ವ್ಯಕ್ತಿ ನಿವೃತ್ತನಾದ ನಂತರ ಆತನಿಗೆ ನಿರಂತರ ಆದಾಯ ನೀಡುವ ಮೂಲವೊಂದು ಬೇಕಲ್ಲ? ಅಂತಹ ಮೂಲವನ್ನು ಒದಗಿಸುವುದು ಆ್ಯನ್ಯುಟಿ ಯೋಜನೆ. ಜೀವ ವಿಮಾ ಕಂಪನಿಗಳು ಆ್ಯನ್ಯುಟಿ ಯೋಜನೆಯನ್ನು ಸಾಮಾನ್ಯವಾಗಿ ಹೊಂದಿರುತ್ತವೆ, ಗ್ರಾಹಕರಿಗೆ ಅದನ್ನು ಒದಗಿಸುತ್ತವೆ. ನಿವೃತ್ತಿಯ ವಯಸ್ಸಿನ ನಂತರ, ವ್ಯಕ್ತಿಯ ಜೀವಿತಾವಧಿಯವರೆಗೆ ಆತನಿಗೆ ನಿರಂತರವಾಗಿ ಆದಾಯ ಒದಗಿಸುವ ಯೋಜನೆ ಇದು.

ಆ್ಯನ್ಯುಟಿ ಅಂದರೇನು?

ಇದೊಂದು ಬಗೆಯ ಹಣಕಾಸಿನ ಉತ್ಪನ್ನ. ಜೀವ ವಿಮಾ ಕಂಪನಿಗಳು ನಿರ್ವಹಿಸುವ ಈ ಹಣಕಾಸಿನ ಉತ್ಪನ್ನದಲ್ಲಿ ನಿಗದಿತ ಮೊತ್ತವನ್ನು ತೊಡಗಿಸಲಾಗುತ್ತದೆ. ಈ ಮೊತ್ತವನ್ನು ಒಂದೇ ಬಾರಿಗೆ ಅಥವಾ ಹಲವು ಕಂತುಗಳಲ್ಲಿ ಪಾವತಿ ಮಾಡಬಹುದು. ವಿಮಾ ಕಂಪನಿಯು ಈ ಮೊತ್ತವನ್ನು ನಿರ್ವಹಣೆ ಮಾಡುತ್ತಿರುತ್ತದೆ, ಹಣ ತೊಡಗಿಸಿದ ವ್ಯಕ್ತಿಯ ಜೀವಿತಾವಧಿಯವರೆಗೆ ನಿರಂತರವಾಗಿ ಆದಾಯ ಸಿಗುವಂತೆ ಕಂಪನಿ ನೋಡಿಕೊಳ್ಳುತ್ತದೆ.

ಹೂಡಿಕೆಯ ನಂತರದಲ್ಲಿ ಸಿಗುವ ನಿರಂತರವಾದ ಆದಾಯವು ಆ್ಯನ್ಯುಟಿ ಯೋಜನೆಯ ಬಹುಮುಖ್ಯ ಪ್ರಯೋಜನ. ಹೂಡಿಕೆ ಮಾಡುವ ಅವಧಿ ಪೂರ್ಣಗೊಂಡ ನಂತರದಲ್ಲಿ, ಅಲ್ಲಿಯವರೆಗಿನ ಹೂಡಿಕೆಯಿಂದ ಒಗ್ಗೂಡಿದ ಮೊತ್ತವನ್ನು, ಹೂಡಿಕೆ ಮಾಡಿದ ವ್ಯಕ್ತಿಗೆ ಜೀವಿತಾವಧಿಯವರೆಗೆ ನಿರಂತರ ವರಮಾನ ತಂದುಕೊಡಲು ಬಳಸಲಾಗುತ್ತದೆ. ಇದೊಂದು ಬಗೆಯಲ್ಲಿ ವೈಯಕ್ತಿಕ ಪಿಂಚಣಿ ಯೋಜನೆ ಇದ್ದಂತೆ. ಇದರಲ್ಲಿ ಹಣಕಾಸಿನ ಭದ್ರತೆ ಇದೆ, ನಿವೃತ್ತಿಯ ನಂತರದಲ್ಲಿ ಎಷ್ಟು ಮೊತ್ತ ಸಿಗುತ್ತದೆ ಎಂಬುದನ್ನು ಅಂದಾಜು ಮಾಡಲು ಕೂಡ ಸಾಧ್ಯವಿದೆ.

ಆ್ಯನ್ಯುಟಿ ಯೋಜನೆಗಳು ಹೂಡಿಕೆಯಲ್ಲೂ ಆದಾಯವನ್ನು ಪಡೆದುಕೊಳ್ಳುವ ವಿಚಾರದಲ್ಲಿಯೂ ಒಂದಿಷ್ಟು ಅನುಕೂಲಗಳನ್ನು ಒದಗಿಸುತ್ತವೆ. ಆ್ಯನ್ಯುಟಿ ಯೋಜನೆಗೆ ಯಾವ ಬಗೆಯಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಹೂಡಿಕೆದಾರ ಆಯ್ಕೆ ಮಾಡಿಕೊಳ್ಳಬಹುದು. ಯೋಜನೆಯಿಂದ ಸಿಗುವ ಆದಾಯವನ್ನು ಪ್ರತಿ ತಿಂಗಳೂ ಪಡೆದುಕೊಳ್ಳಬೇಕೋ, ಮೂರು ತಿಂಗಳಿಗೆ ಒಮ್ಮೆ ಪಡೆದುಕೊಳ್ಳಬೇಕೋ ಅಥವಾ ವರ್ಷಕ್ಕೆ ಒಮ್ಮೆ ಪಡೆದುಕೊಳ್ಳಬೇಕೋ ಎಂಬುದನ್ನೂ ಹೂಡಿಕೆದಾರ ತೀರ್ಮಾನಿಸಬಹುದು. ಅಂದರೆ ಹೂಡಿಕೆದಾರ ನಿವೃತ್ತಿಯ ನಂತರದಲ್ಲಿ ತನ್ನ ಜೀವನಶೈಲಿಗೆ ಅನುಗುಣವಾಗಿ ವರಮಾನವನ್ನು ಪಡೆದುಕೊಳ್ಳಬಹುದು. ಹೂಡಿಕೆದಾರನ ಜೀವಿತಾವಧಿಯ ಉದ್ದಕ್ಕೂ ನಿರಂತರವಾದ, ನಿಶ್ಚಿತ ಮೊತ್ತದ ಆದಾಯವನ್ನು ನೀಡುವುದು ಆ್ಯನ್ಯುಟಿ ಯೋಜನೆಗಳ ವೈಶಿಷ್ಟ್ಯ.

ಇದು ಕಡಿಮೆ ರಿಸ್ಕ್ನ ಹೂಡಿಕೆ

ಕಡಿಮೆ ರಿಸ್ಕ್ ಇರುವ ಬಗೆಯಲ್ಲಿ ಈ ಯೋಜನೆಗಳನ್ನು ರೂಪಿಸಲಾಗಿರುತ್ತದೆ. ಇದರಿಂದಾಗಿ ಬಂಡವಾಳ ಮಾರುಕಟ್ಟೆಗಳ ಅನಿಶ್ಚಿತತೆಗಳಿಂದ ಹೂಡಿಕೆದಾರರ ಹಣವು ಸುರಕ್ಷಿತವಾಗಿರುತ್ತದೆ. ಹೂಡಿಕೆ ಮಾಡಿದ ಮೊತ್ತವನ್ನು ಜತನದಿಂದ ಕಾಯುವುದಕ್ಕೆ ನೀಡುವ ಆದ್ಯತೆಯು, ವ್ಯಕ್ತಿಯು ತನ್ನ ಸಂಧ್ಯಾಕಾಲಕ್ಕಾಗಿ ಉಳಿತಾಯ ಮಾಡಿಟ್ಟುಕೊಂಡ ಹಣವು ಸುರಕ್ಷಿತವಾಗಿ ಇರುವಂತೆ ಮಾಡುತ್ತದೆ. ಆ ಹಣವೇ ವ್ಯಕ್ತಿಯ ಮುಂದಿನ ದಿನಗಳಿಗೆ ಹಾಗೂ ಆತನ ಕುಟುಂಬದ ಹಣಕಾಸಿನ ಆರೋಗ್ಯಕ್ಕೆ ಭದ್ರ ಬುನಾದಿಯೊಂದನ್ನು ಹಾಕಿಕೊಡುತ್ತದೆ. ಈ ಹೂಡಿಕೆಯಿಂದ ಸಾಮಾನ್ಯವಾಗಿ ನಿಶ್ಚಿತ ಪ್ರಮಾಣದ ಲಾಭ ಸಿಗುತ್ತದೆ. ಇದು ಮನಸ್ಸಿಗೆ ನೆಮ್ಮದಿ ತರುವುದಂತೂ ಖಚಿತ.

ಹೂಡಿಕೆ, ಪಾವತಿಯಲ್ಲಿ ಹಲವು ಆಯ್ಕೆಗಳು

ಆ್ಯನ್ಯುಟಿ ಯೋಜನೆಗಳು ಹಲವು ಬಗೆಯ ಆಯ್ಕೆಗಳನ್ನು ನೀಡುತ್ತವೆ. ಈ ಯೋಜನೆಗಳಲ್ಲಿ ನಿರ್ದಿಷ್ಟ ಮೊತ್ತವನ್ನು ಪೇರಿಸಲು ಒಂದೇ ಬಾರಿಗೆ ಹೂಡಿಕೆ ಮಾಡುವ ಅಥವಾ ನಿಯಮಿತವಾಗಿ ಕಂತುಗಳಲ್ಲಿ ಹೂಡಿಕೆ ಮಾಡುವ ಅವಕಾಶ ಮಾತ್ರವಲ್ಲದೆ, ಆ್ಯನ್ಯುಟಿ ಯೋಜನೆಗಳಿಂದ ಸಿಗುವ ಮೊತ್ತವನ್ನು ತಕ್ಷಣವೇ ಪಡೆದುಕೊಳ್ಳುವ, ಮುಂದೊಂದು ಸಮಯದಲ್ಲಿ ಪಡೆದುಕೊಳ್ಳುವ ಅವಕಾಶ ಕೂಡ ಇರುತ್ತದೆ.

ಹಣಕಾಸಿನ ಭದ್ರತೆ, ಸ್ಥಿರ ಆದಾಯ

ಆ್ಯನ್ಯುಟಿ ಯೋಜನೆಗಳ ಪ್ರಾಥಮಿಕ ಗುರಿ ಸಾಟಿಯಿಲ್ಲದ ಹಣಕಾಸಿನ ಭದ್ರತೆಯನ್ನು ಒದಗಿಸುವುದು. ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದವರಿಗೆ ಖಚಿತ ಆದಾಯದ ಭರವಸೆ ಇರುತ್ತದೆ, ಹೂಡಿಕೆ ಮಾಡಿದ ವ್ಯಕ್ತಿಯ ಜೀವಿತಾವಧಿಯವರೆಗೆ ಕಾಲಕಾಲಕ್ಕೆ ಖಚಿತ ಮೊತ್ತವು ಆದಾಯದ ರೂಪದಲ್ಲಿ ಸಿಗುತ್ತಿರುತ್ತದೆ. ಇದರಿಂದಾಗಿ ಹೂಡಿಕೆದಾರನಿಗೆ ತನ್ನ ಜೀವನಶೈಲಿಯನ್ನು ಕಾಯ್ದುಕೊಳ್ಳಲು, ನಿತ್ಯದ ಖರ್ಚುಗಳನ್ನು ಸರಿದೂಗಿಸಲು, ಆರೋಗ್ಯ ವೆಚ್ಚಗಳನ್ನು ನಿಭಾಯಿಸಲು, ಹಣಕಾಸಿನ ಒತ್ತಡವಿಲ್ಲದೆ ನಿವೃತ್ತಿ ನಂತರದ ಗುರಿಗಳನ್ನು ತಲುಪಲು ಆಗುತ್ತದೆ. ನಿರಂತರವಾದ ಹಾಗೂ ಖಚಿತವಾದ ಆದಾಯವು ಒತ್ತಡಮುಕ್ತ ಜೀವನಕ್ಕೆ ಬಹುದೊಡ್ಡ ನೆರವು ನೀಡುತ್ತದೆ.

ಸಂಗಾತಿಗೂ ಆದಾಯ

ಹಲವು ಆ್ಯನ್ಯುಟಿ ಯೋಜನೆಗಳಲ್ಲಿ ‘ಜಾಯಿಂಟ್–ಲೈಫ್’ ಎಂಬ ಆಯ್ಕೆ ಇರುತ್ತದೆ. ಇದನ್ನು ಆಯ್ಕೆ ಮಾಡಿಕೊಂಡರೆ, ಹೂಡಿಕೆ ಮಾಡಿದ ವ್ಯಕ್ತಿಯ ಜೀವಿತಾವಧಿಯ ನಂತರ ಸಂಗಾತಿಗೆ ಆದಾಯ ಪಾವತಿ ಆಗುತ್ತಿರುತ್ತದೆ.

ಆದಾಯ ಈಗ ಬೇಡ ಎನ್ನುವವರಿಗೆ...

ಆದಾಯವು ತಕ್ಷಣಕ್ಕೆ ಬೇಡ, ಮುಂದೊಂದು ದಿನದಿಂದ ಅದು ಸಿಗುವಂತೆ ಆಗಲಿ ಎಂದು ಹೇಳುವ ಅವಕಾಶ ಕೂಡ ಹಲವು ಆ್ಯನ್ಯುಟಿ ಯೋಜನೆಗಳಲ್ಲಿ ಇರುತ್ತದೆ. ಅಂದರೆ, ಹೂಡಿಕೆ ಮಾಡಿದ ನಿರ್ದಿಷ್ಟ ಅವಧಿಯ ನಂತರದಿಂದ ಆದಾಯ ಸಿಗುವಂತೆ ಮಾಡಲು ಅವಕಾಶ ಇರುತ್ತದೆ. ಈ ಅವಧಿಯಲ್ಲಿ ಹೂಡಿಕೆ ಮೊತ್ತವು ಹೆಚ್ಚಳ ಕಂಡಿರುತ್ತದೆ.

ದೀರ್ಘಾವಧಿಗೆ ಆದಾಯ ತಂದುಕೊಡುವುದು ಆ್ಯನ್ಯುಟಿ ಯೋಜನೆಗಳ ಉದ್ದೇಶವಾಗಿದ್ದರೂ, ಕೆಲವು ಯೋಜನೆಗಳು ಅವಧಿಗೆ ಮೊದಲೇ ಅದನ್ನು ಮುಕ್ತಾಯಗೊಳಿಸುವ ಅವಕಾಶವನ್ನು ಹೂಡಿಕೆದಾರರಿಗೆ ನೀಡುತ್ತವೆ. ಹೀಗೆ ಅವಧಿಗೆ ಮುಂಚಿತವಾಗಿ ಮುಕ್ತಾಯಗೊಳಿಸಿದಾಗ ಹೂಡಿಕೆದಾರರಿಗೆ ನಿರ್ದಿಷ್ಟ ಮೊತ್ತ ವಾಪಸ್ ಸಿಗುತ್ತದೆ. ಆದರೆ ಈ ರೀತಿ ಮಾಡಿದಾಗ ಆದಾಯದ ರೂಪದಲ್ಲಿ ಸಿಗುವ ಮೊತ್ತವು ಕಡಿಮೆ ಆಗುತ್ತದೆ, ಅವಧಿಗೆ ಮೊದಲೇ ಮುಕ್ತಾಯಗೊಳಿಸಿದ್ದಕ್ಕಾಗಿ ಒಂದಿಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೀಗಿದ್ದರೂ, ಈ ಒಂದು ಸೌಲಭ್ಯವು ಹೂಡಿಕೆದಾರರಿಗೆ ಅನಿವಾರ್ಯ ಸಂದರ್ಭಗಳಲ್ಲಿ ನಗದು ಲಭ್ಯತೆಯನ್ನು ಖಾತರಿಪಡಿಸುತ್ತದೆ.

ಇತರ ಪ್ರಯೋಜನಗಳು

ಆ್ಯನ್ಯುಟಿ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ ಪ್ರತಿಯಾಗಿ ಸಿಗುವ ಖಚಿತ ಹಾಗೂ ಸಾಮಾನ್ಯ ಸಂದರ್ಭಗಳಲ್ಲಿ ಹಣದುಬ್ಬರದ ಪ್ರಮಾಣಕ್ಕಿಂತ ಹೆಚ್ಚಿನ ಮಟ್ಟದ ಗಳಿಕೆಯು ಉತ್ತಮ ಮೊತ್ತವನ್ನು ಒಗ್ಗೂಡಿಸಲು ನೆರವಾಗುತ್ತದೆ.

ಸರಿಯಾಗಿ ಯೋಜಿಸಿ ಆ್ಯನ್ಯುಟಿ ಪಡೆದಲ್ಲಿ, ನಿವೃತ್ತಿಯ ನಂತರದಲ್ಲಿ ಹೂಡಿಕೆದಾರರು ನಿಜ ಅರ್ಥದಲ್ಲಿ ಹಣಕಾಸಿನ ಸ್ವಾತಂತ್ರ್ಯವನ್ನು ಹೊಂದಲು ಸಾಧ್ಯ. ನಿತ್ಯ ಜೀವನದ ವೆಚ್ಚಗಳನ್ನು ನಿಭಾಯಿಸಲು ಸಾಲ ಪಡೆಯುವ ಪ್ರಮೇಯ ಎದುರಾಗುವುದಿಲ್ಲ, ಜೀವನದ ಪ್ರಮುಖವಾದ ಕೆಲವು ಹಣಕಾಸಿನ ಗುರಿಗಳನ್ನು ಈಡೇರಿಸಿಕೊಳ್ಳುವುದಕ್ಕೂ ಸಾಲದ ಅಗತ್ಯ ಇರುವುದಿಲ್ಲ. ಹಣಕಾಸಿನ ಚಿಂತೆಗಳಿಂದ ಮುಕ್ತರಾದಾಗ ನಿವೃತ್ತಿ ನಂತರದ ಜೀವನವನ್ನು ಹೆಚ್ಚು ಖುಷಿಯಿಂದ ಕಳೆಯಲು ಸಾಧ್ಯ.

ಹೂಡಿಕೆದಾರ ಮೃತಪಟ್ಟ ಸಂದರ್ಭದಲ್ಲಿ ಹಲವು ಆ್ಯನ್ಯುಟಿ ಯೋಜನೆಗಳು ವಿಶೇಷ ಪ್ರಯೋಜನಗಳನ್ನು ಕಲ್ಪಿಸುತ್ತವೆ. ಇವು ಒಂದು ಬಗೆಯಲ್ಲಿ ಜೀವ ವಿಮೆಯ ಬಗೆಯಲ್ಲಿ ಪ್ರಯೋಜನಕ್ಕೆ ಬರುತ್ತವೆ. ಈ ಪ್ರಯೋಜನವು, ಹೂಡಿಕೆದಾರ ಅಕಾಲಿಕವಾಗಿ ಸಾವನ್ನಪ್ಪಿದರೂ ಅವರ ಸಂಗಾತಿಗೆ ಹಣಕಾಸಿನ ಭದ್ರತೆಯನ್ನು ಒದಗಿಸುತ್ತದೆ. ಅಕಾಲಿಕ ಮರಣದ ನಂತರದಲ್ಲಿ ಸಂಗಾತಿಗೆ ಒಂದು ಬಾರಿಗೆ ದೊಡ್ಡ ಇಡುಗಂಟು ಸಿಗಬಹುದು ಅಥವಾ ಅವರಿಗೆ ನಿರಂತರ ಆ್ಯನ್ಯುಟಿ ಆದಾಯ ಸಿಗಬಹುದು.

ನಿರಂತರವಾದ ಹಾಗೂ ನಿಶ್ಚಿತವಾದ ಆದಾಯವು ನಿವೃತ್ತಿಯ ನಂತರದಲ್ಲಿ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಹಣಕಾಸಿನ ಗುರಿಗಳ ಈಡೇರಿಕೆಗೆ ಭದ್ರವಾದ ಬುನಾದಿಯೊಂದನ್ನು ಹಾಕಿಕೊಡುತ್ತದೆ. ಪ್ರವಾಸ, ಹೊಸ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅಥವಾ ಮುಂದೆ ಬರಲಿರುವ ದೊಡ್ಡ ವೆಚ್ಚವೊಂದನ್ನು ನಿಭಾಯಿಸಲು ಇದು ನೆರವಾಗುತ್ತದೆ.

ತೆರಿಗೆ ಪ್ರಯೋಜನ

ಆ್ಯನ್ಯುಟಿ ಯೋಜನೆಗಳು ಆಕರ್ಷಕವಾದ ತೆರಿಗೆ ಪ್ರಯೋಜನಗಳನ್ನೂ ಹೊತ್ತು ತರುತ್ತವೆ. ಆ್ಯನ್ಯುಟಿ ಪಾಲಿಸಿಗೆ ಪಾವತಿಸುವ ಪ್ರೀಮಿಯಂ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ವಿನಾಯಿತಿ ಇರುತ್ತದೆ. ಇದರಿಂದಾಗಿ, ನಿವೃತ್ತಿ ನಂತರದ ಬದುಕಿಗೆ ಮಾಡುವ ಯೋಜನೆಯು ಇನ್ನಷ್ಟು ಆಕರ್ಷಕವಾಗುತ್ತದೆ.

ಆ್ಯನ್ಯುಟಿ ಯೋಜನೆಗಳಲ್ಲಿ ಮಾಡುವ ಹೂಡಿಕೆಗಳು ಬಹಳ ಖಚಿತವಾದ ಗಳಿಕೆಯನ್ನು ತಂದುಕೊಡುತ್ತವೆ. ಇಲ್ಲಿ ಮಾಡುವ ಹೂಡಿಕೆಗಳಲ್ಲಿ ರಿಸ್ಕ್ ಬಹಳ ಕಡಿಮೆ. ತೊಡಗಿಸಿದ ಬಂಡವಾಳವು ಕರಗುವುದಿಲ್ಲ ಎಂಬ ಖಾತರಿ ನೀಡುತ್ತವೆ. ವರ್ಷಗಳು ಕಳೆದಂತೆ ಹೂಡಿಕೆದಾರರ ಸಂಪತ್ತು ವೃದ್ಧಿಸುತ್ತದೆ, ಹಲವು ಆ್ಯನ್ಯುಟಿ ಯೋಜನೆಗಳನ್ನು ಹಣದುಬ್ಬರದ ಪರಿಣಾಮವನ್ನು ನಿಭಾಯಿಸಲು ಸಾಧ್ಯವಾಗುವಂತೆ ರೂಪಿಸಲಾಗಿರುತ್ತದೆ. ಇದರಿಂದಾಗಿ ಹೂಡಿಕೆದಾರರ ಖರೀದಿ ಶಕ್ತಿಯು ಅವರ ನಿವೃತ್ತಿಯ ನಂತರವೂ ಕುಗ್ಗುವುದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಆ್ಯನ್ಯುಟಿ ಯೋಜನೆಗಳು ಹಣಕಾಸಿನ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಹಳ ಶಕ್ತಿಶಾಲಿಯಾದ ಹೂಡಿಕೆ ಉತ್ಪನ್ನಗಳು. ಒಳ್ಳೆಯ ಆ್ಯನ್ಯುಟಿ ಉತ್ಪನ್ನವನ್ನು ಖರೀದಿಸುವ ಮೂಲಕ ವ್ಯಕ್ತಿಗಳು ತಮ್ಮ ಉಳಿತಾಯದ ಮೊತ್ತವನ್ನು ಬಹಳ ನಂಬಿಕಸ್ಥವಾದ ಆದಾಯ ಮೂಲವನ್ನಾಗಿ ಪರಿವರ್ತಿಸಿಕೊಳ್ಳಬಹುದು. ಇದರಿಂದ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು, ಜೀವನದ ಮುಸ್ಸಂಜೆಯ ದಿನಗಳನ್ನು ಹಣಕಾಸಿನ ಚಿಂತೆ ಇಲ್ಲದೆ ಕಳೆಯಲು ಸಾಧ್ಯವಾಗುತ್ತದೆ.

ಲೇಖಕ ಗೋಡಿಜಿಟ್ ಜೀವ ವಿಮಾ ಕಂಪನಿಯ ಎಂ.ಡಿ ಹಾಗೂ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.