6 ವಾರಗಳ ಗೂಳಿ ಓಟಕ್ಕೆ ತಡೆ

7

6 ವಾರಗಳ ಗೂಳಿ ಓಟಕ್ಕೆ ತಡೆ

Published:
Updated:

ಮುಂಬೈ: ಕಚ್ಚಾ ತೈಲ ದರ ಏರಿಕೆ, ರೂಪಾಯಿ ಮೌಲ್ಯದ ದಾಖಲೆ ಕುಸಿತದಿಂದಾಗಿ ಸತತ ಆರು ವಾರಗಳ ಗೂಳಿ ಓಟಕ್ಕೆ ತಡೆ ಬಿದ್ದಿದೆ. ಷೇರುಪೇಟೆಗಳ ವಾರದ ವಹಿವಾಟು ಇಳಿಮುಖವಾಗಿ ಅಂತ್ಯವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 255 ಅಂಶ ಇಳಿಕೆ ಕಂಡು 38,389 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 91 ಅಂಶ ಇಳಿಕೆಯಾಗಿ 11,589 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿದೆ

ರೂಪಾಯಿ ಕುಸಿತದ ಪರಿಣಾಮ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಕುಸಿತ ಕಂಡಿದೆ. 72ರ ಗಡಿ ದಾಟಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 72.11ಕ್ಕೆ ಇಳಿಕೆಯಾಗಿತ್ತು. ಇದು ದೇಶದ ಆರ್ಥಿಕತೆ ಮತ್ತು ಪ್ರಮುಖ ಕಂಪನಿಗಳ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಮೂಡಿಸಿದೆ. ಹೀಗಾಗಿ ಐದುವಾರಗಳ ವಹಿವಾಟಿನಲ್ಲಿ ಮೂರು ದಿನಗಳಲ್ಲಿ ಅತಿಯಾದ ಮಾರಾಟದ ಒತ್ತಡ ಕಂಡುಬಂದಿತ್ತು. ಗುರುವಾರ ಮತ್ತು ಶುಕ್ರವಾರ ಸೂಚ್ಯಂಕಗಳು ಚೇತರಿಸಿಕೊಂಡರೂ ವಾರದ ವಹಿವಾಟು ನಷ್ಟದಿಂದ ಹೊರಬರಲಾಗಲಿಲ್ಲ.

ಕಚ್ಚಾ ತೈಲ ದರ ಏರಿಕೆ, ತಯಾರಿಕೆ ಮತ್ತು ಸೇವಾ ವಲಯದ ಪ್ರಗತಿಯಲ್ಲಿನ ಇಳಿಕೆಯು ನಕಾರಾತ್ಮಕ ಚಟುವಟಿಕೆಯನ್ನು ಹೆಚ್ಚಿಸಿತು.

ಎಫ್‌ಎಂಸಿಜಿ, ಗ್ರಾಹಕ ಬಳಕೆ ವಸ್ತುಗಳು, ರಿಯಲ್‌ ಎಸ್ಟೇಟ್‌, ಬ್ಯಾಂಕ್‌, ವಿದ್ಯುತ್‌, ತೈಲ ಮತ್ತು ಅನಿಲ, ವಾಹನ ಮತ್ತು ಭಾರಿ ಯಂತ್ರೋಪಕರಣ ವಲಯಗಳಲ್ಲಿ ಮಾರಾಟದ ಒತ್ತಡ ಕಂಡುಬಂದಿತು.

* 2,374 ಅಂಶ – ಹಿಂದಿನ ಆರು ವಾರಗಳಲ್ಲಿ ಸೂಚ್ಯಂಕದ ಏರಿಕೆ

* ₹1,917 ಕೋಟಿ – ವಿದೇಶಿ ಬಂಡವಾಳ ಹೊರಹರಿವು

* ₹17,441 ಕೋಟಿ – ಬಿಎಸ್‌ಇ ವಾರದ ವಹಿವಾಟು ಮೊತ್ತ

* ₹1.80 ಲಕ್ಷ ಕೋಟಿ – ನಿಫ್ಟಿ ವಾರದ ವಹಿವಾಟು ಮೊತ್ತ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !