ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19: 202 ಅಂಶ ಇಳಿದ ಸೆನ್ಸೆಕ್ಸ್

Last Updated 23 ಏಪ್ರಿಲ್ 2021, 16:16 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್–19ಕ್ಕೆ ಸಂಬಂಧಿಸಿದ ಕೆಟ್ಟ ಸುದ್ದಿಗಳು ಶುಕ್ರವಾರ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕಗಳು ಕುಸಿತ ಕಾಣುವಂತೆ ಮಾಡಿದವು. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ನಕಾರಾತ್ಮಕ ವಹಿವಾಟುಗಳು ಕೂಡ ಸೂಚ್ಯಂಕಗಳು ಕುಸಿಯುವಂತೆ ಮಾಡಿದವು.

ಸೆನ್ಸೆಕ್ಸ್‌ 202 ಅಂಶ, ನಿಫ್ಟಿ 64 ಅಂಶ ಕುಸಿತ ಕಂಡವು. ಇದರಿಂದಾಗಿ ಈ ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಒಟ್ಟು 953 ಅಂಶ, ನಿಫ್ಟಿ ಒಟ್ಟು 276 ಅಂಶ ಇಳಿಕೆ ಕಂಡಂತೆ ಆಗಿದೆ.

‘ಭಾರತವು ಕೊರೊನಾ ವೈರಾಣುವಿನ ಕೇಂದ್ರಬಿಂದುವಿನಂತೆ ಆಗಿದೆ. ವಿದೇಶಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಇದು ಸೂಚ್ಯಂಕಗಳ ಮೇಲೆ ಪ್ರಭಾವ ಬೀರಿದೆ’ ಎಂದು ಕೋಟಕ್ ಸೆಕ್ಯುರಿಟೀಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ರುಸ್ಮಿಕ್ ಓಜಾ ಹೇಳಿದ್ದಾರೆ.

‘ಬೇರೆ ಬೇರೆ ರಾಜ್ಯಗಳಲ್ಲಿ ಜಾರಿಗೆ ಬಂದಿರುವ ಲಾಕ್‌ಡೌನ್‌ ಕ್ರಮಗಳು ಬೇಡಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಉಂಟುಮಾಡಲಿವೆ. ಹಲವು ಕೆಟ್ಟ ಸಂಗತಿಗಳು ಒಟ್ಟಾಗಿ ಎದುರಾಗಿವೆ. ಇವು ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಲ್ಲವು’ ಎಂದು ಓಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 0.06ರಷ್ಟು ಕಡಿಮೆ ಆಗಿ ಪ್ರತಿ ಬ್ಯಾರೆಲ್‌ಗೆ 65.36 ಅಮೆರಿಕನ್‌ ಡಾಲರ್‌ನಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT