ಸೋಮವಾರ, ಜೂನ್ 1, 2020
27 °C

ಸೇವಾ ವಲಯದ ಪ್ರಗತಿ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸೇವಾ ವಲಯದ ಚಟುವಟಿಕೆ ಡಿಸೆಂಬರ್‌ನಲ್ಲಿ ಅಲ್ಪ ಇಳಿಕೆ ಕಂಡಿದೆ ಎಂದು ನಿಕೇಯ್‌ ಇಂಡಿಯಾ ಸಂಸ್ಥೆ ತಿಳಿಸಿದೆ.

ನಿಕೇಯ್‌ ಇಂಡಿಯಾ ಸರ್ವೀಸಸ್‌ ಬಿಸಿನೆಸ್‌ ಆಕ್ಟಿವಿಟಿ ಸೂಚ್ಯಂಕ ನವೆಂಬರ್‌ನಲ್ಲಿ 53.7ರಷ್ಟಿತ್ತು.ಇದು ಡಿಸೆಂಬರ್‌ನಲ್ಲಿ 53.2ಕ್ಕೆ ಇಳಿಕೆಯಾಗಿದೆ. ಆದರೆ, ಉದ್ಯೋಗ ಸೃಷ್ಟಿಯಲ್ಲಿ ಉತ್ತಮ ಪ್ರಗತಿ ದಾಖಲಿಸಿದೆ.

‘ಹೊಸ ಯೋಜನೆಗಳು ಮತ್ತು ಉದ್ಯೋಗ ಸೃಷ್ಟಿಯಲ್ಲಿ ವಲಯವು ಸಕಾರಾತ್ಮಕ ಮಟ್ಟದಲ್ಲಿದೆ. ಆದರೆ, ವಹಿವಾಟು ವಿಸ್ತರಣೆ ಮಂದಗತಿಯಲ್ಲಿ ಸಾಗುವ ಮೂಲಕ 2018ರ ವರ್ಷಾಂತ್ಯವನ್ನು ನಿರಾಶಾದಾಯಕವಾಗಿಸಿದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ ಸಂಸ್ಥೆಯ ಆರ್ಥಿಕ ತಜ್ಞ ಪಾಲಿಯಾನಾ ಡಿ ಲಿಮಾ ವಿಶ್ಲೇಷಣೆ ಮಾಡಿದ್ದಾರೆ. ಸಾರ್ವತ್ರಿಕ ಚುನಾವಣೆಯ ಕಾರಣದಿಂದಾಗಿ ಪ್ರಗತಿಯ ವೇಗ ತಗ್ಗಿದರೂ 2019ರಲ್ಲಿ ಸುಸ್ತಿರ ಪ್ರಗತಿ ಸಾಧಿಸಲಿದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು