ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ, ಎಫ್‌ಎಂಸಿಜಿ ಷೇರು ಮೌಲ್ಯ ಇಳಿಕೆ: 5 ದಿನಗಳ ಸೂಚ್ಯಂಕದ ಓಟಕ್ಕೆ ತಡೆ

Last Updated 22 ಜುಲೈ 2020, 16:02 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಐದು ದಿನಗಳ ಸೂಚ್ಯಂಕದ ಓಟಕ್ಕೆ ಬುಧವಾರ ತೆರೆ ಬಿದ್ದಿದೆ. ಮಾಹಿತಿ ತಂತ್ರಜ್ಞಾನ, ಎಫ್‌ಎಂಸಿಜಿ ಮತ್ತು ಹಣಕಾಸು ವಲಯದ ಷೇರುಗಳ ಮಾರಾಟದಿಂದ ನಕಾರಾತ್ಮಕವಾಗಿ ವಹಿವಾಟು ಅಂತ್ಯಗೊಂಡಿದೆ.

599 ಅಂಶಗಳವರೆಗೂ ಏರಿಳಿತ ಕಂಡ ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಅಂತಿಮವಾಗಿ 59 ಅಂಶ ಇಳಿಕೆ ಕಂಡಿತು. 37,871 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 30 ಅಂಶ ಇಳಿಕೆಯಾಗಿ 11,132 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ನಷ್ಟ: ದಿನದ ವಹಿವಾಟಿನಲ್ಲಿ ಎಚ್‌ಯುಎಲ್‌ ಷೇರು ಶೇಕಡ 3.06ರಷ್ಟು ಗರಿಷ್ಠ ನಷ್ಟ ಕಂಡಿತು. ಟಾಟಾ ಸ್ಟೀಲ್‌, ಮಾರುತಿ, ಇಂಡಸ್‌ಇಂಡ್‌ ಬ್ಯಾಂಕ್‌, ಇನ್ಫೊಸಿಸ್‌, ಎಲ್‌ಆ್ಯಂಡ್‌ಟಿ, ಟಿಸಿಎಸ್‌ ಮತ್ತು ಏಷ್ಯನ್‌ ಪೇಂಟ್ಸ್‌ ಷೇರುಗಳು ಶೇ 2.51ರವರೆಗೂ ಇಳಿಕೆ ಕಂಡಿವೆ.

ಗಳಿಕೆ: ಆ್ಯಕ್ಸಿಸ್ ಬ್ಯಾಂಕ್‌, ಟೈಟಾನ್‌, ಪವರ್‌ಗ್ರಿಡ್‌, ಎನ್‌ಟಿಪಿಸಿ, ಐಟಿಸಿ ಮತ್ತು ರಿಲಯನ್ಸ್‌ ಷೇರುಗಳು ಶೇ 7.36ರವರೆಗೂ ಏರಿಕೆ ಕಂಡಿವೆ.

ಲಾಭ ಗಳಿಕೆ ಉದ್ದೇಶದ ವಹಿವಾಟು ನಡೆದಿರುವುದು ಸೂಚ್ಯಂಕದ ಇಳಿಕೆಗೆ ಕಾರಣವಾಗಿದೆ. ಜಾಗತಿಕ ಷೇರುಪೇಟೆಗಳ ನಕಾರಾತ್ಮಕ ಚಲನೆಯೂ ಪರಿಣಾಮ ಬೀರಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT