ಬೆಂಗಳೂರು: ದೇಶದ ಷೇರುಪೇಟೆಗಳಲ್ಲಿ ವಿದೇಶಿ ಬಂಡವಾಳ ಹರಿವು ಮುಂದುವರಿದಿದೆ. ಇದರಿಂದಾಗಿ ಗರಿಷ್ಠ ಮಟ್ಟದ ವಹಿವಾಟು ನಡೆಯುತ್ತಿದೆ.

ವಾರದ ವಹಿವಾಟು ಸಕಾರಾತ್ಮಕ ಮಟ್ಟದಲ್ಲಿ ಅಂತ್ಯವಾಗಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 1,019 ಅಂಶಗಳ ಏರಿಕೆ ಕಂಡು 46,099 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಂಡಿದೆ.

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 179.48 ಲಕ್ಷ ಕೋಟಿಗಳಿಂದ ₹ 182.78 ಲಕ್ಷ ಕೋಟಿಗಳಿಗೆ ₹ 3.3 ಲಕ್ಷ ಕೋಟಿಗಳಷ್ಟು ಏರಿಕೆ ಕಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ, ವಾರದ ವಹಿವಾಟಿನಲ್ಲಿ 255 ಅಂಶಗಳ ಏರಿಕೆ ಕಂಡು 13,513 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ವಾರದ ವಹಿವಾಟಿನಲ್ಲಿ 16 ಪೈಸೆಗಳಷ್ಟು ಹೆಚ್ಚಾಗಿದೆ.

ಕೋವಿಡ್–19ಗೆ ಲಸಿಕೆ ಲಭ್ಯವಾಗುತ್ತಿರುವುದು ಹಾಗೂ ಆರ್ಥಿಕ ಚೇತರಿಕೆಗೆ ಅಮೆರಿಕದಿಂದ ಹೆಚ್ಚುವರಿ ಉತ್ತೇಜನ ಕೊಡುಗೆ ಲಭ್ಯವಾಗುವ ಭರವಸೆಯು ರೂಪಾಯಿ ಮೌಲ್ಯದ ಮೇಲೆ ಪ್ರಭಾವ ಬೀರುತ್ತಿವೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಮುಂದಿನವಾರ ಸಭೆ ಸೇರಲಿದ್ದು, ಬಡ್ಡಿದರ ಪರಾಮರ್ಶೆ ನಡೆಸಲಿದೆ. ಇದು ಹೂಡಿಕೆ ಚಟುವಟಿಕೆಯನ್ನು ನಿರ್ಧರಿಸಲಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.