ಸೋಮವಾರ, ಅಕ್ಟೋಬರ್ 21, 2019
21 °C
ಕರಡಿ ಹಿಡಿತದಿಂದ ಹೊರಬಂದ ಗೂಳಿ

ಆರು ದಿನಗಳ ಬಳಿಕ ಷೇರುಪೇಟೆ ವಹಿವಾಟು ಚೇತರಿಕೆ

Published:
Updated:

ಮುಂಬೈ: ದೇಶದ ಷೇರುಪೇಟೆಗಳು ಆರು ದಿನಗಳ ಬಳಿಕ ಚೇತರಿಕೆ ಹಾದಿಗೆ ಮರಳಿವೆ. ಬುಧವಾರದ ವಹಿವಾಟಿನಲ್ಲಿ ಕರಡಿ ಹಿಡಿತದಿಂದ ಹೊರಬಂದು ಗೂಳಿ ಉತ್ಸಾಹದಿಂದ ಓಡಿತು. ಇದರಿಂದ ಸಕಾರಾತ್ಮಕ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯಗೊಂಡಿದೆ.

ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳು ಉತ್ತಮ ಗಳಿಕೆ ಕಂಡುಕೊಂಡಿದ್ದರಿಂದ ಸೂಚ್ಯಂಕಗಳು ಏರಿಕೆ ಕಂಡುಕೊಂಡಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 646 ಅಂಶಗಳಷ್ಟು ಜಿಗಿತ ಕಂಡು 38,178 ಅಂಶಗಳಿಗೆ ತಲುಪಿತು. ದಿನದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 1.66 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 142.26 ಲಕ್ಷ ಕೋಟಿಗಳಿಂದ ₹ 143.92 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 11,300 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. 

Post Comments (+)