ಮಿಲಾನ್: ಪಾರದರ್ಶಕತೆಯ ಮರುಸ್ಥಾಪನೆ ಮತ್ತು ಸ್ಪಷ್ಟವಾದ ವೇಳಾಪಟ್ಟಿ ರೂಪಿಸುವ ಮೂಲಕ ಭವಿಷ್ಯದಲ್ಲಿ ಒಲಿಂಪಿಕ್ ಕ್ರೀಡೆಗಳ ಅತಿಥ್ಯ ವಹಿಸುವ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತರಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಪರಿಶೀಲಿಸುತ್ತಿದೆ.

2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಪೈಪೋಟಿ ತೀವ್ರವಾಗಿರುವ ವೇಳೆಯೇ ಇಂಥ ಕ್ರಮಕ್ಕೆ ಮುಂದಾಗಿದೆ. ಈ ಒಲಿಂಪಿಕ್ ಕ್ರೀಡೆಗಳ ಆತಿಥ್ಯಕ್ಕೆ ಪೈಪೋಟಿ ಜೋರಾಗಿದ್ದು, ಭಾರತ ಮತ್ತು ಕತಾರ್ ದೇಶಗಳ ಜೊತೆ ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ, ಟರ್ಕಿ ಮತ್ತು ಚಿಲಿ ಕೂಡ ಆಸಕ್ತಿ ತಳೆದಿವೆ.

2019ಕ್ಕಿಂತ ಪೂರ್ವದ ದುಬಾರಿ ಪ್ರಕ್ರಿಯೆಗೆ ಮರಳುವ ಇರಾದೆಯಿಲ್ಲ. ಆದರೆ ಈಗಿನ ಆಯ್ಕೆ ಪ್ರಕ್ರಿಯೆಯಲ್ಲಂತೂ ಸುಧಾರಣೆಗಳ ಅಗತ್ಯವಿದೆ ಎಂದು ಕ್ರೊವೇಷ್ಯಾದ ಮಾಜಿ ಅಧ್ಯಕ್ಷೆ ಹಾಗೂ ಪ್ರಸ್ತುತ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯೆ ಕೊಲಿಂದಾ ಗ್ರಬರ್–ಕಿಟರೋವಿಕ್ ಅವರು ತಿಳಿಸಿದ್ದಾರೆ.

ಮಿಲಾನ್ನಲ್ಲಿ 2026ರ ಚಳಿಗಾಲದ ಒಲಿಂಪಿಕ್ಸ್ಗೆ ಮುನ್ನ ಬುಧವಾರ ನಡೆದ ಐಒಸಿ ಅಧಿವೇಶನದಲ್ಲಿ ಅವರು ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಐಒಸಿ ಅಧ್ಯಕ್ಷೆ ಕ್ರಿಸ್ಟಿ ಕೊವೆಂಟ್ರಿ ಅವರು ಒಲಿಂಪಿಕ್ ಕ್ರೀಡೆಗಳ ಆತಿಥ್ಯಕ್ಕೆ ಸಂಬಂಧಿಸಿ ರಚಿಸಿರುವ ಕಾರ್ಯತಂಡಕ್ಕೆ (ವರ್ಕಿಂಗ್ ಗ್ರೂಪ್) ಗ್ರಬರ್ ಕಿಟರೋವಿಕ್ ಮುಖ್ಯಸ್ಥೆಯಾಗಿದ್ದಾರೆ.

2019ರ ನಂತರ ಥಾಮಸ್ ಬಾಕ್ (ಕೊವೆಂಟ್ರಿ ಅವರಿಗಿಂತ ಮೊದಲು ಐಒಸಿ ಅಧ್ಯಕ್ಷರಾಗಿದ್ದವರು) ಅವರು ಕ್ರೀಡೆಗಳ ಆಯೋಜನೆ ವಹಿಸುವ ದೇಶವನ್ನು ಪ್ರಕಟಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದರು. ಆತಿಥ್ಯಕ್ಕೆ ಬಿಡ್ದಾರರ ಸಂಖ್ಯೆ ಹೆಚ್ಚಿಸಲು, ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಆತಿಥ್ಯದ ರೇಸ್ನಲ್ಲಿ ವಿಫಲವಾದ ದೇಶಗಳಿಗೆ ಸಾರ್ವಜನಿಕವಾಗಿ ಮುಖಭಂಗವಾಗುವುದನ್ನು ತಪ್ಪಿಸುವ ಉದ್ದೇಶ ಇದರ ಹಿಂದೆಯಿತ್ತು.

‘ಆತಿಥ್ಯಕ್ಕೆ ನಿಯೋಜಿತವಾದ ದೇಶ ಆಯ್ಕೆಯಾಗುವವರೆಗೆ ನಡೆಯುವ ಮಾತುಕತೆಗಳನ್ನು ಇನ್ನು ಮುಂದೆ ಗೋಪ್ಯವಾಗಿಡಲಾಗುತ್ತದೆ. ಆತಿಥ್ಯಕ್ಕೆ ಆಯ್ಕೆಯ ಸಭೆಯನ್ನೂ ಐಒಸಿ ಕಾರ್ಯಕಾರಿ ಮಂಡಳಿ ನಡೆಸಲಿದ್ದು, ಈ ಪ್ರಕ್ರಿಯೆಯೂ ಗೋಪ್ಯವಾಗಿರಲಿದೆ. ಈ ಪ್ರಕ್ರಿಯೆಯ ಬಳಿಕ ಐಒಸಿಯ ನೂರು ಸದಸ್ಯರು ಇದಕ್ಕೆ ಅಂಗೀಕಾರ ನೀಡಲಿದ್ದಾರೆ.

ಮೊದಲೇ ಪ್ರಕಟಿಸಲಾಗುವ ಪಾರದರ್ಶಕತೆಯ ಮಾನದಂಡದ ಆಧಾರದಲ್ಲಿ ಮೌಲ್ಯಮಾಪನ ನಡೆಯಲಿದೆ ಎಂದು ಗ್ರಬರ್–ಕಿಟರೋವಿಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.