ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲ್ಪಾವಧಿಗಷ್ಟೆ ಮಂದಗತಿ ಬೆಳವಣಿಗೆ’

₹ 350 ಲಕ್ಷ ಕೋಟಿ ಆರ್ಥಿಕತೆಯ ಹಾದಿಯಲ್ಲಿ ಬಾರತ: ಅಮಿತಾಬ್‌
Last Updated 14 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಆರ್ಥಿಕತೆಯ ಮಂದಗತಿಯ ಬೆಳವಣಿಗೆಯು ಅಲ್ಪಾವಧಿಗಷ್ಟೇ ಇರಲಿದ್ದು, ₹ 350 ಲಕ್ಷ ಕೋಟಿ ಆರ್ಥಿಕತೆಯನ್ನಾಗಿಸುವ ಹಾದಿಯಲ್ಲಿ ಭಾರತವು ಸಾಗುತ್ತಿದೆ’ ಎಂದುನೀತಿ ಆಯೋಗದ ಸಿಇಒ ಅಮಿತಾಬ್‌ ಕಾಂತ್‌ ಹೇಳಿದ್ದಾರೆ.

'ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವದ ಸುಧಾರಣಾ ಕ್ರಮಗಳಿಂದಾಗಿ ಭಾರತವು ದೀರ್ಘಾವಧಿಗೆ ಅತ್ಯಂತ ಸ್ಪರ್ಧಾತ್ಮಕ ಮತ್ತು ಉತ್ತಮ ಉತ್ಪಾದಕ ಆರ್ಥಿಕತೆಯಾಗಿ ರೂಪುಗೊಳ್ಳಲಿದೆ’ಎಂದುಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

‘ನಗರೀಕರಣದ ಪ್ರಕ್ರಿಯೆ, ಮೂಲಸೌಕರ್ಯ ಬೆಳವಣಿಗೆ, ತಂತ್ರಜ್ಞಾನ ಬಳಕೆಯು ಈಗಷ್ಟೇ ಆರಂಭವಾಗಿದೆ. ಈಗ ಜಾರಿಗೊಳಿಸಿರುವ ಸುಧಾರಣಾ ಕ್ರಮಗಳಿಂದಾಗಿ ಮುಂದಿನ ಮೂರು ದಶಕಗಳಲ್ಲಿ ಭಾರಿ ಪ್ರಮಾಣದಲ್ಲಿ ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿದೆ.ಭಾರತದ ಆರ್ಥಿಕತೆಯ ಬಗ್ಗೆ ಹಲವು ಸಕಾರಾತ್ಮಕ ಅಂಶಗಳಿವೆ. ಮೂಲಭೂತ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ’ ಎಂದು ಅಮಿತಾಬ್‌ ತಿಳಿಸಿದ್ದಾರೆ.

‘ಜಿಎಸ್‌ಟಿ, ದಿವಾಳಿ ಸಂಹಿತೆ, ರೇರಾದಂತಹ ಕ್ರಮಗಳು ಆರ್ಥಿಕತೆಯನ್ನು ಉತ್ಪಾದಕತೆಯ ದೃಷ್ಟಿಯಿಂದ ಇನ್ನಷ್ಟು ಶಕ್ತಿಶಾಲಿಯನ್ನಾಗಿಸಲಿವೆ. ಜಿಎಸ್‌ಟಿ ಜಾರಿಗೊಳಿಸಿದ ಬಳಿಕ ಭಾರತವು ಜಗತ್ತಿನಲ್ಲಿಯೇ ಅತ್ಯಂತ ಸದೃಢ ಆರ್ಥಿಕತೆಯಾಗುವತ್ತ ಸಾಗುತ್ತಿದೆ’ ಎಂದಿದ್ದಾರೆ.

‘ವಿಶ್ವಬ್ಯಾಂಕ್‌ನ ಸುಲಲಿತ ವಹಿವಾಟು ಸೂಚ್ಯಂಕದಲ್ಲಿ ಪ್ರಮುಖ 50 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಮತ್ತು ಮೂರು ವರ್ಷಗಳಲ್ಲಿ25ನೇ ಸ್ಥಾನಕ್ಕೇರಲು ನಿರ್ಧರಿಸಲಾಗಿದೆ. ಇದನ್ನು ಸಾಧಿಸಬಹುದು. ಜಾಗತಿಕ ಪೂರೈಕೆ ಸರಪಣಿಯ ಒಂದು ಭಾಗವಾಗಲು ಬಯಸುತ್ತೇವೆ. ಈ ನಿಟ್ಟಿನಲ್ಲಿ ಎಲ್ಲಾ ವಲಯಗಳಲ್ಲಿಯೂ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಬೇರೆ ದೇಶಗಳಲ್ಲಿ ಎಫ್‌ಡಿಐ ಇಳಿಮುಖವಾಗಿದ್ದರೆ ಭಾರತದಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT