ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಚ್‌ ಕಪ್‌ ಫುಟ್‌ಬಾಲ್‌: ವಿಸೆನ್‌ಗೆ ಗೆಲುವು

Published 23 ಸೆಪ್ಟೆಂಬರ್ 2023, 19:56 IST
Last Updated 23 ಸೆಪ್ಟೆಂಬರ್ 2023, 19:56 IST
ಅಕ್ಷರ ಗಾತ್ರ

ಬೆಂಗಳೂರು: ಗೋಲಿನ ಮಳೆಗರೆದ ವಿಸೆನ್‌ ಇನ್ಫೋಟೆಕ್‌ ತಂಡ, ಇಲ್ಲಿ ನಡೆಯುತ್ತಿರುವ ಟ್ರೂಆಲ್ಟ್‌ ಬಯೊಎನರ್ಜಿ ಡಿಎಚ್‌ ಕಪ್‌–2023 ‘ಫೈವ್‌ ಎ ಸೈಡ್‌’ ಕಾರ್ಪೊರೇಟ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಗೆಲುವು ಸಾಧಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ವಿಸೆನ್ 11–0 ಗೋಲುಗಳಿಂದ ಟಿಮ್‌ಕೆನ್‌ ಇಂಡಿಯಾ ಲಿಮಿಟೆಡ್‌ ತಂಡವನ್ನು ಮಣಿಸಿತು.

ಇನ್ನೊಂದು ಪಂದ್ಯದಲ್ಲಿ ಬಾಷ್‌ 8–0 ಗೋಲುಗಳಿಂದ ಕಾರ್ಲೆ ಇನ್‌ಫ್ರಾ ವಿರುದ್ಧ ಗೆದ್ದಿತು.

ಇತರ ಪಂದ್ಯಗಳಲ್ಲಿ ಟಿವಿಎಸ್‌ ಮೋಟರ್‌ ಕಂಪೆನಿ 5–1 ಗೋಲುಗಳಿಂದ ಜೆನೆಕ್ಸ್‌ ವಿರುದ್ಧ; ಎಂಯು ಸಿಗ್ಮಾ 1–0 ಗೋಲಿನಿಂದ ಸ್ವಿಸ್‌ ರೇ ವಿರುದ್ದ ಗೆದ್ದಿತು.

ಐಕ್ವಿಯಾ ಮತ್ತು ಅಡೋಬಿ ನಡುವಣ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT