ಗುರುವಾರ , ಜನವರಿ 23, 2020
26 °C

ಷೇರುಪೇಟೆ ಸೂಚ್ಯಂಕದ ಓಟಕ್ಕೆ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ : ಷೇರುಪೇಟೆ ಸೂಚ್ಯಂಕದ ನಾಲ್ಕು ವಹಿವಾಟಿನ ದಿನಗಳ ಓಟಕ್ಕೆ ಬುಧವಾರ ತಡೆ ಬಿದ್ದಿತು.

ಬ್ಯಾಂಕ್‌ ಷೇರುಗಳಲ್ಲಿ ಕಂಡು ಬಂದ ಮಾರಾಟ ಒತ್ತಡದಿಂದಾಗಿ ಸಂವೇದಿ ಸೂಚ್ಯಂಕ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕುಸಿತ ಕಂಡವು.

ದಿನದ ವಹಿವಾಟಿನ ಉದ್ದಕ್ಕೂ ತೀವ್ರ ಏರಿಳಿತ ಕಂಡು ಬಂದಿತು. ಅಂತಿಮವಾಗಿ ಬಿಎಸ್‌ಇ 80 ಅಂಶ ಕುಸಿತ ಕಂಡು 41,872 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಇಂಡಸ್‌ ಇಂಡ್‌ ಬ್ಯಾಂಕ್‌ (ಶೇ 5.44) ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರು ಶೇ 1.21ರವರೆಗೆ ಕುಸಿತ ಕಂಡವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು