ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ದಿನವೂ ಗೂಳಿ ಓಟ

ಜಾಗತಿಕ ಷೇರುಪೇಟೆಗಳ ಗಳಿಕೆ, ವಿದೇಶಿ ಹೂಡಿಕೆ ಪ್ರಭಾವ
Published 29 ಮೇ 2023, 21:04 IST
Last Updated 29 ಮೇ 2023, 21:04 IST
ಅಕ್ಷರ ಗಾತ್ರ

ಮುಂಬೈ: ಅಮೆರಿಕದ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ವಹಿವಾಟಿನ ಜೊತೆಗೆ ಭಾರತಕ್ಕೆ ವಿದೇಶಿ ಬಂಡವಾಳ ಒಳಹರಿವು ಮುಂದುವರಿದಿದೆ. ಈ ಕಾರಣಗಳಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸತತ ಮೂರನೇ ದಿನವೂ ಗೂಳಿ ಓಟ ಮುಂದುವರಿಯಿತು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 344 ಅಂಶ ಹೆಚ್ಚಾಗಿ 62,846 ಅಂಶಗಳಿಗೆ ತಲುಪಿತು. ವಹಿವಾಟಿನ ಒಂದು ಹಂತದಲ್ಲಿ 524 ಅಂಶಗಳವರೆಗೆ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 99 ಅಂಶ ಹೆಚ್ಚಾಗಿ 18,598 ಅಂಶಗಳಿಗೆ ತಲುಪಿತು.

ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 1,072 ಅಂಶ ಮತ್ತು ನಿಫ್ಟಿ 313 ಅಂಶ ಏರಿಕೆ ಕಂಡಿದೆ. ಸೆನ್ಸೆಕ್ಸ್‌ನಲ್ಲಿ ಮಹೀಂದ್ರ ಷೇರು ಮೌಲ್ಯ ಶೇ 3.71ರಷ್ಟು ಹೆಚ್ಚಾಗಿದೆ.

ವಲಯವಾರು ಗ್ರಾಹಕರ ಬಳಕೆ ವಸ್ತುಗಳು ಶೇ 1.58ರಷ್ಟು, ಲೋಹ ಶೇ 1.28, ಹಣಕಾಸು ಸೇವೆಗಳು ಶೇ 0.81ರಷ್ಟು ಏರಿಕೆ ಕಂಡಿವೆ.

ದೇಶಿ ಷೇರುಪೇಟೆಗಳು ಉತ್ತಮ ಗಳಿಕೆ ಕಂಡಿದ್ದು, ಸಾರ್ವಾಲಿಕ ಗರಿಷ್ಠ ಮಟ್ಟದ ಸಮೀಪಕ್ಕೆ ಬಂದಿವೆ. ದೇಶದ ಆರ್ಥಿಕ ಬೆಳವಣಿಗೆ ಉತ್ತಮವಾಗಿರುವ ನಿರೀಕ್ಷೆಯ ಜೊತೆಗೆ ಜಾಗತಿಕ ಷೇರುಪೇಟೆಗಳ ಸಕಾರಾತ್ಮಕ ವಹಿವಾಟು ಇದಕ್ಕೆ ಕಾರಣವಾಯಿತು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ಲೋಹ, ರಿಯಾಲ್ಟಿ ಮತ್ತು ಹಣಕಾಸು ವಲುಯದ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು. ಐ.ಟಿ. ಷೇರುಗಳಲ್ಲಿ ಲಾಭ ಗಳಿಕೆಯ ವಹಿವಾಟು ನಡೆಯಿತು ಎಂದು ಕೋಟಕ್ ಸೆಕ್ಯುರಿಟೀಸ್‌ನ ಈಕ್ವಿಟಿ ರಿಸರ್ಚ್‌ನ ಮುಖ್ಯಸ್ಥ ಶ್ರೀಕಾಂತ್‌ ಚೌಹಾಣ್‌ ತಿಳಿಸಿದ್ದಾರೆ.

ಬ್ರೆಂಟ್‌ ಕಚ್ಚಾ ತೈಲ ದರ ಶೇ 0.17ರಷ್ಟು ಇಳಿಕೆ ಕಂಡು ಬ್ಯಾರಲ್‌ಗೆ 76.82 ಡಾಲರ್‌ಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT