ಶುಕ್ರವಾರ, ಡಿಸೆಂಬರ್ 6, 2019
24 °C

ಫಲ ನೀಡಿದ ವಿಶೇಷ ವಹಿವಾಟು

Published:
Updated:
Deccan Herald

ಮುಂಬೈ:  ಷೇರುಪೇಟೆಯಲ್ಲಿ ಮುಹೂರ್ತದ ವಹಿವಾಟು ಸಕಾರಾತ್ಮಕವಾಗಿ ಅಂತ್ಯವಾಗಿದೆ.

ಬುಧವಾರ ನಡೆದ ವಿಶೇಷ ವಹಿವಾಟಿನಲ್ಲಿ ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಾಣುವ ಮೂಲಕ ವಿಶೇಷ ವಹಿವಾಟು ಅಂತ್ಯವಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 246 ಅಂಶ ಏರಿಕೆ ಕಂಡು 35,239 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಎಲ್ಲಾ ವಲಯಗಳಲ್ಲಿಯೂ ಉತ್ತಮ ಖರೀದಿ ಚಟುವಟಿಕೆ ನಡೆಯಿತು. ವಾಹನ, ತೈಲ ಮತ್ತು ಅನಿಲ, ಎಫ್ಎಂಸಿಜಿ, ಐಟಿ ಮತ್ತು ತಂತ್ರಜ್ಞಾನ ಉತ್ತಮ ಗಳಿಕೆ ಕಂಡುಕೊಂಡಿವೆ.

ಬಿಎಸ್‌ಇ ಮಧ್ಯಮ ಶ್ರೇಣಿ ಸೂಚ್ಯಂಕ ಶೇ 0.62 ರಷ್ಟು ಹಾಗೂ ಕೆಳ ಮಧ್ಯಮ ಶ್ರೇಣಿ ಸೂಚ್ಯಂಕ ಶೇ 1.08ರಷ್ಟು ಏರಿಕೆ ಕಂಡಿವೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 68 ಅಂಶ ಹೆಚ್ಚಾಗಿ 10,598 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ವಿಶೇಷ ವಹಿವಾಟು ಅವಧಿಯಲ್ಲಿ ಹೂಡಿಕೆದಾರರು ಹೊಸ ಖಾತೆ ತೆರೆದು ಖರೀದಿ ನಡೆಸಿದ್ದರಿಂದ ಸೂಚ್ಯಂಕಗಳು ಏರಿಕೆ ಕಂಡಿವೆ ಎಂದು ದಲ್ಲಾಳಿಗಳು ಹೇಳಿದ್ದಾರೆ.

ಬಲಿಪಾಡ್ಯಮಿ ಪ್ರಯುಕ್ತ ಗುರುವಾರ ಷೇರುಪೇಟೆ ವಹಿವಾಟು ನಡೆಯುವುದಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು