ಮಂಗಳವಾರ, ಮಾರ್ಚ್ 31, 2020
19 °C

ಸ್ತ್ರೀಯರ ಆರ್ಥಿಕ ಸ್ವಾವಲಂಬನೆಗೆ ಅಗರಬತ್ತಿ ಉದ್ಯಮ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಗರಬತ್ತಿ ತಯಾರಿಕೆ ಉದ್ಯಮವು ದೇಶದಾದ್ಯಂತ 20 ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದು, ಇವರಲ್ಲಿ ಶೇಕಡ 50ರಷ್ಟು ಮಂದಿ ಕರ್ನಾಟಕದಲ್ಲಿ ಇದ್ದಾರೆ’ ಎಂದು ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘದ (ಎಐಎಎಂಎ) ಶರತ್‍ಬಾಬು ಹೇಳಿದ್ದಾರೆ.

‘ಮಹಿಳಾ ಸಂಘಟನೆಗಳು ಅಗರಬತ್ತಿ ಉತ್ಪಾದನೆ ಮತ್ತು ಪ್ಯಾಕಿಂಗ್‍ನಲ್ಲಿ ತೊಡಗಿಸಿಕೊಂಡಿವೆ. ಉದ್ದಿಮೆಯ ಒಟ್ಟಾರೆ ದುಡಿಯುವ ಸಿಬ್ಬಂದಿಯಲ್ಲಿ ಶೇಕಡ 80ರಷ್ಟು ಮಹಿಳೆಯರು ಇದ್ದಾರೆ. ಈ ಉದ್ದಿಮೆಯು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿನ ಹಬ್ಬಗಳ ಋತುವಿನಲ್ಲಿ ಅಗರಬತ್ತಿಗಳ ಬೇಡಿಕೆಯು ದಿಢೀರ್ ಹೆಚ್ಚಳವಾಗುವ ನಿರೀಕ್ಷೆ ಇದೆ. ಹೆಚ್ಚುವರಿ ಬೇಡಿಕೆ ಪೂರೈಸಲು ಗ್ರಾಮೀಣ ಮಹಿಳೆಯರನ್ನು ಅಗರಬತ್ತಿ ತಯಾರಿಸುವ ಕಾರ್ಯದಲ್ಲಿ ತರಬೇತುಗೊಳಿಸಲು ‘ಎಐಎಎಂಎ’ ಕ್ರಮ ಕೈಗೊಂಡಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)