ಮೋದಿನಗರ: ಒಲಿಂಪಿಯನ್ ಮಿರಾಬಾಯಿ ಚಾನು ಅವರು ರಾಷ್ಟ್ರೀಯ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ತಮ್ಮ ಸಾಮರ್ಥ್ಯ ಮೆರೆದರು.

ಬುಧವಾರ ಇಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಒಟ್ಟು 205 ಕೆ.ಜಿ ಭಾರ ಎತ್ತಿ ಪ್ರಶಸ್ತಿ ಜಯಿಸಿದರು. ಅವರು ಸ್ನ್ಯಾಚ್ನಲ್ಲಿ 89 ಕೆ.ಜಿ ಹಾಗೂ ಕ್ಲೀನ್–ಜರ್ಕ್ನಲ್ಲಿ 116 ಕೆ.ಜಿ ತೂಕ ಎತ್ತಿದರು. ಹೊಸ ರಾಷ್ಟ್ರೀಯ ದಾಖಲೆ ಕೂಡ ಬರೆದರು.

‘ಮುಂದಿನ ಸ್ಪರ್ಧೆಯ ಹೊತ್ತಿಗೆ ನನ್ನ ಸಾಮರ್ಥ್ಯವನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳುವೆ. 90 ಕೆ.ಜಿಗಿಂತ ಹೆಚ್ಚಿನ ಭಾರವನ್ನು ಎತ್ತುವೆ. ಇವತ್ತು (ಬುಧವಾರ) ನಾನು ಬಹಳಷ್ಟು ಪ್ರಯತ್ನಪಟ್ಟೆ. ಆದರೆ ಪೂರ್ವಸಿದ್ಧತೆ ಬಹಳಷ್ಟಿರಲಿಲ್ಲ. ಆದ್ದರಿಂದ 90 ಕೆಜಿ ಗಡಿ ದಾಟಲು ಸಾಧ್ಯವಾಗಲಿಲ್ಲ’ ಎಂದು ಚಾನು ಹೇಳಿದರು.

31 ವರ್ಷದ ಚಾನು ಸ್ನ್ಯಾಚ್ ಸ್ಪರ್ಧೆಯಲ್ಲಿ ಅತ್ಯಂತ ಸರಾಗವಾಗಿ ಒತ್ತಡ ನಿಭಾಯಿಸಿದರು. ಈ ಹಿಂದಿನ ವೈಯಕ್ತಿಕ ಶ್ರೇಷ್ಠ ದಾಖಲೆ (88 ಕೆಜಿ)ಯನ್ನು ಇಲ್ಲಿ ಉತ್ತಮಪಡಿಸಿಕೊಂಡರು. ಮಣಿಪುರದ ಮೀರಾಬಾಯಿ ಅವರು ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.