ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಕೆಯ ಹಾದಿಗೆ ಹೊರಳಿದ ಸೆನ್ಸೆಕ್ಸ್

Last Updated 9 ಏಪ್ರಿಲ್ 2021, 16:35 IST
ಅಕ್ಷರ ಗಾತ್ರ

ಮುಂಬೈ: ಮೂರು ದಿನಗಳಿಂದ ಏರುಗತಿಯಲ್ಲಿ ಸಾಗಿದ್ದ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನಲ್ಲಿ ಕುಸಿತ ದಾಖಲಿಸಿತು. ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿರುವುದು, ಅಲ್ಲಲ್ಲಿ ಲಾಕ್‌ಡೌನ್‌ ಜಾರಿಗೆ ಬಂದಿರುವುದು ಹೂಡಿಕೆದಾರರು ಬ್ಯಾಂಕಿಂಗ್, ಹಣಕಾಸು ಹಾಗೂ ಮೂಲಸೌಕರ್ಯ ವಲಯಗಳ ಷೇರುಗಳನ್ನು ಮಾರಲು ಕಾರಣವಾದವು.

ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಕುಸಿಯುತ್ತಲೇ ಇರುವುದು ಕೂಡ ಹೂಡಿಕೆದಾರರು ಹಿಂದಡಿ ಇರಿಸಲು ಕಾರಣವಾಯಿತು ಎಂದು ವರ್ತಕರು ಹೇಳಿದ್ದಾರೆ. ಸೆನ್ಸೆಕ್ಸ್ 154 ಅಂಶ ಕುಸಿಯಿತು, ನಿಫ್ಟಿ 38 ಅಂಶ ಇಳಿಕೆ ಕಂಡಿತು.

ಬಜಾಜ್ ಫೈನಾನ್ಸ್ ಷೇರುಗಳು ಶೇಕಡ 3.12ರಷ್ಟು ಇಳಿಕೆ ದಾಖಲಿಸಿದವು. ಅಲ್ಟ್ರಾಟೆಕ್‌ ಸಿಮೆಂಟ್, ಎನ್‌ಟಿಪಿಸಿ, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎಲ್‌ಆ್ಯಂಡ್‌ಟಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳ ಮೌಲ್ಯ ಕೂಡ ಇಳಿಯಿತು.

ಸನ್‌ ಫಾರ್ಮಾ, ಎಚ್‌ಯುಎಲ್‌, ಟೆಕ್ ಮಹೀಂದ್ರ, ಡಾ ರೆಡ್ಡೀಸ್ ಮತ್ತು ಟೈಟಾನ್ ಷೇರುಗಳು ಏರಿಕೆ ಕಂಡವು. ‘ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ವಹಿವಾಟು ಇಲ್ಲದಿದ್ದುದು ಹಾಗೂ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು ಷೇರು ಮಾರುಕಟ್ಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯಲು ಕಾರಣ. ಬೇರೆ ಬೇರೆ ರಾಜ್ಯಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧಗಳು ಎದುರಾಗುತ್ತಿರುವ ಕಾರಣ ಬ್ಯಾಂಕ್‌ಗಳ ಆಸ್ತಿ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಇದು ಖಾಸಗಿ ಬ್ಯಾಂಕ್‌ಗಳ ಷೇರು ಬೆಲೆ ಇಳಿಕೆಯಾಗಲು ಕಾರಣ’ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ರೂಪಾಯಿ ಮೌಲ್ಯದಲ್ಲಿ ಮತ್ತೆ 15 ಪೈಸೆ ಇಳಿಕೆ ಆಗಿದ್ದು, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಶುಕ್ರವಾರದ ಅಂತ್ಯಕ್ಕೆ 74.73 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT