ಸತತ ಆರನೇ ದಿನವೂ ಗಳಿಕೆ

7
ರೂಪಾಯಿ ಮೌಲ್ಯ ವೃದ್ಧಿ, ಕಚ್ಚಾ ತೈಲ ದರ ಇಳಿಕೆ ಪ್ರಭಾವ

ಸತತ ಆರನೇ ದಿನವೂ ಗಳಿಕೆ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಆರನೇ ವಹಿವಾಟು ಅವಧಿಯಲ್ಲಿಯೂ ಸಕಾರಾತ್ಮಕ ವಹಿವಾಟು ನಡೆಯಿತು.

ಡಾಲರ್‌ ಎದುರು ರೂಪಾಯಿ ಮೌಲ್ಯ ವೃದ್ಧಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯು ಸೂಚ್ಯಂಕಗಳ ಏರುಮುಖ ಚಲನೆಗೆ ಬೆಂಬಲ ನೀಡಿದವು.

ಔಷಧ, ಲೋಹ ಮತ್ತು ಭಾರಿ ಯಂತ್ರೋಪಕರಣ ವಲಯದ ಷೇರುಗಳು ಉತ್ತಮ ಗಳಿಕೆ ಕಂಡುಕೊಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 77 ಅಂಶ ಹೆಚ್ಚಾಗಿ 36,347 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ‌

ವಹಿವಾಟಿನ ಆರಂಭದಲ್ಲಿ 329 ಅಂಶಗಳವರೆಗೂ ಇಳಿಕೆ ಕಂಡಿತ್ತು. ನಂತರ ಖರೀದಿ ಚಟುವಟಿಕೆ ಹೆಚ್ಚಾದ ಕಾರಣ ಚೇತರಿಸಿಕೊಂಡಿತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 20 ಅಂಶ ಹೆಚ್ಚಾಗಿ 10,908 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !