ಅತ್ಯಂತ ಅಲ್ಪ ಅವಧಿಯ ವಹಿವಾಟಿನ ಈ ವಾರದಲ್ಲಿ ಚಟುವಟಿಕೆಯು ಮಂದಗತಿಯಲ್ಲಿದ್ದು ನೀರಸವಾಗಿತ್ತೆಂದೆನಿಸಿದರೂ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪನಿಗಳಲ್ಲಿ ಹೆಚ್ಚಿನ ಉತ್ಸಾಹಮಯ ಚಟುವಟಿಕೆ ವ್ಯಕ್ತವಾಗಿತ್ತು.

ಹಿಂದಿನವಾರ `ಗಾರ್~ ಕಾರಣ ಹೆಚ್ಚಿನ ಒತ್ತಡದಿಂದ ಭಾರಿ ಇಳಿಕೆ ಕಂಡಿದ್ದ ಕಂಪನಿಗಳು ದಿಢೀರ್ ಚೇತರಿಕೆ ಕಂಡು ವಿಜೃಂಭಿಸಿದವು. ಈ ಮಧ್ಯೆ ವೈವಿಧ್ಯಮಯ ಕಾರಣಗಳಿಂದ ಕುಸಿತದಲ್ಲಿದ್ದ ಮಣಪುರಂ ಫೈನಾನ್ಸ್ ಚಟುವಟಿಕೆ ಭರಿತ ಏರಿಕೆಯಿಂದ ಮಿಂಚಿತು. ಈ ಮಧ್ಯೆ ಅತೀವ ಕುಸಿತ ಕಂಡಿದ್ದ ಟೈಟಾನ್ ಇಂಡಸ್ಟ್ರೀಸ್, ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್, ವೋಲ್ಟಾಸ್ ಗಮನಾರ್ಹ ಚೇತರಿಕೆ ಪಡೆದವು.

ಟಿಟಿಕೆ ಪ್ರೆಸ್ಟೀಜ್ ಕಂಪನಿಯ ಚಟುವಟಿಕೆ ರಭಸವಾಗಿ ಏರಿಳಿತ ತೀಕ್ಷ್ಣವಾಗಿತ್ತು. ಎಂ.ಆರ್.ಎಫ್, ಸ್ಟ್ರೈಡ್ಸ್ ಆರ್ಕೊಲ್ಯಾಬ್, ಹೆಕ್ಸಾವೇರ್ ಟೆಕ್ನಾಲಜಿ, ಬಿಎಚ್ಇಎಲ್, ಜಯಪ್ರಕಾಶ್ ಅಸೋಸಿಯೇಟ್ಸ್ ಉತ್ತಮ ಮುನ್ನಡೆ ಪ್ರದರ್ಶಿಸಿದವು. ಬೋನಸ್ ನಂತರದ ಚಟುವಟಿಕೆಯಲ್ಲಿ ಆಪ್ಟೋ ಸರ್ಕ್ಯುಟ್, ಆಯಿಲ್ ಇಂಡಿಯಾ ಒತ್ತಡದಲ್ಲಿದ್ದವು.

ಮಾರ್ಚ್ನಲ್ಲಿ ಅಮೆರಿಕದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ನೌಕರಿ ಸೃಷ್ಟಿಯಾಗಿ 2008ರ ನಂತರದಲ್ಲಿ ಹೆಚ್ಚಿನ ಪ್ರಗತಿ ದಾಖಲಿಸಿರುವುದು, ಕೇಂದ್ರದ ಬಜೆಟ್ ನಂತರ ವಜ್ರಾಭರಣ ವ್ಯಾಪಾರಿಗಳು ಅಬಕಾರಿ ಸುಂಕದ ಬದಲಾವಣೆ ವಿರೋಧಿಸಿ 21 ದಿನಗಳ ಕಾಲ ನಡೆಸಿದ ಮುಷ್ಕರವನ್ನು ವಿತ್ತ ಸಚಿವರ ಆಶ್ವಾಸನೆ ಮೇರೆಗೆ ಹಿಂಪಡೆದಿರುವುದು... ಮತ್ತಿತರ ಉತ್ತಮ ಬೆಳವಣಿಗೆಗಳು ಆಗಿರುವುದು ಪೇಟೆಯನ್ನು ಆಕರ್ಷಕ
ವನ್ನಾಗಿಸಬಹುದಾಗಿದೆ.

ಒಟ್ಟಾರೆ ಹಿಂದಿನವಾರ ಸಂವೇದಿ ಸೂಚ್ಯಂಕವು 81 ಪಾಯಿಂಟುಗಳ ಏರಿಕೆ ಕಂಡರೆ ಮಧ್ಯಮ ಶ್ರೇಣಿ ಸೂಚ್ಯಂಕ 127 ಪಾಯಿಂಟ್ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 215 ಪಾಯಿಂಟುಗಳ ಭಾರಿ ಏರಿಕೆ ಪಡೆದವು.

ವಿದೇಶಿ ಹಣಕಾಸು ಸಂಸ್ಥೆಗಳು ರೂ.624 ಕೋಟಿ ಹಾಗೂ ಸ್ವದೇಶಿ ವಿತ್ತೀಯ ಸಂಸ್ಥೆಗಳು ರೂ.254 ಕೋಟಿ ಖರೀದಿ ಮಾಡಿವೆ. ಷೇರುಪೇಟೆಯ ಬಂಡವಾಳೀಕರಣ ಮೌಲ್ಯವು ಹಿಂದಿನ ರೂ. 62.14 ಲಕ್ಷ ಕೋಟಿಯಿಂದ ರೂ.62.99 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಆರ್ಇಸಿ ಬಾಂಡ್ ವಹಿವಾಟಿಗೆ ಬಿಡುಗಡೆ
ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಕಂಪೆನಿಯ ರೂ.1000 ಮುಖಬೆಲೆಯ, ತೆರಿಗೆ ಮುಕ್ತ ಇಳುವರಿಯ ಬಾಂಡ್ಗಳು ಇತ್ತೀಚೆಗೆ ಸಾರ್ವಜನಿಕರಿಗೆ ವಿತರಣೆಯಾಗಿದ್ದು, ಈ ಬಾಂಡ್ಗಳು ಏ. 4ರಿಂದ ವಹಿವಾಟಿಗೆ `ಎಫ್~ ಗುಂಪಿನಲ್ಲಿ ಬಿಡುಗಡೆಯಾಗಿವೆ.

ಆರಂಭದ ದಿನ ರೂ.1000 ಮುಖಬೆಲೆಯ (10 ವರ್ಷ ಅವಧಿಗೆ ಶೇ. 7.93ರಂತೆ ಬಡ್ಡಿ ಗಳಿಸುವ) ಬಾಂಡ್ಗಳು ರೂ. 957ರಿಂದ ರೂ. 995ರವರೆಗೂ ಏರಿಳಿತ ಕಂಡು ರೂ. 990ರಲ್ಲಿ ಅಂತ್ಯ ಕಂಡರೆ, 15 ವರ್ಷದ ಅವಧಿಯ ಶೇ. 8.12ರಂತೆ ಬಡ್ಡಿ ಗಳಿಸುವ ಬಾಂಡ್ಗಳು ರೂ.960.15ರಿಂದ ರೂ. 988.80 ರವರೆಗೂ ಏರಿಳಿತ ಪ್ರದರ್ಶಿಸಿ ರೂ. 973.34ರಲ್ಲಿ ಅಂತ್ಯಗೊಂಡಿತು.

ಆದ್ಯತೆಯ ಷೇರು: ವಿಜಯ ಬ್ಯಾಂಕ್ 2.28 ಕೋಟಿ ಷೇರನ್ನು ಪ್ರತಿ ಷೇರಿಗೆ ರೂ.64.27 ರಂತೆ ಎಲ್.ಐ.ಸಿ. ಆಫ್ ಇಂಡಿಯಾಕ್ಕೆ ಆದ್ಯತೆಯ ಮೇಲೆ ವಿತರಿಸಿ ಬಂಡವಾಳ ಹೆಚ್ಚಿಸಿಕೊಂಡಿದೆ.

ಬೋನಸ್ ಷೇರಿನ ವಿಚಾರ
* ವಿ. ಸಾಫ್ಟ್ವೇರ್ ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್ ಷೇರಿಗೆ 13ನೇ ಏಪ್ರಿಲ್ ನಿಗದಿತ ದಿನವಾಗಿದೆ.

* ಸುಂದರಂ ಮಲ್ಟಿ ಪ್ಯಾಡ್ ಕಂಪೆನಿ ವಿತರಿಸಲಿರುವ 2:1ರ ಅನುಪಾತದ ಬೋನಸ್ ಷೇರು ವಿತರಣೆಗೆ 16ನೇ ಏಪ್ರಿಲ್ ನಿಗದಿತ ದಿನವಾಗಿದೆ.

* ಕಳೆದ ಜುಲೈನಲ್ಲಿ ಪ್ರತಿ ಷೇರಿಗೆ ರೂ. 117ರಂತೆ ಸಾರ್ವಜನಿಕ ವಿತರಣೆ ಮಾಡಿದ್ದ ಇನ್ವೆಂಚರ್ ಗ್ರೋಥ್ ಅಂಡ್ ಸೆಕ್ಯುರಿಟೀಸ್ ಲಿ. ಕಂಪೆನಿಯು 3:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಮುಖಬೆಲೆ ಸೀಳಿಕೆ ವಿಚಾರ
* ವಕ್ರಾಂಗಿ ಸಾಫ್ಟ್ವೇರ್ ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ. 1ಕ್ಕೆ ಸೀಳಲು ಏ. 13 ನಿಗದಿತ ದಿನವಾಗಿದೆ.

* ಇಂಡಿಯ ನಿವೇಶ್ ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.1ಕ್ಕೆ ಸೀಳಲು ಏ. 17ನ್ನು ನಿಗದಿತ ದಿನವನ್ನಾಗಿಸಿದೆ.

`ಎ~ ಗುಂಪಿಗೆ ವರ್ಗಾವಣೆ
ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್, ಇಪ್ಕಾಲ್ಯಾಬ್ಸ್ ಒಬೆರಾಯ್ ರಿಯಾಲ್ಟಿ, ಸಟ್ಲಜ್ ಜಲವಿದ್ಯುತ್ ನಿಗಮ, ಅಲ್ಸ್ತೋಮಾ ಟಿ ಅಂಡ್ ಡಿ, ರುಚಿಸೋಯಾ ಇಂಡಸ್ಟ್ರೀಸ್, ಐಷರ್ ಮೋಟಾರ್ಸ್, ಅಸ್ಟ್ರಜೆನಿಕ್ ಫಾರ್ಮ, ಸ್ಟ್ರೈಡ್ಸ್ ಆರ್ಕೊ ಲ್ಯಾಬ್, ಹೆಕ್ಸಾವೇರ್ ಟೆಕ್ನಾಲಜಿ, ವೆಲ್ಸ್ಟನ್ ಕಾರ್ಪ್, ಸೆಂಚುರಿ ಟೆಕ್ಸ್ಟೈಲ್ಸ್ ಅಂಡ್ ಇಂಡಸ್ಟ್ರೀಸ್ ಕಂಪೆನಿಗಳು ಏ. 9ರಿಂದ `ಎ~ ಗುಂಪಿನಲ್ಲಿ ವಹಿವಾಟಾಗಲಿವೆ.

`ಎ~ ಗುಂಪಿನಿಂದ ನಿರ್ಗಮನ
ಇಂಡ್ ಸೆಕ್ಯುರಿಟೀಸ್, ಟೊರೆಂಟ್ ಫಾರ್ಮಾ ಗೋದ್ರೆಜ್ ಪ್ರಾಪರ್ಟೀಸ್, ರೆಡಿಂಗ್ಟನ್ (ಇಂಡಿಯ) ಸಿ.ಇ.ಎಸ್.ಇ, ಜೆಎಸ್ಡಬ್ಲ್ಯು ಇಸ್ಪಾಟ್, ಆಮ್ಟೆಕ್ ಆಟೊ ಅಲ್ಸ್ತೊಂ ಪ್ರಾಜೆಕ್ಟ್, ಜೆಟ್ ಏರ್ವೇಸ್, ಶ್ರಿ ರೇಣುಕಾ ಶುಗರ್ಸ್, ಸಿಂಟೆಕ್ಸ್ ಇಂಡಸ್ಟ್ರೀಸ್ ಮತ್ತು ಎಜುಕಾಂಪ್ ಸಲ್ಯೂಷನ್ಸ್ ಕಂಪನಿಯನ್ನು ಏ. 9ರಿಂದ ಎ ಗುಂಪಿನಿಂದ `ಬಿ~ ಗುಂಪಿಗೆ ವರ್ಗಾಯಿಸಲಾಗುವುದು.

ಸೂಚ್ಯಂಕ ಬದಲಾವಣೆ
ಮಲ್ಟಿ ಕಮಾಡಿಟೀಸ್ ಎಕ್ಸ್ಚೇಂಜ್ ಲಿ. ಕಂಪನಿಯನ್ನು 9ರಿಂದ ಬಿಎಸ್ಇ 500ರಲ್ಲಿ ಸೇರಿಸಲಾಗಿದೆ. ಅಲ್ಲದೆ ಇದರೊಂದಿಗೆ ವೆಲ್ಸ್ಟನ್ ಕಾರ್ಪ್, ಶ್ನೈಡರ್ ಎಲೆಕ್ಟ್ರಿಕ್ ಇನ್ಫ್ರಾಸ್ಟ್ರಕ್ಚರ್ ಮತ್ತು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಕಂಪನಿಯನ್ನು ಏ. 9ರಿಂದ ಮಧ್ಯಮ ಶ್ರೇಣಿ ಸೂಚ್ಯಂಕದಲ್ಲಿ ಸೇರಿಸಲಾಗಿದೆ.

ವ್ಯವಸ್ಥಿತ ಯೋಜನೆ
ಝವಾರಿ ಇಂಡಸ್ಟ್ರೀಸ್ ಕಂಪನಿಯ ರಸಗೊಬ್ಬರ ಘಟಕವನ್ನು ಬೇರ್ಪಡಿಸಿ ಝುವಾರಿ ಹೋಲ್ಡಿಂಗ್ಸ್ ಲಿ. ನಲ್ಲಿ ಸೇರಿಸಲಾಗುವುದು. ಪ್ರತಿ ಒಂದು ಝುವಾರಿ ಇಂಡಸ್ಟ್ರೀಸ್ ಷೇರಿಗೆ ಒಂದು ಝುವಾರಿ ಹೋಲ್ಡಿಂಗ್ಸ್ ಷೇರನ್ನು ನೀಡಲಾಗುವುದು. ಇದಕ್ಕೆ ಏ. 10 ನಿಗದಿತ ದಿನವಾಗಿದೆ.

ಲಾಭಾಂಶ ವಿಚಾರ
ಈ ವಾರ ಜಿ.ಎಂ.ಬ್ರುವರೀಸ್ ಶೇ. 25ರಂತೆ ಲಾಭಾಂಶ ಪ್ರಕಟಿಸಿದರೆ ಮುಂದಿನ ದಿನಗಳಲ್ಲಿ ಅಂದರೆ ಏ. 16 ರಂದು ಕೆಂಫ್ಯಾಟ್ ಆಲ್ಕಲೀಸ್, 17 ರಂದು ವಿಎಸ್ಟಿ ಇಂಡಸ್ಟ್ರೀಸ್ ಮತ್ತು ಮೈಂಡ್ ಟ್ರೀ 26ರಂದು ಚೋಳಮಂಡಳಂ ಇನ್ವೆಸ್ಟ್ಮೆಂಟ್, ಆಗ್ರೊಟೆಕ್ ಫುಡ್, ಕಿರ್ಲೊಸ್ಕರ್ ಇಂಡಸ್ಟ್ರೀಸ್, ಎಕ್ಸ್ಪೊ ಕಂಪನಿಗಳು ಲಾಭಾಂಶ ಪ್ರಕಟಿಸಲಿವೆ.

ವಾರದ ಆಯ್ಕೆ:
ವಿತ್ತ ವಲಯದ ಕಂಪನಿ ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್ ಲಿ. ಕಳೆದ ಜುಲೈನಲ್ಲಿ ಪ್ರತಿ ಷೇರಿಗೆ ರೂ.52 ರಂತೆ ಸಾರ್ವಜನಿಕ ವಿತರಣೆ ಮಾಡಿದೆ. ಆಶ್ಚರ್ಯದ ವಿಷಯವೆಂದರೆ ಈ ವಿತರಣೆಯಲ್ಲಿ ಕಂಪನಿ ರೂ. 59ರ ಗರಿಷ್ಠ ದರ ಗೊತ್ತುಪಡಿಸಿ ಉತ್ತಮ ಸ್ಪಂದನ ದೊರೆತರೂ ಕೇವಲ ರೂ.52ಕ್ಕೆ ಬೆಲೆ ನಿಗದಿಪಡಿಸಿ ವಿತರಿಸಿತು.

ಈ ಕಂಪೆನಿಯು ಸಣ್ಣ ಗ್ರಾಹಕರ, ಕಾರ್ಪೊರೇಟ್ಗಳ ಆರ್ಥಿಕ ಅವಶ್ಯಕತೆ ನೀಗಿಸುವ ಉದ್ದೇಶ ಹೊಂದಿದ್ದು ಮೂಲಸೌಕರ್ಯ ವಲಯಕ್ಕೂ ತನ್ನ ಚಟುವಟಿಕೆ ಬೆಳೆಸಿದೆ. ಕಳೆದ ತಿಂಗಳು ಪೆಸಿಫಿಕ್ ಹೌಸಿಂಗ್ ಫೈನಾನ್ಸ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡು ಗೃಹ ಸಾಲ ಕ್ಷೇತ್ರಕ್ಕೂ ಪ್ರವೇಶ ಮಾಡಿದೆ.

ಈ ಕಂಪನಿಯ ಅಂಗಸಂಸ್ಥೆ ಎಲ್ ಅಂಡ್ ಟಿ ಫೈನಾನ್ಸ್ ಮೂಲಕ ಭಾರತದ ಮ್ಯುಚುವಲ್ ಫಂಡ್ ವಲಯದಲ್ಲಿ 15ನೇ ಸ್ಥಾನದಲ್ಲಿರುವ ಫಿಡಿಲಿಟಿ ಎಎಂಸಿ ಅವರ ಎಫ್ಐಎಲ್ ಫಂಡ್ ಮ್ಯಾನೇಜ್ಮೆಂಟ್ ಪ್ರೈ.ಲಿ. ಮತ್ತು ಎಫ್ಐಎಲ್ ಟ್ರಸ್ಟಿ ಕಂಪನಿಯನ್ನು ಖರೀದಿಸಿ ಮ್ಯುಚುವಲ್ ಫಂಡ್ ವಲಯವನ್ನು ಉತ್ತಮವಾಗಿ ಬಲಪಡಿಸಿದೆ.

ಈ ಮ್ಯುಚುವಲ್ ಫಂಡ್ ವಲಯವು ರೂ. 8,881 ಕೋಟಿ ಮೌಲ್ಯದ ಆಸ್ತಿಯನ್ನು ನಿರ್ವಹಿಸುತ್ತಿದೆ. 2010ರ ಜನವರಿಯಲ್ಲಿ ಡಿಬಿಎಸ್ ಚೋಳ ಅವರ ಮ್ಯುಚುಯಲ್ ಫಂಡ್ ಚಟುವಟಿಕೆಯನ್ನು ಕೊಂಡಿತ್ತು. ಈ ಕಂಪನಿ ರೂ. 1,714 ಕೋಟಿ ಬಂಡವಾಳ ಹೊಂದಿದ್ದು, ಪ್ರವರ್ತಕ ಕಂಪನಿ ಲಾರ್ಸನ್ ಅಂಡ್ ಟೂಬ್ರೊ ಶೇ. 82.64ರ ಭಾಗಿತ್ವ ಹೊಂದಿದೆ.

ಕಳೆದ ಡಿಸೆಂಬರ್ ಅಂತ್ಯದಲ್ಲಿ ವಿದೇಶಿ ಹಣಕಾಸು ಸಂಸ್ಥೆಗಳು ಶೇ. 3.11ರ ಭಾಗಿತ್ವ ಹೊಂದಿವೆ. ಡಿಸೆಂಬರ್ ಅಂತ್ಯದಲ್ಲಿ ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್ ಕಂಪನಿ ರೂ. 23,500 ಕೋಟಿವರೆಗೂ ಸಾಲ ಮತ್ತು ಕೈಗಡ ನೀಡಿದ್ದರೆ ಎಲ್ ಅಂಡ್ ಟಿ ಫೈನಾನ್ಸ್ ರೂ.13,800 ಕೋಟಿವರೆಗೂ ಸಾಲ ಹಂಚಿದೆ.

ಪ್ರತಿಷ್ಠಿತ ಎಲ್ ಅಂಡ್ ಟಿ ಸಮೂಹದ ಕಂಪೆನಿಯಾದರೂ ರೂ.10ರ ಮುಖಬೆಲೆಯ ಷೇರು ಕಳೆದ ಒಂದು ತಿಂಗಳಲ್ಲಿ ರೂ.46.65ರಿಂದ ರೂ.52.50ರವರೆಗೆ ಏರಿಳಿತ ಪ್ರದರ್ಶಿಸಿ ಈಗ ರೂ.47.40ರಲ್ಲಿದೆ. ಮುಂದಿನ ವಾರದಿಂದ ಈ ಕಂಪನಿಯನ್ನು `ಎ~ ಗುಂಪಿಗೆ ವರ್ಗಾಯಿಸುವ ಕಾರಣ ಚಟುವಟಿಕೆ ಭರಿತವಾಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.