ಮುಂದುವರಿದ ನಕಾರಾತ್ಮಕ ವಹಿವಾಟು

7
ರೂಪಾಯಿ ಮೌಲ್ಯ ಕುಸಿತ, ವಾಣಿಜ್ಯ ಸಮರದ ಪರಿಣಾಮ

ಮುಂದುವರಿದ ನಕಾರಾತ್ಮಕ ವಹಿವಾಟು

Published:
Updated:

ಮುಂಬೈ: ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ದೇಶದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ಮುಂದುವರಿದಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಮಂಗಳವಾರ 295 ಅಂಶ ಇಳಿಕೆಯಾಗಿ, ಒಂದು ತಿಂಗಳ ಕನಿಷ್ಠ ಮಟ್ಟವಾದ 37,291 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಆಗಸ್ಟ್‌ 2 ರಂದು 37,165 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 99 ಅಂಶ ಇಳಿಕೆಯಾಗಿ 11,278 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ಹಣಕಾಸು ಮತ್ತು ವಾಹನ ವಲಯದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದಾಗಿ ನಕಾರಾತ್ಮಕ ವಹಿವಾಟು ನಡೆಯಿತು.

ನಕಾರಾತ್ಮಕ ಅಂಶಗಳು: ಜಾಗತಿಕ ವಾಣಿಜ್ಯ ಸಮರವು ದೇಶದ ಷೇರುಪೇಟೆಗಳ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಚೀನಾದ ಸರಕುಗಳ ಮೇಲೆ ಹೊಸದಾಗಿ ಆಮದು ಸುಂಕ ಹೇರುವುದಾಗಿ ಘೋಷಿಸಿದ್ದಾರೆ. ಇದೇ 24 ರಿಂದ ಹೊಸ ಸುಂಕ ಅನ್ವಯಿಸಲಿದೆ. ಇದು ಹೂಡಿಕೆ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ 47 ಪೈಸೆ ಇಳಿಕೆಯಾಗಿ 72.98ರಂತೆ ವಹಿವಾಟು ನಡೆಸಿತು. ಇದೂ ಸಹ ಸೂಚ್ಯಂಕದ ಇಳಿಕೆಗೆ ಕಾರಣವಾಗಿದೆ.

ಕರಗುತ್ತಿದೆ ಹೂಡಿಕೆದಾರರ ಸಂಪತ್ತು: ಮುಂಬೈ ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟು ಮುಂದುವರಿದಿದೆ. ಎರಡು ದಿನಗಳಲ್ಲಿ ಹೂಡಿಕೆದಾರರ ಸಂಪತ್ತು ₹ 2.72 ಲಕ್ಷ ಕೋಟಿಯಷ್ಟು ಕರಗಿದೆ.

ಷೇರುಪೇಟೆಯ ಬಂಡವಾಳ ಮೌಲ್ಯ ₹ 153 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಇದಕ್ಕೂ ಹಿಂದಿನ ವಾರದ ವಹಿವಾಟಿನಲ್ಲಿ ಎರಡು ದಿನಗಳಲ್ಲಿ ಹೂಡಿಕೆದಾರರ ಸಂಪತ್ತು ₹ 4.14 ಲಕ್ಷ ಕೋಟಿಯಷ್ಟು ನಷ್ಟವಾಗಿತ್ತು.

ಕಚ್ಚಾ ತೈಲ ದರ ಏರಿಕೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿದೆ.  ಮಂಗಳವಾರ ಬ್ರೆಂಟ್‌ ಕಚ್ಚಾ ತೈಲ ದರ 83 ರೂಪಾಯಿ ಹೆಚ್ಚಾಗಿ ಒಂದು ಬ್ಯಾರೆಲ್‌ಗೆ ₹ 5,779ರಂತೆ (79.19 ಡಾಲರ್‌) ಮಾರಾಟವಾಯಿತು.

 

***

ವಹಿವಾಟಿನ ವಿವರ

799

ಎರಡು ವಹಿವಾಟು ದಿನಗಳಲ್ಲಿ ಸೂಚ್ಯಂಕದ ಇಳಿಕೆ

236 ಅಂಶ

ಎರಡು ವಹಿವಾಟು ದಿನಗಳಲ್ಲಿ ನಿಫ್ಟಿ ಇಳಿಕೆ

₹ 180 ಕೋಟಿ

ಸೋಮವಾರ ದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಿರುವ ಷೇರುಗಳ ಮೌಲ್ಯ

₹ 106 ಕೋಟಿ

ಸೋಮವಾರ ವಿದೇಶಿ ಹೂಡಿಕೆದಾರರು ಮಾರಾಟ ಮಾಡಿರುವ ಷೇರುಗಳ ಮೌಲ್ಯ

 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !