ಮಂಗಳವಾರ, ಸೆಪ್ಟೆಂಬರ್ 21, 2021
29 °C

ರಿಲಯನ್ಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಗಳಿಕೆ: ಸೂಚ್ಯಂಕ 748 ಅಂಶ ಜಿಗಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳ ಮೌಲ್ಯ ಹೆಚ್ಚಳದಿಂದಾಗಿ ಷೇರುಪೇಟೆಗಳು ಮಂಗಳವಾರ ಸಕಾರಾತ್ಮಕ ಹಾದಿಗೆ ಮರಳಿದವು.

ಸೋಮವಾರ 667 ಅಂಶ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಮಂಗಳವಾರ 748 ಅಂಶ ಜಿಗಿಯಿತು. 37,687 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 204 ಅಂಶ ಹೆಚ್ಚಾಗಿ 11,095 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಶಶಿಧರ್‌ ಜಗದೀಶನ್‌ ಅವರನ್ನು ನೇಮಿಸಲು ಆರ್‌ಬಿಐ ಒಪ್ಪಿಗೆ ನೀಡಿದೆ. ಇದರಿಂದಾಗಿ ಷೇರುಗಳ ಮೌಲ್ಯ ಹೆಚ್ಚಾಗಿದೆ.

ಕೆಲವು ನಿರ್ದಿಷ್ಟ ಷೇರುಗಳ ಗಳಿಕೆಯೇ ಸೂಚ್ಯಂಕ ಏರಿಕೆಗೆ ಪ್ರಮುಖ ಕಾರಣ. ವಿದೇಶಿ ಬಂಡವಾಳ ಒಳಹರಿವು ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ಸಕಾರಾತ್ಮಕ ವಹಿವಾಟು ಸಹ ದೇಶಿ ಷೇರುಪೇಟೆಯ ಮೇಲೆ ಪ್ರಭಾವ ಬೀರಿವೆ ಎಂದು ವರ್ತಕರು ವಿಶ್ಲೇಷಣೆ ಮಾಡಿದ್ದಾರೆ.

‘ಮಧ್ಯಮ ಶ್ರೇಣಿಯ ಕಂಪನಿಗಳ ಷೇರು ಖರೀದಿಗೆ ಗಮನ ಹರಿಸಿದ್ದು ಪ್ರಮುಖ ಬೆಳವಣಿಗೆಯಾಗಿದೆ’ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಎಸ್‌.ರಂಗನಾಥನ್‌ ಹೇಳಿದ್ದಾರೆ.

₹ 2 ಲಕ್ಷ ಕೋಟಿ ಹೆಚ್ಚಳ: ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 2 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 148 ಲಕ್ಷ ಕೋಟಿಗೆ ತಲುಪಿದೆ.

1.23% - ಬಿಎಸ್‌ಇ ಮಧ್ಯಮ ಮತ್ತು ಸಣ್ಣ ಶ್ರೇಣಿ ಸೂಚ್ಯಂಕಗಳ ಏರಿಕೆ

1.61% -ಬ್ರೆಂಟ್‌ ತೈಲ ದರ ಇಳಿಕೆ

ಗಳಿಕೆ (%)

ರಿಲಯನ್ಸ್‌ - 7.10

ಎಚ್‌ಡಿಎಫ್‌ಸಿ -3.94

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು