆ. ಹಾಗಾಗಿ ತುರ್ತು ಅಗತ್ಯಗಳಿಗೆ ಬೇಕಾದ ಹಣವನ್ನು ಎಮರ್ಜೆನ್ಸಿ ಫಂಡ್ನಲ್ಲಿ ಇಟ್ಟುಕೊಳ್ಳಿ. ಓವರ್ ನೈಟ್ ಫಂಡ್ಸ್, ಲಿಕ್ವಿಡ್ ಫಂಡ್ಸ್, ಉಳಿತಾಯ ಖಾತೆಯಲ್ಲಿ 3 ರಿಂದ 6 ತಿಂಗಳ ಖರ್ಚಿಗೆ ಬೇಕಾಗುವ ಹಣ ಇಟ್ಟುಕೊಂಡಾಗ ನಿರುಮ್ಮಳವಾಗಿ ಹೂಡಿಕೆ ಮುಂದುವರಿಸಬಹುದು.

ವಿವಿಧ ಹೂಡಿಕೆಗಳ ಮಿಶ್ರಣವಿರಲಿ: ಹೂಡಿಕೆ ಮಾಡುವಾಗ ಷೇರು, ಮ್ಯೂಚುವಲ್ ಫಂಡ್, ಚಿನ್ನ, ಸರ್ಕಾರಿ ಬಾಂಡ್ಗಳು, ಎನ್ಪಿಎಸ್, ಅಂಚೆ ಕಚೇರಿ ಹೂಡಿಕೆಗಳು, ರಿಯಲ್ ಎಸ್ಟೇಟ್ ಹೀಗೆ ಒಂದು ಹದವಾದ ಮಿಶ್ರಣವಿರಬೇಕು. ಮಾರುಕಟ್ಟೆ ಏರಿಳಿತಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಹೂಡಿಕೆ ಮಾಡಬೇಕಾದರೆ ಹೈ ರಿಸ್ಕ್ ಮತ್ತು ಲೋ ರಿಸ್ಕ್ ಹೂಡಿಕೆಗಳ ಜೊತೆಯಾಟವಿರಬೇಕು. ಯಾವ ರೀತಿಯ ಹೂಡಿಕೆಗೆ ಎಷ್ಟು ಹಣ ತೊಡಗಿಸಬೇಕು ಎನ್ನುವುದನ್ನು ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಅಳೆಯಬೇಕು. ಹೀಗೆ ಮಾಡಿದಾಗ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಗಳಿಕೆ ಸಾಧ್ಯ.

ಕಾಲ ಕಾಲಕ್ಕೆ ಹೂಡಿಕೆಗಳ ಪರಾಮರ್ಶೆ ನಡೆಸಿ: ನಮ್ಮ ದೇಹದ ಆರೋಗ್ಯ ಸ್ಥಿತಿಯನ್ನು ಕಾಲಕಾಲಕ್ಕೆ ಪರೀಕ್ಷಿಸುವ ಹಾಗೆ ವಿವಿಧ ಹೂಡಿಕೆಗಳ ಆರೋಗ್ಯವನ್ನು ನೀವು ಆಗಾಗ ವಿಶ್ಲೇಷಣೆಗೆ ಒಳಪಡಿಸಬೇಕು. ಹಾಗೆಂದ ಮಾತ್ರಕ್ಕೆ ಪ್ರತಿ ದಿನ ಬೆಳಗ್ಗೆ ಎದ್ದ ಕೂಡಲೇ ಹೂಡಿಕೆಗಳನ್ನು ಗಮನಿಸುತ್ತಿರಬೇಕು ಎಂದಲ್ಲ. ವರ್ಷಕ್ಕೊಮ್ಮೆ ಹೂಡಿಕೆಗಳ ಪರಾಮರ್ಶೆಗೆ ಇಳಿಯಬೇಕು. ಅರ್ಥ ವ್ಯವಸ್ಥೆಯ ಸ್ಥಿತಿಗತಿಗೆ ಅನುಗುಣವಾಗಿ ಹೂಡಿಕೆ ವಿಧಾನದಲ್ಲಿ ಏನಾದರು ಬದಲಾವಣೆ ಮಾಡಿಕೊಳ್ಳಬೇಕೇ ನೋಡಬೇಕು. ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಗಳಲ್ಲಿ ಹಣ ಹಾಕಿದಾಗ ಅದರ ಬೆಳವಣಿಗೆಗೆ ಸಮಯ ಕೊಡಬೇಕು. ಇವತ್ತು ಹೂಡಿಕೆ ಮಾಡಿ, ನಾಳೆ ಹೆಚ್ಚು ಹಣ ಗಳಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಬಾರದು.

ಅಲ್ಪ ಗಳಿಕೆ ದಾಖಲಿಸಿದ ಷೇರು ಸೂಚ್ಯಂಕಗಳು

ಮಾರ್ಚ್ 28ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಅತ್ಯಲ್ಪ ಗಳಿಕೆ ದಾಖಲಿಸಿವೆ. 77414 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.66ರಷ್ಟು ಗಳಿಸಿಕೊಂಡಿದೆ. 23519 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.72ರಷ್ಟು ಜಿಗಿದಿದೆ. ಆದರೆ ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಶೇ 0.32ರಷ್ಟು ಕುಸಿತ ಕಂಡಿದ್ದರೆ ಸ್ಮಾಲ್ ಕ್ಯಾಪ್ ಶೇ 0.15ರಷ್ಟು ಇಳಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಮಂದಗತಿಯ ವಹಿವಾಟು ನಡೆದರೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶಿಯ ಮಾರುಕಟ್ಟೆಯಲ್ಲಿ ಷೇರುಗಳ ಖರೀದಿ ಮಾಡುತ್ತಿರುವುದು ಸೂಚ್ಯಂಕಗಳು ಕೊಂಚ ಸಕಾರಾತ್ಮಕವಾಗಿ ಕಂಡುಬರಲು ಕಾರಣವಾಗಿದೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.16 ಫೈನಾನ್ಸ್ ಶೇ 2.06 ಬ್ಯಾಂಕ್ ನಿಫ್ಟಿ ಶೇ 1.92 ಎಫ್ಎಂಸಿಜಿ ಶೇ 1.14 ಸರ್ವಿಸ್ ಶೇ 1.06 ಎನರ್ಜಿ ಶೇ 0.29ರಷ್ಟು ಗಳಿಸಿಕೊಂಡಿವೆ. ನಿಫ್ಟಿ ಮಾಧ್ಯಮ ಶೇ 4.68 ಫಾರ್ಮಾ ಶೇ 2.26 ಆಟೊ ಶೇ 2.12 ರಿಯಲ್ ಎಸ್ಟೇಟ್ ಶೇ 1.33 ಮತ್ತು ಲೋಹ ಶೇ 1.21ರಷ್ಟು ಕುಸಿದಿವೆ. ಇಳಿಕೆ – ಗಳಿಕೆ: ವಾರದ ಲೆಕ್ಕಾಚಾರದಲ್ಲಿ ನಿಫ್ಟಿಯಲ್ಲಿ ಸಿಪ್ಲಾ ಶೇ 5.36 ಇಂಡಸ್ಇಂಡ್ ಬ್ಯಾಂಕ್ ಶೇ 5.28 ಡಾ. ರೆಡ್ಡೀಸ್ ಲ್ಯಾಬ್ಸ್ ಶೇ 4.75 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 4.75 ಟಾಟಾ ಮೋಟರ್ಸ್ ಶೇ 4.1 ಟೈಟನ್ ಕಂಪನಿ ಶೇ 3.15 ಸನ್ ಫಾರ್ಮಾ ಶೇ 2.89 ಶ್ರೀರಾಮ್ ಫೈನಾನ್ಸ್ ಶೇ 2.84 ಬಜಾಜ್ ಆಟೊ ಶೇ 2.59 ಮಾರುತಿ ಸುಜುಕಿ ಶೇ 2.25 ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 1.93 ಮತ್ತು ಟಾಟಾ ಸ್ಟೀಲ್ ಶೇ 1.91ರಷ್ಟು ಕುಸಿದಿವೆ. ಬಜಾಜ್ ಫಿನ್ಸರ್ವ್ ಶೇ 9.04 ಟಾಟಾ ಕನ್ಸ್ಯೂಮರ್ ಶೇ 4.62 ಗ್ರಾಸಿಮ್ ಇಂಡಸ್ಟ್ರೀಸ್ ಶೇ 4.5 ಅಲ್ಟ್ರಾಟೆಕ್ ಸಿಮೆಂಟ್ ಶೇ 4.43 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 4.17 ಎಚ್ಡಿಎಫ್ಸಿ ಬ್ಯಾಂಕ್ ಶೇ 3.31 ಟ್ರೆಂಟ್ ಶೇ 3.17 ಬ್ರಿಟಾನಿಯಾ ಶೇ 2.57 ಹಿರೋ ಮೋಟೋ ಕಾರ್ಪ್ ಶೇ 2.49 ಎಸ್ಐಬಿ ಶೇ 2.47 ಎಕ್ಸಿಸ್ ಬ್ಯಾಂಕ್ ಶೇ 2.42 ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಶೇ 2.31ರಷ್ಟು ಗಳಿಸಿಕೊಂಡಿವೆ.

ಮುನ್ನೋಟ: ಸದ್ಯದ ಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಏರಿಳಿತದ ಪರಿಸ್ಥಿತಿ ಮುಂದುವರಿಯಲಿದೆ. ಏಪ್ರಿಲ್ 7 ರಂದ 9ರ ವರೆಗೆ ಆರ್ಬಿಐನ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದ್ದು ಬಡ್ಡಿ ದರದ ಬಗ್ಗೆ ಯಾವ ನಿರ್ಣಯ ಹೊರಬೀಳಲಿದೆ ಎಂಬ ಕುತೂಹಲ ಹೂಡಿಕೆದಾರರಿಗಿದೆ. ಇನ್ನು ಏಪ್ರಿಲ್ 15ರಿಂದ ಕಂಪನಿಗಳ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳ ಪರ್ವ ಶುರುವಾಗಲಿದೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶಿಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.