ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶ, ಜಾರ್ಖಂಡ್: ಸಿಡಿಲಿನ ಅಬ್ಬರ, ಭಾರಿ ಮಳೆಗೆ 20 ಸಾವು

Last Updated 29 ಮೇ 2018, 10:03 IST
ಅಕ್ಷರ ಗಾತ್ರ

ರಾಂಚಿ/ಲಖನೌ: ಜಾರ್ಖಂಡ್  ಮತ್ತು ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಸಿಡಿಲು ಮಳೆಗೆ 20 ಮಂದಿ ಸಾವಿಗೀಡಾಗಿದ್ದಾರೆ.
ಸೋಮವಾರ ಜಾರ್ಖಂಡ್‍ನಲ್ಲಿ ಸುರಿದ ಮಳೆಗೆ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಕಳೆದ 48 ಗಂಟೆಗಳಲ್ಲಿ ಮಳೆಯಿಂದಾಗಿ ಸಾವಿಗೀಡಾದವರ ಸಂಖ್ಯೆ 22 ಆಗಿದೆ.

ಬಲ್ಲಮೂಲಗಳ ಪ್ರಕಾರ ಜಾರ್ಖಂಡ್‍ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ  ಈ ತಿಂಗಳು 29 ಮಂದಿ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದಲ್ಲಿ ಗುಡುಗು ಸಿಡಿಲಿಗೆ 9 ಮಂದಿ ಸಾವಿಗೀಡಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಸಿಡಿಲು ಬಡಿದು ಉನ್ನಾವೊ ಜಿಲ್ಲೆಯಲ್ಲಿ 5 ಮಂದಿ ಸಾವಿಗೀಡಾಗಿದ್ದು 4 ಮಂದಿಗೆ ಗಾಯಗಳಾಗವೆ. ಅದೇ ವೇಳೆ ಕಾನ್ಪುರ್ ಮತ್ತು ರಾಯ್ ಬರೇಲಿಯಲ್ಲಿ ಇಬ್ಬರಿಗೆ ಗಾಯಗಳಾಗಿವೆ.

ಏತನ್ಮಧ್ಯೆ, ಜಾರ್ಖಂಡ್‍ನಲ್ಲಿ ಭಾನುವಾರದಿಂದ ಭಾರಿ ಬಿರುಗಾಳಿಯೊಂದಿಗೆ ಮಳೆ ಸುರಿಯತೊಡಗಿದೆ. ಸಿಡಿಲು ಬಡಿದು ರಾಂಚಿಯಲ್ಲಿ ಮೂರು ಮಂದಿ ಸಾವಿಗೀಡಾಗಿದ್ದು ಪಲಮು ಮತ್ತು ರಾಮನಗರ ಜಿಲ್ಲೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ, ಛಾತ್ರಾ, ಹಜಾರಿಬಾಗ್, ಲೊಹರ್‍ದಾಗ ಮತ್ತು ಬೊಕಾರೋದಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT