ಸೋಮವಾರ, ನವೆಂಬರ್ 18, 2019
24 °C

ಹೂಡಿಕೆದಾರರ ಸಂಪತ್ತು ₹ 1.59 ಲಕ್ಷ ಕೋಟಿ ಹೆಚ್ಚಳ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಐದು ದಿನಗಳಿಂದ ಸಕಾರಾತ್ಮಕ ವಹಿವಾಟು ನಡೆಯುತ್ತಿದ್ದು, ಹೂಡಿಕೆದಾರರ ಸಂಪತ್ತಿನಲ್ಲಿಯೂ ಏರಿಕೆಯಾಗುತ್ತಿದೆ. 

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 453 ಅಂಶ ಜಿಗಿತ ಕಂಡು 39,052 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಂಡಿದೆ.

ದಿನದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 1.59 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 146.31 ಲಕ್ಷ ಕೋಟಿಗಳಿಂದ ₹ 147.90 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 122 ಅಂಶ ಹೆಚ್ಚಾಗಿ 11,586 ಅಂಶಗಳಿಗೆ ತಲುಪಿದೆ.

ಗಳಿಕೆ: ಯೆಸ್‌ ಬ್ಯಾಂಕ್‌ ಷೇರುಗಳು ಶೇ 15.19ರಷ್ಟು ಹೆಚ್ಚಾಗಿವೆ. ಟಾಟಾ ಮೋಟರ್ಸ್, ಇಂಡಸ್‌ಇಂಡ್‌ ಬ್ಯಾಂಕ್‌, ಎಸ್‌ಬಿಐ, ಬಜಾಜ್‌ ಆಟೊ, ಏಷ್ಯನ್‌ ಪೇಂಟ್ಸ್‌, ಆ್ಯಕ್ಸಿಸ್‌ ಬ್ಯಾಂಕ್‌, ಟಾಟಾ ಸ್ಟೀಲ್ ಮತ್ತು ಮಾರುತಿ ಕಂಪನಿಯ ಷೇರುಗಳು ಶೇ 9.82ರವರೆಗೂ ಏರಿಕೆ ಕಂಡುಕೊಂಡಿವೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 27 ಪೈಸೆ ಹೆಚ್ಚಾಗಿ, ಒಂದು ಡಾಲರ್‌ಗೆ ₹ 71.16ರಂತೆ ವಿನಿಮಯಗೊಂಡಿತು.

ಪ್ರತಿಕ್ರಿಯಿಸಿ (+)