ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ಸೆನ್ಸೆಕ್ಸ್; ನಿಫ್ಟಿ 8,500ಕ್ಕಿಂತ ಕಡಿಮೆ

Last Updated 18 ಮಾರ್ಚ್ 2020, 12:45 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಷೇರುಪೇಟೆಗಳು ಕೊರೊನಾ ವೈರಸ್‌ ಸೋಂಕಿನ ಆತಂಕದಲ್ಲಿ ಮಾರಾಟದ ಒತ್ತಡಕ್ಕೆ ಸಿಲುಕಿ 3 ವರ್ಷಗಳ ಹಿಂದಿನ ಮಟ್ಟ ತಲುಪಿವೆ. ಬುಧವಾರ ಆರಂಭದಲ್ಲಿ ಸಕಾರಾತ್ಮ ವಹಿವಾಟಿನ ಮೂಲಕ ಚೇತರಿಕೆ ಕಂಡಿದ್ದ ಸೆನ್ಸೆಕ್ಸ್‌, ದಿನದ ವಹಿವಾಟು ಅಂತ್ಯಕ್ಕೆ 29,000 ಅಂಶಗಳಿಗಿಂತ ಕುಸಿಯಿತು.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ, 498.25 ಅಂಶ (ಶೇ 5.56) ಇಳಿಕೆಯಾಗಿ 8,468.80 ಅಂಶ ತಲುಪಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 2,488.72 ಗಳಿಕೆ–ಇಳಿಕೆಯಲ್ಲಿ ವಹಿವಾಟು ಅಂತ್ಯಕ್ಕೆ 1,709.58 ಅಂಶ (ಶೇ 5.59) ಕುಸಿದು,28,869.51 ಅಂಶ ಮುಟ್ಟಿದೆ.

2017ರ ಜನವರಿಯಿಂದ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್‌ 29,000 ಅಂಶಗಳಿಗಿಂತ ಕಡಿಮೆಯಾಗಿದೆ. ಐಟಿಸಿ, ಒಎನ್‌ಜಿಸಿ ಹೊರತು ಪಡಿಸಿ ಮುಂಬೈ ಷೇರುಪೇಟೆ ಎಲ್ಲ ಷೇರುಗಳು ನಷ್ಟ ಅನುಭವಿಸಿದವು.

ಇಂಡಸ್‌ಇಂಡ್‌ ಬ್ಯಾಂಕ್‌ ಶೇ 23.90ರಷ್ಟು ಕಡಿಮೆಯಾಗಿ ಅತ್ಯಧಿಕ ಕುಸಿತ ಕಂಡಿತು. ಪವರ್‌ಗ್ರಿಡ್‌ ಶೇ 11.29, ಕೊಟ್ಯಾಕ್‌ ಬ್ಯಾಂಕ್‌ ಶೇ 11.23, ಬಜಾಜ್‌ ಫೈನಾನ್ಸ್‌ ಶೇ 11.11, ಎಚ್‌ಡಿಎಫ್‌ಸಿ ಬ್ಯಾಂಕ್‌ ಶೇ 9.92 ಹಾಗೂ ಎನ್‌ಟಿಪಿಸಿ ಶೇ 8.08ರಷ್ಟು ಕುಸಿದಿದೆ.

ಬ್ಯಾಂಕಿಂಗ್‌ ಮತ್ತು ಟೆಲಿಕಾಂ ವಲಯದ ಷೇರುಗಳು ತೀವ್ರ ಮಾರಾಟ ಒತ್ತಡಕ್ಕೆ ಸಿಲುಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT