ಭಾನುವಾರ, ಜೂನ್ 13, 2021
29 °C

ಮೂರನೆಯ ದಿನವೂ ಸೆನ್ಸೆಕ್ಸ್ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಕಾರ್ಪೊರೇಟ್ ಕಂಪನಿಗಳ ಫಲಿತಾಂಶ ಉತ್ತಮವಾಗಿರುವುದು ಹಾಗೂ ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದು ದೇಶದ ಷೇರುಪೇಟೆಗಳಲ್ಲಿ ಉತ್ಸಾಹದ ವಾತಾವರಣ ಸೃಷ್ಟಿಸಿತು. ಇದರ ಪರಿಣಾಮವಾಗಿ ದೇಶಿ ಷೇರುಪೇಟೆ ಸಂವೇದಿ ಸೂಚ್ಯಂಕಗಳು ಶುಕ್ರವಾರ ಏರಿಕೆ ದಾಖಲಿಸಿದವು.

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ 27 ಪೈಸೆಯಷ್ಟು ಏರಿಕೆ ಆಗಿದ್ದು ಕೂಡ ಷೇರುಪೇಟೆಗಳ ಉತ್ಸಾಹ ಹೆಚ್ಚಿಸಿತು ಎಂದು ವರ್ತಕರು ಹೇಳಿದ್ದಾರೆ. ಸೆನ್ಸೆಕ್ಸ್ 256 ಅಂಶ, ನಿಫ್ಟಿ 98 ಅಂಶ ಏರಿಕೆ ಕಂಡವು.

ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದ ಲಾಭದಲ್ಲಿ ಶೇ 31ರಷ್ಟು ಏರಿಕೆ ದಾಖಲಿಸಿರುವ ಎಚ್‌ಡಿಎಫ್‌ಸಿಯ ಷೇರುಗಳ ಮೌಲ್ಯದಲ್ಲಿ ಶೇ 2.7ರಷ್ಟು ಏರಿಕೆ ಕಂಡುಬಂತು. ಮಹೀಂದ್ರ ಆ್ಯಂಡ್ ಮಹೀಂದ್ರ, ಬಜಾಜ್ ಫಿನ್‌ಸರ್ವ್‌, ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್‌, ಐಟಿಸಿ, ಒಎನ್‌ಜಿಸಿ ಮತ್ತು ಅಲ್ಟ್ರಾಟೆಕ್‌ ಷೇರುಗಳು ಏರಿಕೆ ಕಂಡವು.

ಬಜಾಜ್ ಆಟೊ, ಬಜಾಜ್‌ ಫೈನಾನ್ಸ್‌, ಇನ್ಫೊಸಿಸ್, ಕೋಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಷೇರುಗಳು ಇಳಿಕೆ ಕಂಡವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.