ಸೋಮವಾರ, ಜೂನ್ 1, 2020
27 °C

ಎಚ್‌ಡಿಎಫ್‌ಸಿ ಷೇರು ಗಳಿಕೆ: ಸೆನ್ಸೆಕ್ಸ್‌ 622 ಅಂಶ ಚೇತರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಷೇರುಪೇಟೆ ವಹಿವಾಟು– ಸಾಂಕೇತಿಕ ಚಿತ್ರ

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಹಾಗೂ ಎಚ್‌ಡಿಎಫ್‌ಸಿ ಷೇರುಗಳ ಖರೀದಿಯಲ್ಲಿ ಉತ್ಸಾಹ ಕಂಡು ಬಂದಿದ್ದರಿಂದ ಬುಧವಾರ ಷೇರುಪೇಟೆಗಳಲ್ಲಿ ಚೇತರಿಕೆ ಕಂಡು ಬಂದಿತು. 

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 622.44 ಅಂಶ (ಶೇ 2.06) ಏರಿಕೆಯಾಗಿ 30,818.61 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ  187.45 ಅಂಶ (ಶೇ 2.11ರಷ್ಟು) ಗಳಿಕೆಯಾಗಿ 9,066.55 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿದೆ. 

ಸೆನ್ಸೆಕ್ಸ್‌ ಕಂಪನಿಗಳ ಪೈಕಿ ಎಚ್‌ಡಿಎಫ್‌ಸಿ ಷೇರು ಬೆಲೆ ಅತಿ ಹೆಚ್ಚು ಶೇ 5ರಷ್ಟು ಹೆಚ್ಚಳವಾಗಿದೆ. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಎಲ್‌ ಆ್ಯಂಡ್‌ ಟಿ, ಟಾಟಾ ಸ್ಟೀಲ್‌, ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಹಾಗೂ ಸನ್‌ ಫಾರ್ಮಾ ಷೇರುಗಳು ಗಳಿಕೆ ದಾಖಲಿಸಿವೆ. 

ಇಂಡಸ್‌ಇಂಡ್‌ ಬ್ಯಾಂಕ್‌, ಹೀರೊ ಮೊಟೊಕಾರ್ಪ್‌, ಭಾರ್ತಿ ಏರ್‌ಟೆಲ್‌ ಹಾಗೂ ಏಷಿಯನ್‌ ಪೇಂಟ್ಸ್‌ ಷೇರುಗಳು ನಷ್ಟ ಅನುಭವಿಸಿವೆ. 

ಭಾರತದಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು  ಷೇರುಪೇಟೆ ಹೂಡಿಕೆದಾರರಲ್ಲಿ ಚಂಚಲತೆ ಮೂಡಿಸಿದೆ. ಚೀನಾದ ಶಾಂಘೈ ಷೇರುಪೇಟೆ ಕುಸಿತ ಕಂಡಿದ್ದರೆ, ಹಾಂಕಾಂಗ್‌, ಟೋಕಿಯೊ ಹಾಗೂ ಸೋಲ್‌ ಷೇರುಪೇಟೆಗಳಲ್ಲಿ ಚೇತರಿಕೆ ದಾಖಲಾಗಿದೆ. 

ಡಾಲರ್‌ ಎದುರು ರೂಪಾಯಿ ಮೌಲ್ಯ 14 ಪೈಸೆ ಕಡಿಮೆಯಾಗಿ ಪ್ರತಿ ಡಾಲರ್‌ಗೆ ₹75.80 ತಲುಪಿದೆ. ಅಂತರರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್‌ ಕಚ್ಚಾ ತೈಲ ಫ್ಯೂಚರ್ಸ್‌ ಶೇ 1.24ರಷ್ಟು ಹೆಚ್ಚಳವಾಗಿ ಪ್ರತಿ ಬ್ಯಾರೆಲ್‌ಗೆ 35.08 ಡಾಲರ್‌ ಆಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು