ಬುಧವಾರ, ಮಾರ್ಚ್ 29, 2023
27 °C

ಎನ್‌ಎಸ್‌ಸಿ, ಅಂಚೆ ಕಚೇರಿ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಂಚೆ ಕಚೇರಿಯಲ್ಲಿನ ಟರ್ಮ್‌ ಠೇವಣಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಎನ್ಎಸ್‌ಸಿ ಸೇರಿದಂತೆ ಸಣ್ಣ ಉಳಿತಾಯದ ಮೇಲಿನ ಬಡ್ಡಿದರವನ್ನು ಜನವರಿ 1 ರಿಂದ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಮತ್ತು ಹೆಣ್ಣು ಮಕ್ಕಳ ಉಳಿತಾಯ ಯೋಜನೆ ಸುಕನ್ಯಾ ಸಮೃದ್ಧಿ ಮೇಲಿನ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ)ದ ಬಡ್ಡಿ ದರವು ಸದ್ಯ ಶೇ 6.8ರಷ್ಟಿದ್ದು, ಜನವರಿ 1 ರಿಂದ ಶೇ 7ಕ್ಕೆ ಏರಲಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಈಗ ಶೇ 7.6ರ ಬಡ್ಡಿ ನೀಡಲಾಗುತ್ತಿದ್ದು, ಅದು ಈಗ ಶೇ. 8ಕ್ಕೆ ಹೆಚ್ಚಳವಾಗಿದೆ.

1 ರಿಂದ 5 ವರ್ಷಗಳ ಅವಧಿಯ ಅಂಚೆ ಕಚೇರಿಯ ಅವಧಿ ಠೇವಣಿ ಮೇಲಿನ ಬಡ್ಡಿ ದರಗಳು ಶೇ 1.1 ರಷ್ಟು ಏರಿಕೆಯಾಗಲಿದೆ.

ಮಾಸಿಕ ಆದಾಯ ಯೋಜನೆಯ ಮೇಲಿನ ಬಡ್ಡಿಯು ಶೇ 6.7 ರಿಂದ 7.1ಕ್ಕೆ ಏರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು