ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಪಿಐ: ₹1.7 ಲಕ್ಷ ಕೋಟಿ ಹೂಡಿಕೆ

ವಿದೇಶಿ ಬಂಡವಾಳದ ಬೃಹತ್‌ ಹೂಡಿಕೆಗೆ ಸಾಕ್ಷಿಯಾದ 2023
Published 1 ಜನವರಿ 2024, 1:04 IST
Last Updated 1 ಜನವರಿ 2024, 1:04 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಸವಾಲುಗಳ ನಡುವೆಯೂ ಭಾರತದ ಅರ್ಥ ವ್ಯವಸ್ಥೆಯ ಮೂಲಭೂತ ಅಂಶಗಳು ಬಲವಾಗಿರುವುದರ ವಿಶ್ವಾಸದಿಂದಾಗಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) 2023ರಲ್ಲಿ ದೇಶದ ಷೇರು ಮಾರುಕಟ್ಟೆಯಲ್ಲಿ ₹1.7 ಲಕ್ಷ ಕೋಟಿಯಷ್ಟು ಹೂಡಿಕೆ ಮಾಡಿದ್ದಾರೆ.

ಡಿಸೆಂಬರ್‌ನಲ್ಲಿ ₹66,134 ಕೋಟಿ ಒಳಹರಿವು ಆಗಿದೆ; 2023ರ ವರ್ಷವು ಎಫ್‌ಪಿಐಗಳ ಬೃಹತ್‌ ಹೂಡಿಕೆ ಕಂಡಿದೆ.

2024ರ ಉದ್ದಕ್ಕೂ ಅಮೆರಿಕದ ಬಡ್ಡಿ ದರದಲ್ಲಿ ನಿರಂತರ ಇಳಿಕೆಯ ಸಾಧ್ಯತೆ ಇರುವುದರಿಂದ ಎಫ್‌ಪಿಐಗಳು ಭಾರತದಲ್ಲಿ ಹೆಚ್ಚು ಹೂಡಿಕೆ ಮಾಡುವ ನಿರೀಕ್ಷೆ ಇದೆ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ.ವಿಜಯ್‌ಕುಮಾರ್‌ ಹೇಳಿದ್ದಾರೆ. ಅಮೆರಿಕ ಬಾಂಡ್ ಇಳುವರಿಯಲ್ಲಿ ಸ್ಥಿರವಾದ ಇಳಿಕೆಯು ಎಫ್‌ಪಿಐಗಳ ಕಾರ್ಯತಂತ್ರದಲ್ಲಿ ಈ ಬದಲಾವಣೆಗೆ ಕಾರಣವಾಗಿದೆ ಎಂದೂ ಹೇಳಿದ್ದಾರೆ. 

2023ರಲ್ಲಿ ವಿದೇಶಿ ಹೂಡಿಕೆದಾರರು ಷೇರುಗಳಲ್ಲಿ ₹1.71 ಲಕ್ಷ ಕೋಟಿ ಮತ್ತು ಸಾಲದ ಮಾರುಕಟ್ಟೆಯಲ್ಲಿ
₹68,663 ಕೋಟಿಯಷ್ಟು ಹೂಡಿಕೆ ಮಾಡಿದ್ದಾರೆ. ಬಂಡವಾಳ ಮಾರುಕಟ್ಟೆಯಲ್ಲಿ ₹2.4 ಲಕ್ಷ ಕೋಟಿ ಹೂಡಿಕೆ ಆಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಜಾಗತಿಕ ಕೇಂದ್ರಿಯ ಬ್ಯಾಂಕ್‌ಗಳು ಬಡ್ಡಿ ದರವನ್ನು ನಿರಂತರವಾಗಿ ಏರಿಸಿದ್ದರಿಂದಾಗಿ 2022ರಲ್ಲಿ ಎಫ್‌ಪಿಐಗಳಿಂದ ₹1.21 ಲಕ್ಷ ಕೋಟಿಗಳಷ್ಟು ಹೊರಹರಿವು ಆಗಿತ್ತು. ಎಫ್‌ಪಿಐಗಳ ಹೂಡಿಕೆ 2021ರಲ್ಲಿ ₹25,752 ಕೋಟಿ, 2020ರಲ್ಲಿ ₹1.7 ಲಕ್ಷ ಕೋಟಿ ಮತ್ತು 2019ರಲ್ಲಿ ₹1.01 ಲಕ್ಷ ಕೋಟಿ ಆಗಿತ್ತು.

ಭಾರತದ ಅರ್ಥ ವ್ಯವಸ್ಥೆಯು ದೃಢವಾಗಿ ಬೆಳೆಯಬಹುದು ಎಂಬ ನಿರೀಕ್ಷೆ, ಜಾಗತಿಕ ಬಿಕ್ಕಟ್ಟು
ಗಳಿಂದ ಬಾಧಿತವಾಗದಿರುವ ಸಾಮರ್ಥ್ಯ, ದೇಶೀಯವಾಗಿ ಹೆಚ್ಚಿನ ಬಳಕೆ ಸಾಮರ್ಥ್ಯವು ದೇಶವನ್ನು ಹೂಡಿಕೆಗೆ ಆಕರ್ಷಕ ತಾಣವಾಗಿಸಿದೆ ಎಂದು ಅರಿಹಂತ್‌ ಕ್ಯಾಪಿಟಲ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಅಭಿಷೇಕ್‌ ಜೈನ್‌ ಅಭಿಪ್ರಾಯಪಟ್ಟಿದ್ಧಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT